Electric Vehicles: ಎಲೆಕ್ಟ್ರಿಕ್ ವಾಹನ ಬ್ಯಾಟರಿ ವಿನಿಮಯ ಪ್ರೋತ್ಸಾಹಕ ಇನ್ನೆರಡು ತಿಂಗಳಲ್ಲಿ ಅಂತಿಮಗೊಳ್ಳುವ ನಿರೀಕ್ಷೆ

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ವಿನಿಮಯ ಯೋಜನೆ ಅಡಿಯಲ್ಲಿ ಪ್ರೋತ್ಸಾಹಕವನ್ನು ಇನ್ನೆರಡು ತಿಂಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

Electric Vehicles: ಎಲೆಕ್ಟ್ರಿಕ್ ವಾಹನ ಬ್ಯಾಟರಿ ವಿನಿಮಯ ಪ್ರೋತ್ಸಾಹಕ ಇನ್ನೆರಡು ತಿಂಗಳಲ್ಲಿ ಅಂತಿಮಗೊಳ್ಳುವ ನಿರೀಕ್ಷೆ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Feb 04, 2022 | 2:29 PM

ಹೊಸ ಎಲೆಕ್ಟ್ರಿಕ್ ವಾಹನಗಳ (Electric Vehicles) ಬ್ಯಾಟರಿ ವಿನಿಮಯ (ಸ್ವ್ಯಾಪ್) ಯೋಜನೆ ಅಡಿಯಲ್ಲಿ ಮುಂದಿನ ಎರಡು ತಿಂಗಳೊಳಗಾಗಿ ಭಾರತೀಯ ಸರ್ಕಾರವು ಪ್ರೋತ್ಸಾಹಕ ಅಂತಿಮಗೊಳಿಸುವ ನಿರೀಕ್ಷೆ ಇದೆ, ಎಂದು ಅಧಿಕಾರಿಗಳು ತಿಳಿಸಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ. ಕಾರ್ಬನ್ ಪ್ರಮಾಣ ಕಡಿಮೆ ಮಾಡುವ ಗುರಿಯೊಂದಿಗೆ ಸ್ವಚ್ಛ ಸಂಚಾರ ವ್ಯವಸ್ಥೆ ಉತ್ತೇಜಿಸುವ ಗುರಿ ಹೊಂದಿದೆ. ಇದರ ಮಧ್ಯೆ ಪ್ರೋತ್ಸಾಹಕ ಘೋಷಣೆ ಮಾಡುವ ಯೋಜನೆ ಇದೆ. ಈ ನೀತಿಯು ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್​ಗಳು, ಮೋಟಾರ್​ಸೈಕಲ್​ಗಳು ಮತ್ತು ತ್ರಿಚಕ್ರ ವಾಹನ ಆಟೋರಿಕ್ಷಾಗಳ ಬ್ಯಾಟರಿ ವಿನಿಮಯ ಸೇವೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ.

ಭಾರತ ಸರ್ಕಾರ ಈಚೆಗೆ ತಿಳಿಸಿರುವಂತೆ, ಸ್ವ್ಯಾಪಿಂಗ್ ಉತ್ತೇಜಿಸುವುದಕ್ಕಾಗಿ ಹೊಸ ನೀತಿಯನ್ನು ಪರಿಚಯಿಸಲಾಗುತ್ತದೆ. ವಿನಿಮಯ ಸ್ಟೇಷನ್​ಗಳಲ್ಲಿ ಹಳೆಯ- ಉಪಯೋಗಕ್ಕೆ ಬಾರದ ಬ್ಯಾಟರಿಗಳನ್ನು ಹೊಸದಾಗಿ ಚಾರ್ಜ್ ಆದಂಥದ್ದಕ್ಕೆ ಬದಲಿಸಿಕೊಳ್ಳಲು ಈ ಸೇವೆಯು ಅವಕಾಶ ನೀಡುತ್ತದೆ. ಇದು ವಾಹನ ಚಾರ್ಜಿಂಗ್​ಗಿಂತ ವೇಗವಾದದ್ದು ಮತ್ತು ಚಾಲಕರಿಗೆ ಎಷ್ಟು ದೂರಕ್ಕೆ ಬರಬಹುದೋ ಏನೋ ಎಂಬ ಆತಂಕ ಇರುತ್ತದಲ್ಲಾ ಅದನ್ನು ಕಡಿಮೆ ಮಾಡುತ್ತದೆ.

ಎಲೆಕ್ಟ್ರಿಕ್ ವಾಹನದಲ್ಲಿ ಬ್ಯಾಟರಿ ಎಂಬುದು ಬಹಳ ದುಬಾರಿ ಭಾಗ ಮತ್ತು ಸ್ವ್ಯಾಪಿಂಗ್ ಎಂಬುದು ಕಂಪೆನಿಗಳು ಲೀಸ್ ಅಥವಾ ಸಬ್​ಸ್ಕ್ರಿಪ್ಷನ್ ಮಾಡೆಲ್​ಗಳ ಮೂಲಕ ಸೇವೆ ಒದಗಿಸಲು ಅವಕಾಶ ಮಾಡಿಕೊಡುತ್ತವೆ. ಜತೆಗೆ ವಾಹನವನ್ನು ಸ್ವಂತವಾಗಿಸಿಕೊಳ್ಳುವ ಮತ್ತು ಕಾರ್ಯ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ, ಎಂದು ಈ ವಲಯದಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅಂದ ಹಾಗೆ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಎಷ್ಟು ಪ್ರೋತ್ಸಾಹಕ ನೀಡಬಹುದು ಎಂಬ ಪ್ರಶ್ನೆ ಇದ್ದಲ್ಲಿ ಅದು ಕೂಡ ಗೊತ್ತಾಗಿದೆ. ಬ್ಯಾಟರಿಯ ಲೀಸ್ ಅಥವಾ ಸಬ್​ಸ್ಕ್ರಿಪ್ಷನ್​ನ ಒಟ್ಟಾರೆ ಮೊತ್ತದ ಶೇ 20ರ ತನಕ ಪ್ರೋತ್ಸಾಹಕ ನೀಡಬಹುದಾಗಿದೆ. ಈಗಾಗಲೇ ಇಂಥ ವಾಹನಗಳ ಖರೀದಿಗೆ ನೀಡುತ್ತಿರುವ ಪ್ರೋತ್ಸಾಹಕದ ಜತೆಗೆ ಹೆಚ್ಚುವರಿಯಾಗಿ ಸಿಗುತ್ತದೆ.

2019ರಲ್ಲಿ ಭಾರತವು 10,000 ಕೋಟಿ ರೂಪಾಯಿಯನ್ನು ಎಲೆಕ್ಟ್ರಿಕಲ್ ವಾಹನಗಳನ್ನು ಉತ್ತೇಜಿಸುವ ಉದ್ದೇಶಕ್ಕೆ ನೇರವಾಗಿ ಖರೀದಿದಾರರಿಗೆ ಪ್ರೋತ್ಸಾಹಕವಾಗಿ ನೀಡುವುದಕ್ಕಾಗಿ ಮೀಸಲಿರಿಸಿತ್ತು. ಅದರಲ್ಲಿ ಶೇ 10ರಷ್ಟು ಮಾತ್ರ ಬಳಕೆ ಆಗಿದೆ. ಈಗ ಬ್ಯಾಟರಿ ಸ್ವ್ಯಾಪಿಂಗ್​ಗೆ ಅದೇ ನಿಧಿಯಿಂದಲೇ ಹಣವನ್ನು ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗಬೇಕು ಎಂಬ ಕಾರಣಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಸ್ವ್ಯಾಪಿಂಗ್ ನೀತಿ ಘೋಷಣೆ ಮಾಡಿದ್ದಾರೆ. ಇಂಟರ್​ಆಪರೇಟರಬಿಲಿಟಿ ಗುಣಮಟ್ಟವನ್ನು ಸಹ ರೂಪಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಉಡುಗೊರೆ: ಈ ಕಂಪನಿಯು ಎಲೆಕ್ಟ್ರಿಕ್ ವಾಹನ ಖರೀದಿಗೆ ಉಚಿತವಾಗಿ 3 ಲಕ್ಷ ರೂ. ನೀಡುತ್ತಿದೆ..!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ