ಆಭರಣ ಪ್ರಿಯರಿಗೆ ಗುಡ್ನ್ಯೂಸ್! ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?
ಬೆಳ್ಳಿ ಬೆಲೆ ಶನಿವಾರ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 3,600 ರೂಪಾಯಿ ಏರಿಕೆ ಕಾಣುವ ಮೂಲಕ 72,000 ರೂಪಾಯಿ ಆಗಿದೆ. ಕೊರೊನಾ ವೈರಸ್ ಹೆಚ್ಚಿದ ಸಂದರ್ಭದಲ್ಲಿ ಬೆಳ್ಳಿ ಬೆಲೆ ಮಿತಿ ಮೀರಿ ಏರಿಕೆ ಕಂಡಿತ್ತು. ನಂತರ ನಿಧಾನವಾಗಿ ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಈಗ ಮತ್ತೆ ಏರಿಕೆ ಹಾದಿ ಹಿಡಿದಿದೆ. Gold Silver Price Trend Today
ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುವುದಕ್ಕೂ ಮೊದಲು 10 ಗ್ರಾಂಗೆ 35 ಸಾವಿರ ರೂಪಾಯಿ ಆಸುಪಾಸಿನಲ್ಲಿದ್ದ ಚಿನ್ನದ ಬೆಲೆ ಕಳೆದ ವರ್ಷ ಮಧ್ಯಂತರದ ವೇಳೆಗೆ ಗಗನಕ್ಕೇರಿತ್ತು. ಆದ್ರೆ ಈಗ ನಿಧಾನವಾಗಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.
ಚಿನ್ನದ ಬೆಲೆ 70 ಸಾವಿರದ ಗಡಿ ತಲುಪಿಲ್ಲ; ನಿಧಾನವಾಗಿ ತಗ್ಗುತ್ತಿದೆ.. ಆಭರಣ ಚಿನ್ನದ ದರ ಇಂದು 10 ಗ್ರಾಂಗೆ 100 ರೂಪಾಯಿ ಏರಿಕೆ ಕಾಣುವ ಮೂಲಕ 46,900 ರೂಪಾಯಿ ಆಗಿದೆ. ಶುದ್ಧ ಚಿನ್ನ 10 ಗ್ರಾಂಗೆ 110 ರೂಪಾಯಿ ಏರಿಕೆ ಕಂಡು 51,170 ರೂಪಾಯಿ ಆಗಿದೆ. ಕಳೆದ ವರ್ಷ ಮಧ್ಯಂತರದ ವೇಳೆಗೆ ಆಭರಣ ಚಿನ್ನದ ದರ 50 ಸಾವಿರದ ಗಡಿ ದಾಟಿತ್ತು. ಅದಕ್ಕೆ ಹೋಲಿಕೆ ಮಾಡಿದರೆ ಈಗಿರುವ ದರ ಕಡಿಮೆಯೇ. 2020ರ ವೇಳೆಗೆ ಚಿನ್ನದ ಬೆಲೆ 70 ಸಾವಿರದ ಗಡಿ ತಲುಪಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಈ ಲೆಕ್ಕಾಚಾರ ತಲೆಕೆಳಗಾಗಿದ್ದು, ಚಿನ್ನದ ಬೆಲೆ ನಿಧಾನವಾಗಿ ತಗ್ಗುತ್ತಿದೆ.
ಇನ್ನು, ಬೆಳ್ಳಿ ಬೆಲೆ ಶನಿವಾರ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 3,600 ರೂಪಾಯಿ ಏರಿಕೆ ಕಾಣುವ ಮೂಲಕ 72,000 ರೂಪಾಯಿ ಆಗಿದೆ. ಕೊರೊನಾ ವೈರಸ್ ಹೆಚ್ಚಿದ ಸಂದರ್ಭದಲ್ಲಿ ಬೆಳ್ಳಿ ಬೆಲೆ ಮಿತಿ ಮೀರಿ ಏರಿಕೆ ಕಂಡಿತ್ತು. ನಂತರ ನಿಧಾನವಾಗಿ ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಈಗ ಮತ್ತೆ ಏರಿಕೆ ಹಾದಿ ಹಿಡಿದಿದೆ.
ಚಿನ್ನದ ಬೆಲೆ ಏರಲು ಕಾರಣವೇನು? ಕೊರೊನಾ ವೈರಸ್ ದೇಶಕ್ಕೆ ಕಾಲಿಟ್ಟ ನಂತರದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಇದಕ್ಕೆ ಸಾಕಷ್ಟು ಕಾರಣಗಳಿವೆ. ಮೊದಲನೆಯದಾಗಿ, ಚಿನ್ನದ ಆಮದು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದು ಚಿನ್ನದ ಬೆಲೆ ಏರಲು ಪ್ರಮುಖ ಕಾರಣ ಎನ್ನಲಾಗಿದೆ. ಇನ್ನು, ಜನರಿಗೆ ಹೂಡಿಕೆ ಮಾಡಲು ಬೇರೆ ಯಾವುದೇ ಕ್ಷೇತ್ರ ಸಿಗುತ್ತಿರಲಿಲ್ಲ. ಹೀಗಾಗಿ, ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿ ಆಗಿತ್ತು. ಇದರಿಂದ ಸಹಜವಾಗಿಯೇ ಚಿನ್ನದ ಬೆಲೆ ಹೆಚ್ಚಿತ್ತು.
ಚಿನ್ನದ ಬೆಲೆ ನಿರ್ಧರಿಸುವ ಮಾನ ದಂಡಗಳು ಯಾವುವು? ಚಿನ್ನದ ಬೆಲೆಯ ಮೇಲೆ ಸಾಕಷ್ಟು ವಿಚಾರಗಳು ಪರಿಣಾಮ ಬೀರುತ್ತವೆ. ಪ್ರಮುಖ ದೇಶಗಳ ನಡುವೆ ನಡೆಯುವ ವ್ಯಾಪಾರ ಯುದ್ಧ, ಡಾಲರ್ ಮೌಲ್ಯ, ಚಿನ್ನದ ಆಮದು ಪ್ರಮಾಣ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಡೆಯುವ ಬೆಳವಣಿಗೆ ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ.
ಆರ್‌ಬಿಐ ಚಿನ್ನದ ಬಾಂಡ್ 9ನೇ ಸರಣಿ ಖರೀದಿಗೆ ಜ.1ರವರೆಗೆ ಅವಕಾಶ; ಗ್ರಾಂಗೆ ₹ 5000 ನಿಗದಿ
Published On - 5:33 pm, Sat, 2 January 21