ಹಾಲಿನ ಬೆಲೆ ಹೆಚ್ಚಿಸಿಲ್ಲ, ಪೊಟ್ಟಣದಲ್ಲಿ ಹೆಚ್ಚಿನ ಪ್ರಮಾಣದ ಹಾಲಿಗೆ ಗ್ರಾಹಕ ಹಣ ತೆರುತ್ತಿದ್ದಾನೆ: ಸಿದ್ದರಾಮಯ್ಯ
ಹಾಲಿನ ಬೆಲೆಯನ್ನು ₹2 ಹೆಚ್ಚಿಸಿದರೂ ಭಾರತದ ಎಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಅದರ ದರ ಕಡಿಮೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹಾಲಿನ ಬೆಲೆ ಹೆಚ್ಚು ಮಾಡಿದ್ದಕ್ಕೆ ಇದು ಸಮರ್ಥನೆಯಾಗಲಾರದು ಮುಖ್ಯಮಂತ್ರಿಯವರೇ. ನೀವೇನೇ ಹೇಳಿದರೂ ಜನಸಾಮಾನ್ಯ ತನ್ನ ಜೇಬಿಂದ ಪ್ರತಿ ಲೀಟರ್ ಹಾಲಿಗೆ ಪ್ರತಿದಿನ ರೂ. 2 ಹೆಚ್ಚು ಕೊಡಲೇಬೇಕು. ಅದೇ ವಾಸ್ತವಾಂಶ.
ಬೆಂಗಳೂರು: ರಾಜ್ಯ ಸರ್ಕಾರ ಹಾಲಿನ ಬೆಲೆಯನ್ನು ಹೆಚ್ಚು ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಹಾಲಿನ ಬೆಲೆಯನ್ನು ಹೆಚ್ಚು ಮಾಡಿಲ್ಲ, ಅದರೆ ಪೊಟ್ಟಣಗಳಲ್ಲಿ ಒದಗಿಸುತ್ತಿರುವ ಹೆಚ್ಚುವರಿ ಹಾಲಿಗೆ ಗ್ರಾಹಕರಿಂದ ಹಣ ಪಡೆಯಲಾಗುತ್ತಿದೆ ಮತ್ತು ಆ ಹಣ ನೇರವಾಗಿ ರೈತರಿಗೆ ಹೋಗುತ್ತಿದೆ ಎಂದು ಹೇಳಿದರು. ಹಾಲು ಉತ್ಪಾದಕರಿಗೆ 2ರೂ, ಇದ್ದ ಸಬ್ಸಿಡಿಯನ್ನು ₹ 5ಕ್ಕೆ ಹೆಚ್ಚಿಸಿದ್ದ್ದು ತಾನು ಎಂದು ಹೇಳಿದ ಮುಖ್ಯಮಂತ್ರಿಯವರು ವಿರೋಧ ಪಕ್ಷದ ನಾಯಕ ಆರ್ ಆಶೋಕ ಮಾಹಿತಿ ಇಲ್ಲದೆ ಹೇಳಿಕೆಗಳನ್ನು ನೀಡುತ್ತಾರೆ ಎಂದರು. ತಮ್ಮ ಸರ್ಕಾರ ರೈತರಿಗೆ ಪ್ರತಿದಿನ ರೂ 5 ಕೋಟಿ ಪ್ರೋತ್ಸಾ ಹ ಧನ ನೀಡುತ್ತಿದೆ ಅದು ತಿಂಗಳಿಗೆ ₹ 150 ಕೋಟಿ ಮತ್ತು ವರ್ಷಕ್ಕೆ ₹ 1800 ಕೋಟಿ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಆದರೆ, ರೈತರಿಗೆ ನೀಡುವ ಸಬ್ಸಿಡಿಯನ್ನು ಸರ್ಕಾರ ಬಾಕಿಯುಳಿಸಿಕೊಂಡಿದೆಯಲ್ಲ ಸರ್ ಅಂತ ಪತ್ರಕರ್ತರು ಕೇಳಿದಾಗ ಅದು ನಾವು ಉಳಿಸಿಕೊಂಡಿರೋದು ಅಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ₹700 ಕೋಟಿ ಬಾಕಿಯುಳಿಸಿಕೊಂಡಿತ್ತು ಅದನ್ನು ನಮ್ಮ ಸರ್ಕಾರ ಚುಕ್ತಾ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ!