ಕಳೆದ ವರ್ಷದಲ್ಲಿನ ಮೊದಲ ಹಂತದ ಲಾಕ್ ಡೌನ್ನಲ್ಲಿ (2020ರ ಮಾರ್ಚ್ನಿಂದ ಮೇ) ಇದ್ದ ಗ್ರಾಹಕರ ಬೇಡಿಕೆಗೆ ಹೋಲಿಸಿದರೆ ಎರಡನೇ ಹಂತದ ಲಾಕ್ಡೌನ್ನಲ್ಲಿ (2021ರ ಮಾರ್ಚ್ನಿಂದ ಮೇ) ಗ್ರಾಹಕರ ಬೇಡಿಕೆ ಶೇ 200ಕ್ಕಿಂತ ಹೆಚ್ಚಾಗಿದೆ ಎಂಬುದು “Buy Now, Pay Lter” ಪ್ಲಾಟ್ಫಾರ್ಮ್ ಆದ ಝೆಸ್ಟ್ಮನಿ ಸಮೀಕ್ಷೆಯ ವರದಿಯಲ್ಲಿ ತಿಳಿದುಬಂದಿದೆ. ಗ್ರಾಹಕರ ಅಪ್ಲಿಕೇಷನ್ ಆದ ಬಿಎನ್ಪಿಎಲ್ (ಬೈ ನೌ ಪೇ ಲೇಟರ್- ಈಗ ಖರೀದಿಸಿ ನಂತರ ಪಾವತಿಸಿ) ಪ್ಲಾಟ್ಫಾರ್ಮ್ನಲ್ಲಿನ ಕ್ರೆಡಿಟ್ ಮಿತಿಯು 2021ರ ಮಾರ್ಚ್ನಿಂದ ಮೇ ಮಧ್ಯೆ 5 ಪಟ್ಟು ಹೆಚ್ಚಾಗಿದ್ದು, ಜಾಸ್ತಿ ಜನರು ತಮ್ಮ ಆರ್ಥಿಕತೆಯು ಉತ್ತಮವಾಗುವುದಕ್ಕೆ ಯೋಜನೆ ರೂಪಿಸಿದ್ದಾರೆ. ಬಿಎನ್ಪಿಎಲ್ ಸರ್ವೀಸಸ್ ಹೇಳಿಕೊಳ್ಳುವಂತೆ, ಮರುಪಾವತಿ, ಬೌನ್ಸ್ ರೇಟ್ ಉತ್ತಮವಾಗಿದ್ದು, ಗ್ರಾಹಕ ಬೇಡಿಕೆ ಚಿಗಿತುಕೊಂಡಿದೆ.
ಇ-ಕಾಮರ್ಸ್ ವಹಿವಾಟು ಈ ಅವಧಿಯಲ್ಲಿ ಶೇ 200ರಷ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ಫೋನ್ಗಳು, ಎಡಿಟೆಕ್, ಫ್ಯಾಷನ್, ಹೋಮ್ ಡೆಕೊರ್ ಮತ್ತಿತರ ವಿಭಾಗಗಳಲ್ಲಿ ಬೆಳವಣಿಗೆ ಕಂಡುಬಂದಿದೆ. ಮಾರುಕಟ್ಟೆ ದೃಷ್ಟಿಯಿಂದ ನೋಡಿದರೆ, ಬೆಂಗಳೂರು, ನವದೆಹಲಿ ಮತ್ತು ಮುಂಬೈ ಟಾಪ್ ಮೆಟ್ರೋಗಳಾಗಿದ್ದು, ಅತಿಹೆಚ್ಚು ಬಿಎನ್ಪಿಎಲ್ ವಹಿವಾಟುಗಳು ದಾಖಲಾಗಿವೆ. ಜೈಪುರ್, ವಿಶಾಖಪಟ್ಟಣ, ಲಖನೌ ಮೆಟ್ರೋಯೇತರ ಟಾಪ್ 3 ಮಾರುಕಟ್ಟೆಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಮಾರಾಟ ಆಗಬಹುದಾದ ಪ್ರಮುಖ ವಿಭಾಗಗಳು ಅಂದರೆ, ಸ್ಮಾರ್ಟ್ಫೋನ್ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಹೋಮ್ ಡೆಕೊರ್, ವಾಟರ್ ಪ್ಯೂರಿಫೈಯರ್ ಮತ್ತು ವಿಮಾನ ಟಿಕೆಟ್ಗಳು. ಸಮೀಕ್ಷೆ ತಿಳಿಸಿರುವಂತೆ, ಬಿಎನ್ಪಿಎಲ್ ಸರ್ವೀಸಸ್ ಆರಿಸುವಾಗ ಶೇ 62ರಷ್ಟು ಮಂದಿ ದೊಡ್ಡ ಮೊತ್ತದ ವಸ್ತುಗಳನ್ನು ಖರೀದಿಸುವುದಕ್ಕೆ ಯೋಜನೆ ರೂಪಿಸಿದ್ದಾರೆ.
ಕೊರೊನಾ ಕಾರಣಕ್ಕೆ ಉದ್ಭವಿಸಿದ ಆರ್ಥಿಕ ಸವಾಲುಗಳ ಹೊರತಾಗಿಯೂ ಬಿಎನ್ಪಿಎಲ್ ಪ್ಲಾಟ್ಫಾರ್ಮ್ಗಳು ಹೇಳಿಕೊಳ್ಳುವಂತೆ, ಮರುಪಾವತಿ ಸಾಮರ್ಥ್ಯ ಭಾರೀ ಪ್ರಮಾಣದಲ್ಲಿ ಜಾಸ್ತಿ ಆಗಿದೆ. ಹಲವು ಗ್ರಾಹಕರು ಮರುಪಾವತಿ ಅವಧಿಯೊಳಗೇ ಹಿಂತಿರುಗಿಸುತ್ತಿದ್ದಾರೆ. ಕಂಪೆನಿಯು ಶೇ 40ರಷ್ಟು ಬೌನ್ಸ್ರೇಟ್ ಚೇತರಿಕೆಗೆ ಸಾಕ್ಷಿಯಾಗಿದೆ. ಮೊದಲನೇ ಹಂತಕ್ಕೆ ಹೋಲಿಸಿದರೆ ಎರಡನೇ ಹಂತದ ಲಾಕ್ಡೌನ್ನಲ್ಲಿ ಎನ್ಪಿಎ ಶೇ 34ರಷ್ಟು ಕಡಿಮೆ ಆಗಿದೆ.
ಝೆಸ್ಟ್ಮನಿ ಸಿಇಒ ಮತ್ತು ಸಹ ಸಂಸ್ಥಾಪಕರಾದ ಚಾಪ್ಮನ್ ಮಾತನಾಡಿ, ಜನರು ಹಣಕಾಸು ಸೌಲಭ್ಯಕ್ಕೆ ಎದುರು ನೋಡುವುದು ಹೆಚ್ಚಾಗಿರುವುದರಿಂದ ಬೈ ನೌ ಪೇ ಲೇಟರ್ ಬೇಡಿಕೆ ಮುಂದುವರಿದಿದೆ. ಆ ಮೂಲಕ ತಮ್ಮ ಹಣಕಾಸು ನಿರ್ವಹಣೆ ಮಾಡುತ್ತಿದ್ದಾರೆ. ಪ್ರಬಲವಾದ ಮರುಪಾವತಿಯು ಪರಿಸ್ಥಿತಿಯು ಉತ್ತಮಗೊಳ್ಳುತ್ತಿರುವುದನ್ನು ಸೂಚಿಸುತ್ತಿದೆ. ಸ್ವಲ್ಪ ಮಟ್ಟಿಗೆ ಉದ್ಯೋಗ ಹಾಗೂ ಆದಾಯದ ಮೇಲೆ ಪರಿಣಾಮ ಬೀರಿದೆ. ಆಸಕ್ತಿಕರ ಸಂಗತಿ ಏನೆಂದರೆ, ಟಯರ್ 2 ಹಾಗೂ ಟಯರ್ 3 ಮಾರ್ಕೆಟ್ನಲ್ಲಿ ಎಲ್ಲ ಬಗೆಯಲ್ಲೂ ಪುನಶ್ಚೇತನ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ಸ್ನಿಂದ ಎಲೆಕ್ಟ್ರಿಕ್ ಬೈಕ್ ತನಕ ಎಲ್ಲ ವಿಭಾಗದಲ್ಲೂ ಬೆಳವಣಿಗೆ ಆಗಿದೆ ಎಂದಿದ್ದಾರೆ.
ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖಾಂಶಗಳು ಹೀಗಿವೆ:
1. ಮೊದಲನೇ ಹಂತದಲ್ಲಿನ ಕೊವಿಡ್ ಸನ್ನಿವೇಶಕ್ಕೆ ಹೋಲಿಸಿದರೆ ಈ ಬಾರಿ ತಮ್ಮ ಆರ್ಥಿಕತೆಯನ್ನು ನಿರ್ವಹಿಸುತ್ತಿರುವುದಾಗಿ ಶೇ 75ರಷ್ಟು ಮಂದಿ ಹೇಳಿದ್ದಾರೆ.
2. ಶೇ 66ರಷ್ಟು ಜನರು ತಮ್ಮ ಉದ್ಯಮ ಹಾಗೂ ಉದ್ಯೋಗ ಸ್ಥಿತಿಯ ಬಗ್ಗೆ ಕಳೆದ ವರ್ಷಕ್ಕಿಂತ ಈ ವರ್ಷ ಆಶಾದಾಯಕವಾಗಿ ಇರುವುದಾಗಿ ಹೇಳಿದ್ದಾರೆ.
3. ಶೇ 57ರಷ್ಟು ಜನರು ಹೇಳಿರುವ ಪ್ರಕಾರ, ಕೊವಿಡ್ ಎರಡನೇ ಹಂತದ ಲಾಕ್ಡೌನ್ನಲ್ಲಿ ಹಣಕಾಸು ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.
4. ಶೇ 62ರಷ್ಟು ಮಂದಿ ದೊಡ್ಡ ಮೊತ್ತದ ಖರೀದಿ ಮಾಡುವ ಯೋಜನೆ ಇರುವುದಾಗಿ ಹೇಳಿಕೊಂಡಿದ್ದು, ಪ್ರಬಲವಾದ ಬೇಡಿಕೆ ಮತ್ತು ಗ್ರಾಹಕರ ಭಾವನೆ ಸಕಾರಾತ್ಮಕವಾಗಿರುವುದನ್ನು ಸೂಚಿಸುತ್ತದೆ.
5. ಶೇ 53ರಷ್ಟು ಜನರು ಏಪ್ರಿಲ್ನಿಂದ ಜೂನ್ ಮಧ್ಯೆ ಬಿಎನ್ಪಿಎಲ್ (ಬೈ ನೌ ಪೇ ಲೇಟರ್) ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: World Bank: 2021ರಲ್ಲಿ ಭಾರತದ ಬೆಳವಣಿಗೆ ದರ ಶೇ 8.3ರಷ್ಟು ಅಂದಾಜು ಮಾಡಿದ ವಿಶ್ವಬ್ಯಾಂಕ್
(Compared To First Phase Of Corona Lockdown Consumer Demand Increased 200 Percent In Second Phase)