Dogecoin Cryptocurrencyಯಲ್ಲಿ ಭಾರತದಿಂದ ಹೂಡಿಕೆ ಮಾಡೋದು ಹೇಗೆ?

Dogecoin Cryptocurrency ಬಗ್ಗೆ ಟೆಸ್ಲಾ ಕಂಪೆನಿಯ ಸ್ಥಾಪಕ ಎಲಾನ್ ಮಸ್ಕ್ ಸೇರಿ ಅನೇಕರಿಂದ ಪ್ರಚಾರ ದೊರೆಯುತ್ತಿದೆ. ಭಾರತದಲ್ಲಿ ಇರುವವರು ಈ ಕ್ರಿಪ್ಟೊಕರೆನ್ಸಿಯಲ್ಲಿ ಹೂಡಿಕೆ ಮಾಡಬಹುದಾ ಎಂಬ ಪ್ರಶ್ನೆ ಇರುವವರಿಗೆ ಉತ್ತರ ಇಲ್ಲಿದೆ.

Dogecoin Cryptocurrencyಯಲ್ಲಿ ಭಾರತದಿಂದ ಹೂಡಿಕೆ ಮಾಡೋದು ಹೇಗೆ?
ಸಾಂದರ್ಭಿಕ ಚಿತ್ರ


ಈ ವರ್ಷದ ಶುರುವಿನಲ್ಲಿ ಟೆಸ್ಲಾ ಸ್ಥಾಪಕ ಎಲಾನ್ ಮಸ್ಕ್ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್​ನಲ್ಲಿ ಪ್ರಚಾರ ಕೊಟ್ಟ ಮೇಲೆ ಈ ಕ್ರಿಪ್ಟೊಕರೆನ್ಸಿಯ ಖದರ್ ಬದಲಾಗಿದೆ. Dogecoin ಬಗ್ಗೆ ಮೀಮ್ ಕೂಡ ಹರಿದಾಡುತ್ತಿವೆ. ಅದು ಕೂಡ ಏಕೆಂದರೆ, ಎಲಾನ್, ಮಾರ್ಕ್ ಕ್ಯೂಬನ್ ಮತ್ತು ಬೀಫ್ ಜೆರ್ಕಿ ಬ್ರ್ಯಾಂಡ್​ನ ಸ್ಲಿಮ್ ಜಿಮ್ ಆ ಕ್ರಿಪ್ಟೊಕರೆನ್ಸಿ ಬೆನ್ನಿಗೆ ನಿಂತರು. ಆ ಹಿನ್ನೆಲೆಯಲ್ಲಿ ಕ್ರಿಪ್ಟೊಕರೆನ್ಸಿ ಮೌಲ್ಯ ಗಗನಕ್ಕೇರಿತು. ಅಂದಹಾಗೆ ಎಲಾನ್ ಮಸ್ಕ್, Dogecoin ಅನ್ನು ಜನರ ಕ್ರಿಪ್ಟೊಕರೆನ್ಸಿ ಎಂದು ಕರೆದಿದ್ದಾರೆ. ಕ್ರಿಪ್ಟೊಕರೆನ್ಸಿ ದತ್ತಾಂಶಗಳ ಸೈಟ್ CoinGeco ಪ್ರಕಾರ, ಕೆಲ ದಿನಗಳ ಹಿಂದೆ Dogecoin 0.39 ಅಮೆರಿಕನ್ ಡಾಲರ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಅದಕ್ಕೂ ಮುಂಚೆ 0.43 ಅಮೆರಿಕನ್ ಡಾಲರ್ ಮುಟ್ಟಿತ್ತು. ಈಗ ಮಾರುಕಟ್ಟೆ ಮೌಲ್ಯ 47 ಬಿಲಿಯನ್ ಅಮೆರಿಕನ್ ಡಾಲರ್ ಇದೆ. 2013ರ ಡಿಸೆಂಬರ್​ನಲ್ಲಿ ಇಬ್ಬರು ಎಂಜಿನಿಯರ್​ಗಳಾದ ಬಿಲ್ಲಿ ಮಾರ್ಕಸ್ ಮತ್ತು ಜಾಕ್ಸನ್ ಪಾಲ್ಮರ್ ತಮಾಷೆಗೆ ಹಾಗೂ ತಕ್ಷಣದ ಕ್ರಿಪ್ಟೊಕರೆನ್ಸಿಯಾಗಿ ರೂಪಿಸಲು ಇದನ್ನು ಬಯಸಿದ್ದರು. ಈಚಿನ ಏರಿಕೆಯು Dogecoin ಮೌಲ್ಯವನ್ನು ಹತ್ತಿರ ಹತ್ತಿರ 12 ಸೆಂಟ್ಸ್​ಗೆ ತೆಗೆದುಕೊಂಡು ಹೋಗಿದೆ.

ಒಂದು ವೇಳೆ ಈ ಆಧುನಿಕ ಕಾಲಘಟ್ಟದ ಕರೆನ್ಸಿಯಲ್ಲಿ ನೀವೂ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ಭಾರತದ ನಿವಾಸಿಗಳೇ ಆಗಿದ್ದರೆ ಹೇಗೆ ಹಣ ಹೂಡಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಭಾರತದಲ್ಲಿ ಯಾರಿಗೆ Dogecoin ಖರೀದಿ ಮಾಡಬೇಕು ಎಂದಿರುತ್ತದೋ ಅಂಥವರು, Dogecoin ಖರೀದಿಸಲು ಸಪೋರ್ಟ್ ಮಾಡುವಂಥ ಕ್ರಿಪ್ಟೊ ಎಕ್ಸ್​ಚೇಂಜ್​ಗಳಲ್ಲಿ ಖಾತೆ ತೆರೆಯಬೇಕು. ಆ ಮೂಲಕ ಕ್ರಿಪ್ಟೊಕರೆನ್ಸಿ ಜಗತ್ತನ್ನು ಪ್ರವೇಶಿಸಬಹುದು. ಇಲ್ಲಿ ತಮ್ಮ ಕ್ರಿಪ್ಟೊಕರೆನ್ಸಿ ಖರೀದಿ, ಮಾರಾಟ ಅಥವಾ ಈ ಕರೆನ್ಸಿಯ ವ್ಯವಹಾರವನ್ನು ಮಾಡಬಹುದು.

ಆರಂಭಿಕ ಹಂತದ ಖರೀದಿದಾರರು ಕೆಲವು ಅಪ್ಲಿಕೇಷನ್​ಗಳನ್ನು ಹೊಂದಿರಬೇಕಾಗುತ್ತದೆ. WazirX, BuyUcoin, Coinswitch ಇಂಥ ಆ್ಯಪ್ ಬಳಸಿಕೊಂಡು Dogecoin ಖರೀದಿಸಬಹುದು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅಥವಾ ಇ- ವ್ಯಾಲೆಟ್​ಗಳಾದ ಮೊಬಿಕ್ವಿಕ್, ಬ್ಯಾಂಕ್​ ಮೂಲಕ ವರ್ಗಾವಣೆ, ಭಿಮ್, ಐಎಂಪಿಎಸ್ ವರ್ಗಾವಣೆಯನ್ನು ಹಣ ಪಾವತಿಗಾಗಿ ಬಳಸಬಹುದು. ಇನ್ನು ಕಂಪ್ಯೂಟರ್​ನಲ್ಲಿ ವಿಂಡೋಸ್, ಮ್ಯಾಕ್ ಅಥವಾ ಲೈನಕ್ಸ್ ಇನ್​ಸ್ಟಾಲ್ ಆಗಿರಬೇಕು.

ಸೋಷಿಯಲ್ ಮೀಡಿಯಾದಲ್ಲಿ ಸೇರಿದಂತೆ ಹಲವೆಡೆ Dogecoin ಜನಪ್ರಿಯ ಆಗುತ್ತಿರುವುದಕ್ಕೂ ಕಾರಣ ಇದೆ. ಬಿಟ್​ಕಾಯಿನ್ ಮತ್ತು ಎಥೆರಿಯಂನಂಥ ಇತರ ಕ್ರಿಪ್ಟೊಕರೆನ್ಸಿಗಳು ಸಿಕ್ಕಾಪಟ್ಟೆ ದುಬಾರಿ. ಆದರೆ ಸದ್ಯಕ್ಕೆ Dogecoin ಕೈಗೆಟುಕುವ ದರದಲ್ಲಿದೆ. ಸ್ಪೇಸ್ ಎಕ್ಸ್ ಸ್ಥಾಪಕ ಎಲಾನ್ ಮಸ್ಸ್ ಆಗಾಗ Dogecoin ಪರ ಪ್ರಚಾರ ಮಾಡುತ್ತಿರುತ್ತಾರೆ. ಇನ್ನು ಹಿಪ್-ಹಾಪ್ ಕಲಾವಿದರಾದ ಸ್ನೂಪ್ ಡಾಗ್ ಮತ್ತು ಸಂಗೀತಗಾರ ಜೀನ್ ಸಿಮನ್ಸ್ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಪ್ಟೊಕರೆನ್ಸಿಯ ಪ್ರಚಾರ ಮಾಡುತ್ತಾರೆ.

(ಈ ಲೇಖನವು ಮಾಹಿತಿ ಉದ್ದೇಶಕ್ಕೆ ವಿನಾ ಹೂಡಿಕೆ ಶಿಫಾರಸ್ಸಲ್ಲ. ಒಂದು ವೇಳೆ ಈ ಲೇಖನದ ಆಧಾರದಲ್ಲಿ ಹೂಡಿಕೆ ಮಾಡಿ, ನಷ್ಟ ಅನುಭವಿಸಿದಲ್ಲಿ ಅದಕ್ಕೆ ಲೇಖಕರಾಗಲಿ, ಟಿವಿ9 ನೆಟ್​ವರ್ಕ್​ನ ಅಡಿ ಕಾರ್ಯ ನಿರ್ವಹಿಸುವ ಯಾವುದೇ ಮಾಧ್ಯಮ ಸಂಸ್ಥೆ ಜವಾಬ್ದಾರಿ ಅಲ್ಲ- ಟಿವಿ9ಕನ್ನಡ ಡಿಜಿಟಲ್ ಸಂಪಾದಕರು)

ಇದನ್ನೂ ಓದಿ: Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

(How to invest money in Dogecoin Cryptocurrency by an Indian from India?)

Published On - 5:08 pm, Wed, 21 April 21

Click on your DTH Provider to Add TV9 Kannada