Electric air taxis: ಶೀಘ್ರದಲ್ಲೇ ಶುರುವಾಗಲಿದೆ ಎಲೆಕ್ಟ್ರಿಕ್ ಏರ್​ ಟ್ಯಾಕ್ಸಿ..!

TV9 Digital Desk

| Edited By: Zahir Yusuf

Updated on: Feb 20, 2022 | 8:11 PM

Electric air taxis: ಈ ವಿಮಾನ ಕ್ಷೇತ್ರದಲ್ಲಿನ ವಿಳಂಬ ಮತ್ತು ತುರ್ತು ಸೇವೆಗೆ ಹೊಸ ಪರ್ಯಾಯ ವ್ಯಸ್ಥೆಯನ್ನು ರೂಪಿಸಲು ಮುಂದಾಗಿದೆ. ಅಷ್ಟೇ ಅಲ್ಲದೆ ಡ್ರೋನ್‌ಗಳನ್ನು ಬಳಸಿಕೊಂಡು ಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲು ಕೂಡ ಪ್ಲ್ಯಾನ್ ರೂಪಿಸಿದೆ.

Electric air taxis: ಶೀಘ್ರದಲ್ಲೇ ಶುರುವಾಗಲಿದೆ ಎಲೆಕ್ಟ್ರಿಕ್ ಏರ್​ ಟ್ಯಾಕ್ಸಿ..!
Electric air taxis

ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಬೈಕ್‌ಗಳ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ವೇಗವಾಗಿ ಹೆಚ್ಚಾಗುತ್ತಿದೆ. ಭಾರತದಲ್ಲೂ ಕೂಡ ದುಬಾರಿ ಪೆಟ್ರೋಲ್ ಬೆಲೆಯ ನಡುವೆ ಎಲೆಕ್ಟ್ರಿಕ್ ವಾಹನಗಳತ್ತ ವಾಹನ ಪ್ರಿಯರು ಮುಖ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ಎಲೆಕ್ಟ್ರಿಕ್ ವಿಮಾನಗಳ ಸೇವೆಯನ್ನು ನೀಡಲು ಜರ್ಮನ್ ವಿಮಾನ ತಯಾರಕ ಕಂಪೆನಿ ವೊಲೊಕಾಪ್ಟರ್ ಮುಂದಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಸಿಂಗಾಪುರದಲ್ಲಿ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಪ್ರಾರಂಭಿಸಲು ಯೋಜಿಸುತ್ತಿದೆ. ಅದರಂತೆ ಸಿಂಗಾಪುರದಿಂದ ನೆರೆ ರಾಷ್ಟ್ರಗಳಾದ ಇಂಡೋನೇಷ್ಯಾ ಮತ್ತು ಮಲೇಷಿಯಾ ದೇಶಗಳಿಗೆ ಏರ್ ಟ್ಯಾಕ್ಸಿ ವಿಮಾನ ಸೇವೆ ನೀಡಲು ಕಂಪೆನಿ ಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಸಿಂಗಾಪುರದಲ್ಲಿ ನಿರ್ವಹಣಾ ಕಾರ್ಯಾಚರಣೆಗಳನ್ನು ಸ್ಥಾಪಿಸಲು Volocopter ಯೋಜಿಸಿದೆ.

ಏಕಕಾಲದಲ್ಲಿ, ನಗರ-ರಾಜ್ಯಗಳು ಸೇರಿದಂತೆ ಏಷ್ಯಾದಲ್ಲಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಏರ್‌ಕ್ರಾಫ್ಟ್‌ಗಳನ್ನು ನಿರ್ಮಿಸುವ ಕುರಿತು ಅಧ್ಯಯನವನ್ನು ನಡೆಸುತ್ತಿದ್ದು, ಈ ಮೂಲಕ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಯ ಮೂಲಕ ಬಾಡಿಗೆ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುವ ಗುರಿ ಹೊಂದಿದೆ.

ಯುರೋಪ್ ಮತ್ತು ಸಿಂಗಾಪುರದಲ್ಲಿ ಏರ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಕಂಪನಿಯು ಯುರೋಪಿಯನ್ ಯೂನಿಯನ್ ಏವಿಯೇಷನ್ ​​​​ಸೇಫ್ಟಿ ಏಜೆನ್ಸಿಯಿಂದ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿದೆ. ಆದಾಗ್ಯೂ, ಈಗಾಗಲೇ 15 ನಿಮಿಷಗಳ ಜಾಯ್ ಫ್ಲೈಟ್‌ಗಳಿಗೆ ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.

ಅದರಂತೆ ಮುಂದಿನ ವರ್ಷದೊಳಗೆ ವೊಲೊಕಾಪ್ಟರ್ ನಗರಗಳ ನಡುವೆ ಏರ್​ ಟ್ಯಾಕ್ಸಿ ಸೇವೆ ಒದಗಿಸುವ ಗುರಿ ಹೊಂದಿದ್ದು, ಈ ವಿಮಾನ ಕ್ಷೇತ್ರದಲ್ಲಿನ ವಿಳಂಬ ಮತ್ತು ತುರ್ತು ಸೇವೆಗೆ ಹೊಸ ಪರ್ಯಾಯ ವ್ಯಸ್ಥೆಯನ್ನು ರೂಪಿಸಲು ಮುಂದಾಗಿದೆ. ಅಷ್ಟೇ ಅಲ್ಲದೆ ಡ್ರೋನ್‌ಗಳನ್ನು ಬಳಸಿಕೊಂಡು ಪಾರ್ಸೆಲ್ ವಿತರಣಾ ಸೇವೆಗಳನ್ನು ನೀಡಲು ಕೂಡ ಪ್ಲ್ಯಾನ್ ರೂಪಿಸಿದೆ. ಒಟ್ಟಿನಲ್ಲಿ ಟ್ರಾಫಿಕ್ ಕಿರಿಕಿರಿ, ಸಮಯದ ಅಭಾವದ ನಡುವೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಏರ್​ ಟ್ಯಾಕ್ಸಿ ಸೇವೆ ಎಲ್ಲರ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(Electric air taxis aims for takeoff in Singapore)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada