ಹೋಂಡಾ ಅಮೇಜ್ ಫೇಸ್ ಲಿಫ್ಟ್ ಮೂರು ಮಾಡೆಲ್ಗಳಲ್ಲಿ ಬಿಡುಗಡೆಯಾಗಿದ್ದು, ಅದರಂತೆ ಹೊಂಡಾ ಅಮೇಜ್ ಇ, ಹೊಂಡಾ ಅಮೇಜ್ ಎಸ್ ಮತ್ತು ಹೊಂಡಾ ಅಮೇಜ್ ವಿಎಕ್ಸ್ ಮಾದರಿಯಲ್ಲಿ ಕಾರುಗಳು ಲಭ್ಯವಿದೆ. ಇದಾಗ್ಯೂ ಎಲ್ಲಾ ಮೂರು ಮಾದರಿಯಲ್ಲೂ CVT (ಕನ್ಸಿಟೆನ್ಸಿ ವೇರಿಯಬಲ್ ಟ್ರಾನ್ಸ್‌ಮಿಷನ್) ಆಟೋಮ್ಯಾಟಿಕ್ ಆಯ್ಕೆ ನೀಡಲಾಗಿದೆ. ಪೆಟ್ರೋಲ್ ಆವೃತ್ತಿಯ ಎಸ್ ಮತ್ತು ವಿಎಕ್ಸ್ ರೂಪಾಂತರಗಳಲ್ಲಿ ಸಿವಿಟಿ ಆಟೋಮ್ಯಾಟಿಕ್ ಆಯ್ಕೆ ಇರಲಿದೆ. ಹಾಗೆಯೇ ವಿಎಕ್ಸ್ ಡೀಸೆಲ್‌ನಲ್ಲಿ ಸಿವಿಟಿ ಆಟೋಮ್ಯಾಟಿಕ್ ಆಯ್ಕೆಯಿದೆ.