ಕ್ರಿಪ್ಟೋಕರೆನ್ಸಿ Dogecoin ಮೌಲ್ಯ ಶೇ 50ಕ್ಕೂ ಹೆಚ್ಚು ಏರಿಕೆ

ಕ್ರಿಪ್ಟೋಕರೆನ್ಸಿ Dogecoin ಮೌಲ್ಯ ಕಳೆದ ಕೆಲ ದಿನಗಳಲ್ಲಿ ಶೇ 50ರಷ್ಟು ಏರಿಕೆ ಕಂಡಿದೆ. ಆದರೆ ಈ ಬಗ್ಗೆ ಹೂಡಿಕೆ ಮಾಡುವ ಮುಂಚೆ ಎಚ್ಚರಿಕೆಯಿಂದ ಇರಬೇಕು ಎಂದು ವಿಶ್ಲೇಷಕರು ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿ Dogecoin ಮೌಲ್ಯ ಶೇ 50ಕ್ಕೂ ಹೆಚ್ಚು ಏರಿಕೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:May 05, 2021 | 7:29 PM

ವಿವಾದಾಸ್ಪದ ಕ್ರಿಪ್ಟೋಕರೆನ್ಸಿ Dogecoin ಮೌಲ್ಯ ಶೇ 50ಕ್ಕೂ ಹೆಚ್ಚು ಏರಿಕೆ ಕಂಡಿದ್ದು, ಅದರ ಮಾರುಕಟ್ಟೆ ಮೌಲ್ಯ 9000 ಕೋಟಿ ಅಮೆರಿಕನ್ ಡಾಲರ್​ನಷ್ಟಾಗಿದೆ. ಅಮೆರಿಕನ್ ಟೆಲಿವಿಷನ್ ಸ್ಕೆಚ್ ಕಾಮಿಡಿ ಮತ್ತು ವೆರೈಟಿ ಶೋ, ಸ್ಯಾಟರ್ಡೇ ನೈಟ್ ಲೈವ್ (SNL)ನಲ್ಲಿ ಶನಿವಾರ ಟೆಸ್ಲಾ ಕಂಪೆನಿಯ ಸ್ಥಾಪಕ ಎಲಾನ್ ಮಸ್ಕ್ ನಿರೂಪಕರಾಗಿ ಕಾಣಿಸಿಕೊಳ್ಳುವ ಮುನ್ನ ಈ ಬೆಳವಣಿಗೆ ಆಗಿದೆ. ಸದ್ಯದ ದರದ ಮಟ್ಟಕ್ಕೆ ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್​ನಂಥದ್ದನ್ನು ಹೊರತುಪಡಿಸಿ ಭಾರತದ ಹಲವು ಕಂಪೆನಿಗಳ ಷೇರಿನ ಬೆಲೆಗಿಂತ Dogecoin ಮೌಲ್ಯ ಹೆಚ್ಚಾಗಿದೆ. ಮಂಗಳವಾರದಂದು ಜಾಗತಿಕ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳಾದ eToro ಮತ್ತು ಜೆಮಿನಿಯಿಂದ ಮೀಮ್ ಕ್ರಿಪ್ಟೊಕರೆನ್ಸಿ ಸೇರ್ಪಡೆ ಮಾಡಲಾಯಿತು.

Dogecoin ಡಿಜಿಟಲ್ ಕರೆನ್ಸಿಗೆ ಬೆನ್ನೆಲುಬಾಗಿ ನಿಂತಿರುವ ಪ್ರಮುಖರಲ್ಲಿ ಮಸ್ಕ್ ಕೂಡ ಒಬ್ಬರು. “The Dogefather SNL May 8,” ಎಂದು ಮಸ್ಕ್ ಕಳೆದ ವಾರ ಟ್ವೀಟ್ ಮಾಡಿದ್ದರು. ಮುಂಬರುವ SNL ಕಂತಿನಲ್ಲಿ ಕ್ರಿಪ್ಟೊ ಅಸೆಟ್ ಒಳಗೊಂಡಿರುವ ಬಗೆಗಿನ ಸೂಚನೆ ಇದು ಎನ್ನಲಾಗಿದೆ. Coingecko ಪ್ರಕಾರ, ಐಎಸ್​ಟಿ ಮಧ್ಯಾಹ್ನ 2.55ಕ್ಕೆ Dogecoin 0.66 ಅಮೆರಿಕನ್ ಡಾಲರ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಕಳೆದ 24 ಗಂಟೆಯಲ್ಲಿ 0.44 ಡಾಲರ್​ನಿಂದ 0.68 ಡಾಲರ್​ಗೆ ಅಂದರೆ ಶೇ 37.6ರಷ್ಟು ಏರಿಕೆ ದಾಖಲಿಸಿದೆ. ಇನ್ನು ಭಾರತದಲ್ಲಿ ಕ್ರಿಪ್ಟೊ ಟ್ರೇಡಿಂಗ್ ಪ್ಲಾಟ್​ಫಾರ್ಮ್ ಆದ BuyUcoinನಲ್ಲಿ ಇತ್ತೀಚಿನ ಸಮಯದಲ್ಲಿ 10 ಪಟ್ಟು ಏರಿಕೆಯನ್ನು ದಾಖಲಿಸಿದೆ.

“Dogecoin ಎಂಬುದು ಕ್ರಿಪ್ಟೊ ಹೂಡಿಕೆಗೆ ಆಕರ್ಷಕವಾದ ಅವಕಾಶ. ಎಲಾನ್ ಮಸ್ಕ್ ಮುಂದಿನ ಸ್ಯಾಟರ್ಡ್ ನೈಟ್ ಲೈವ್ ಬಹಳ ಮುಖ್ಯ ಅಂಶ ಆಗಲಿದೆ. Dogecoin ಏರಿಕೆ ಬೆನ್ನಿಗೆ ಎಲಾನ್ ಮಸ್ಕ್ ಮುಖ್ಯ ಬೆಂಬಲಿಗರು ಎಂಬ ಕಾರಣ ಇದೆ. ಅದನ್ನು ಜನರ ಕ್ರಿಪ್ಟೋ ಎಂದು ಅವರು ಕರೆದಿದ್ದಾರೆ. ಈ ವರ್ಷದಲ್ಲೇ 11,000% ಏರಿಕೆ ಕಂಡಿದೆ Dogecoin. ಜೀವನದಲ್ಲಿ ಒಮ್ಮೆ ದೊರಕಬಹುದಾದ ಇಂಥ ಅವಕಾಶವನ್ನು ಕಳೆದುಕೊಳ್ಳುವುದಕ್ಕೆ ಬಹಳ ಹೂಡಿಕೆದಾರರು ಬಯಸುವುದಿಲ್ಲ. Ether ಕ್ರಿಪ್ಟೋ ಕರೆನ್ಸಿ ಈಗಾಗಲೇ 3500 ಅಮೆರಿಕನ್ ಡಾಲರ್ ಸಮೀಪ ಇದೆ. Dogecoin ಕಡಿಮೆ ವೆಚ್ಚದಲ್ಲಿ ಆಕರ್ಷಕ ಡಿಜಿಟಲ್ ಆರ್ಥಿಕತೆ ಪ್ರವೇಶಕ್ಕೆ ಅವಕಾಶ ಒದಗಿಸುತ್ತಿದೆ,” ಎಂದು BuyUcoin ಸಿಇಒ ಶಿವಮ್ ತಕ್ರಾಲ್ ಹೇಳಿದ್ದಾರೆ.

ಈ ಮಧ್ಯೆ, Dogecoin ವಹಿವಾಟಿನಲ್ಲಿ ಭಾರೀ ಹೆಚ್ಚಳ ಆದ ಮೇಲೆ ಕ್ರಿಪ್ಟೋಕರೆನ್ಸಿ ಎಕ್ಸ್​ಚೇಂಜ್ WazirX ಮಂಗಳವಾರದಂದು ಕುಸಿದಿದೆ. ಅಂದ ಹಾಗೆ Dogecoin ಅನ್ನು ಹೆಸರಾಂತ “Doge” ಮೀಮ್​ನಲ್ಲಿ ಕಂಡುಹಿಡಿಯಲಾಯಿತು. 2013ರಲ್ಲಿ ವಿಡಂಬನೆಯ ವಿಮರ್ಶೆ ಕಾರಣಕ್ಕೆ ಇದನ್ನು ಸೃಷ್ಟಿಸಲಾಯಿತು. ತಜ್ಞರ ಪ್ರಕಾರ, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. Dogecoinನಲ್ಲಿನ ಹೂಡಿಕೆ ಇನ್ನೂ ಹೆಚ್ಚು ಅಪಾಯಕಾರಿ. ಸದ್ಯಕ್ಕೆ ಸಿಕ್ಕಾಪಟ್ಟೆ ಉತ್ಪ್ರೇಕ್ಷೆಯಿಂದ ಇದರ ಬೆಲೆ ಹೀಗೆ ಬಂದು ನಿಂತಿದೆ. ದೀರ್ಘಾವಧಿಯಲ್ಲಿ ಇದು ಉಳಿಯದೇ ಹೋಗಬಹುದು ಎಂದಿದ್ದಾರೆ.

ಇದನ್ನೂ ಓದಿ: Dogecoin Cryptocurrencyಯಲ್ಲಿ ಭಾರತದಿಂದ ಹೂಡಿಕೆ ಮಾಡೋದು ಹೇಗೆ?

(Dogecoin surge more than 50% in a few days ahead of Elon Musk appearance on Saturday Live show)

Published On - 7:08 pm, Wed, 5 May 21

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ