Infosys: ಉದ್ಯೋಗಿಗಳು ಮತ್ತೆ ಕಚೇರಿಯಿಂದಲೇ ಕೆಲಸ ಆರಂಭಿಸುವ ಸುಳಿವು ನೀಡಿದ ಇನ್ಫೋಸಿಸ್

| Updated By: Srinivas Mata

Updated on: Jul 21, 2021 | 10:07 PM

ಇನ್ಫೋಸಿಸ್​ನಿಂದ ನೀಡಿರುವ ಸುಳಿವಿನ ಪ್ರಕಾರ ಶೀಘ್ರದಲ್ಲೇ ಉದ್ಯೋಗಿಗಳು ಮತ್ತೆ ಕಚೇರಿಗೆ ಆರಂಭಿಸಲು ಶುರು ಮಾಡಲಿದ್ದಾರೆ.

Infosys: ಉದ್ಯೋಗಿಗಳು ಮತ್ತೆ ಕಚೇರಿಯಿಂದಲೇ ಕೆಲಸ ಆರಂಭಿಸುವ ಸುಳಿವು ನೀಡಿದ ಇನ್ಫೋಸಿಸ್
ಇನ್ಫೋಸಿಸ್ (ಸಾಂದರ್ಭಿಕ ಚಿತ್ರ)
Follow us on

ಭಾರತೀಯ ಔಟ್​ಸೋರ್ಸಿಂಗ್ ದೈತ್ಯ ಕಂಪೆನಿಯಾದ ಇನ್ಫೋಸಿಸ್ (Infosys) ಕಳೆದ ವಾರ ಸುತ್ತೋಲೆ ಕಳುಹಿಸಿ, ಶೀಘ್ರದಲ್ಲೇ ಕಚೇರಿಗಳಿಂದ ಕೆಲಸ ಆರಂಭಿಸಬಹುದು ಎಂದಿದೆ ಎಂಬ ಬಗ್ಗೆ ರಾಯಿಟರ್ಸ್​ ವರದಿ ಮಾಡಿದೆ. ದೇಶದಲ್ಲಿ 19,000 ಕೋಟಿ ಅಮೆರಿಕನ್ ಡಾಲರ್​ ಮೌಲ್ಯದ ತಂತ್ರಜ್ಞಾನ ಸೇವೆ ವಲಯ ಮತ್ತೆ ಹಳಿಗೆ ಮರಳುವ ಸೂಚನೆ ಸಿಕ್ಕಿದೆ ಎಂಬರ್ಥದಲ್ಲಿ ವರದಿ ಆಗಿದೆ. ಬೆಂಗಳೂರು ಮೂಲದ ಐ.ಟಿ. ಸೇವೆ ಕಂಪೆನಿಯಾದ ಇನ್ಫೋಸಿಸ್​ನಿಂದ ಎಲ್ಲ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಕರೆಸಬೇಕು ಎಂಬಷ್ಟರಲ್ಲಿ ಭಾರತೀಯ ಅಧಿಕಾರಿಗಳು ಕೊವಿಡ್- 19 ಸೋಂಕಿನ ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಮೇ ತಿಂಗಳಲ್ಲಿ ಕೊರೊನಾ ಎರಡನೇ ಅಲೆಯ ಸೋಂಕು ಗರಿಷ್ಠ ಮಟ್ಟ ತಲುಪಿದ ನಂತರವೂ ದೇಶದಲ್ಲಿ ಸೋಂಕಿತರ ದಿನದ ಲೆಕ್ಕಾಚಾರವು ಟಾಪ್ ಹತ್ತರ ಪಟ್ಟಿಯಲ್ಲಿದೆ. ಮಂಗಳವಾರದಂದು ಸೋಂಕು ಪ್ರಮಾಣವು ನಾಲ್ಕು ತಿಂಗಳ ಕನಿಷ್ಠ ಮಟ್ಟ ತಲುಪಿತ್ತು.

ಆರೋಗ್ಯ ತಜ್ಞರು ಸರ್ಕಾರ ಮತ್ತು ನಾಗರಿಕರಿಗೆ ಮನವಿ ಮಾಡಿದ್ದು, ಕೊವಿಡ್ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಮಾಡದಂತೆ ಹಾಗೂ ಕೊವಿಡ್ ಮೂರನೇ ಅಲೆ ಅನಿವಾರ್ಯ ಅಂತಲೂ ಹೇಳಿದ್ದಾರೆ. ವಿಮಾನಯಾನ, ಉತ್ಪಾದನೆಯಂಥ ಕೆಲವು ವಲಯಗಳು ಮತ್ತೆ ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆಸಿಕೊಂಡಿವೆ. ಸುತ್ತೋಲೆ ಹೊರಡಿಸಿರುವ ಇನ್ಫೋಸಿಸ್, ಲಸಿಕೆ ಹಾಕುವ ಕಾರ್ಯಕ್ರಮ ಹೆಚ್ಚುತ್ತಿರುವಂತೆ ಸುರಕ್ಷತಾ ಕ್ರಮಗಳು ಚೇತರಿಸಿಕೊಳ್ಳುವಂತೆ ಕಾಣುತ್ತಿದೆ ಎಂದಿದೆ. ಆದರೆ ಈ ಸುತ್ತೋಲೆ ಬಗ್ಗೆ ರಾಯಿಟರ್ಸ್​ಗೆ ಇನ್ಫೋಸಿಸ್​ನಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ/.

ತಿಂಗಳುಗಳಿಂದ ತುರ್ತು ವ್ಯವಸ್ಥೆ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದೇವೆ. ಆದರೆ ದೇಶದಲ್ಲಿ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. “ಕೆಲವು ಖಾತೆಗಳವರನ್ನು ಮನವಿ ಮಾಡಿಕೊಂಡಿದ್ದು, ತಮ್ಮ ತಂಡದ ಸದಸ್ಯರನ್ನು ಇನ್ಫೋಸಿಸ್​ ಕ್ಯಾಂಪಸ್​ಗಳಿಂದ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದಿದ್ದೇವೆ. ಇದರ ಜತೆಗೆ ನಮ್ಮ ಕೆಲವು ಉದ್ಯೋಗಿಗಳು ಕಚೇರಿಗೆ ಬಂದು ಮತ್ತೆ ಕೆಲಸ ಆರಂಭಿಸುವುದು ತಮ್ಮ ಆದ್ಯತೆ ಎಂದಿದ್ದಾರೆ.” ಎನ್ನಲಾಗಿದೆ.

ಕಳೆದ ವಾರ ಫಲಿತಾಂಶದ ನಂತರ ಇನ್ಫೋಸಿಸ್ ಅಧಿಕಾರಿಗಳು ವಿಶ್ಲೇಷಕರ ಜತೆ ಮಾತನಾಡಿ, ಹತ್ತಿರ ಹತ್ತಿರ ಶೇ 99ರಷ್ಟು ಸಿಬ್ಬಂದಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಮುಂದಿನ ಕೆಲ ತ್ರೈಮಾಸಿಕದಲ್ಲಿ ಹೆಚ್ಚೆಚ್ಚು ಜನರು ಕಚೇರಿಗೆ ಬಂದು ಕೆಲಸ ಮಾಡುವುದಕ್ಕೆ ಕಂಪೆನಿಯು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ಅಮದ ಹಾಗೆ ಭಾರತದ ಸಾಫ್ಟ್​ವೇರ್ ಸರ್ವೀಸಸ್ ವಲಯವು ವಿಶ್ವದ ದೊಡ್ಡ ಕಂಪೆನಿಗಳಿಗೆ, ಅದರಲ್ಲೂ ಬ್ಯಾಂಕ್​ಗಳು ಮತ್ತು ರೀಟೇಲರ್​ಗಳಿಗೆ ಮುಖ್ಯವಾದ ಸೇವೆಗಳನ್ನು ಒದಗಿಸುತ್ತದೆ. ದೇಶವನ್ನು ಮೊದಲ ಬಾರಿಗೆ ಕಲೆದ ವರ್ಷ ಕೊರೊನಾ ಆವರಿಸಿದಾಗ ಈ ವಲಯ ಬಹಳ ಶ್ರಮಪಡುವಂತಾಗಿತ್ತು.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಹೇಳಿರುವ ಪ್ರಕಾರ, ಈ ವರ್ಷದ ಸೆಪ್ಟೆಂಬರ್​ ಹೊತ್ತಿಗೆ ತನ್ನೆಲ್ಲ ಉದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ಲಸಿಕೆ ಪೂರ್ಣಗೊಳಿಸುತ್ತದೆ. ವಿಪ್ರೋ ಸೇರಿದಂತೆ ಮತ್ತಿತರ ಕಂಪೆನಿಗಳು ಸೆಪ್ಟೆಂಬರ್​ ತನಕ ಕಾಯುವುದಾಗಿ ಹೇಳಿವೆ.

ಇದನ್ನೂ ಓದಿ: 30 Years Of Liberalisation: 2 ಕೋಟಿ ರೂ.ಗೆ ಖರೀದಿಸಲು ಬಂದಿದ್ದ ಇನ್ಫೋಸಿಸ್​​ ಬಂಡವಾಳ ಈಗ 6.5 ಲಕ್ಷಕೋಟಿ ಎಂದು ನೆನಪಿಸಿದ ಎನ್​ಆರ್​ಎನ್

(Infosys Gives Hint About Employees Coming Back To Office Soon)

Published On - 10:07 pm, Wed, 21 July 21