ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು BSA (Birmingham Small Arms) ಬ್ರಾಂಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ. 2016 ರಲ್ಲಿ BSA ಬ್ರಾಂಡ್ ಅನ್ನು ಸ್ವಾಧೀನಪಡಿಸಿಕೊಂಡ ಕ್ಲಾಸಿಕ್ ಲೆಜೆಂಡ್ಸ್ ಪ್ರೈವೇಟ್ ಲಿಮಿಟೆಡ್ (CLPL), BSA ಬ್ರಾಂಡ್ ಹೆಸರಿನಲ್ಲಿ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಗ್ಗೆ ಮಹೀಂದ್ರಾ ಮತ್ತು ಮಹೀಂದ್ರಾದ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರು ಖಚಿತಪಡಿಸಿದ್ದಾರೆ.
ಬಿಎಸ್ಎ ಕಂಪನಿ ಅಥವಾ ಬರ್ಮಿಂಗ್ಹ್ಯಾಮ್ ಸ್ಮಾಲ್ ಆರ್ಮ್ಸ್ ಕಂಪನಿಯನ್ನು 2016 ರಲ್ಲಿ ಸ್ವಾಧೀನಪಡಿಸಿಕೊಂಡ ಕ್ಲಾಸಿಕ್ ಲೆಜೆಂಡ್ಸ್ ಅನ್ನು ಮಹೀಂದ್ರಾ ಗ್ರೂಪ್ ಹೊಂದಿದೆ. ಕ್ಲಾಸಿಕ್ ಲೆಜೆಂಡ್ಸ್ ಈಗಾಗಲೇ ಯುನೈಟೆಡ್ ಕಿಂಗ್‌ಡಂನ ಕೋವೆಂಟ್ರಿಯಲ್ಲಿ ತಾಂತ್ರಿಕ ಕೇಂದ್ರವನ್ನು ಸ್ಥಾಪಿಸಿದೆ. ಇದು BSA ಮೋಟಾರ್‌ಸೈಕಲ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿದೆ.
ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ನ ನವೀಕರಿಸಿದ ಸ್ಮಾರ್ಟ್‌ಫೋನ್ ಮಾರಾಟ ಪುನರಾರಂಭ, ಇಲ್ಲಿವೆ ಕೆಲವು ಕೈಗೆಟಕುವ ದರದಲ್ಲಿ ಲಭ್ಯವಾಗುವ ಐಫೋನ್ಗಳು
ಬಿಎಸ್ಎ ಈಗಾಗಲೇ 650 cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಆಧುನಿಕ ಕ್ಲಾಸಿಕ್ ಮೋಟಾರ್ ಸೈಕಲ್ ಅನ್ನು ಅನಾವರಣಗೊಳಿಸಿದೆ. ಹೊಸ BSA ಗೋಲ್ಡ್ ಸ್ಟಾರ್ ಅನ್ನು ಭಾರತದಲ್ಲಿ ಆರಂಭದಲ್ಲಿ ತಯಾರಿಸಲಾಗುತ್ತಿದೆ. ನಂತರ ಯುಕೆಗೆ ರಫ್ತು ಮಾಡಲಾಗುವುದು. ಅಲ್ಲಿ ಮತ್ತು ಇತರ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಕಳೆದ ವರ್ಷ ಬಿಎಸ್‌ಎ ಗೋಲ್ಡ್ ಸ್ಟಾರ್ ಬಿಡುಗಡೆಯ ಸಂದರ್ಭದಲ್ಲಿ ವೆಸ್ಟ್ ಮಿಡ್‌ಲ್ಯಾಂಡ್ಸ್ ಪ್ರದೇಶದಲ್ಲಿ ಹೊಸ ಅಸೆಂಬ್ಲಿ ಲೈನ್ ಅಥವಾ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು ಎಂದು ಕಂಪನಿಯು ಘೋಷಿಸಿತ್ತು. ಯುಕೆಯಲ್ಲಿನ ಅಸೆಂಬ್ಲಿ ಸೌಲಭ್ಯದ ಪ್ರಸ್ತುತ ಸ್ಥಿತಿ ಏನು ಎಂಬುದರ ಕುರಿತು ಕಂಪನಿಯು ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಘೋಷಿಸಿಲ್ಲ. ಆದರೆಬಿಎಸ್ಎ ಕ್ಲಾಸಿಕ್ ಲೆಜೆಂಡ್ಸ್‌ನ ಜಾಗತಿಕ ವ್ಯವಹಾರವನ್ನು ಮುನ್ನಡೆಸುವುದನ್ನು ಮುಂದುವರಿಸುತ್ತದೆ. ಆದರೆ ಜಾವಾ ಮತ್ತು ಯೆಜ್ಡಿ ಪ್ರಾಥಮಿಕವಾಗಿ ದೇಶೀಯ ಮಾರುಕಟ್ಟೆಯ ಮೇಲೆ ಕೆಲವು ಸಾಗರೋತ್ತರ ಆಕಾಂಕ್ಷೆಗಳೊಂದಿಗೆ ಕೇಂದ್ರೀಕೃತವಾಗಿರುತ್ತವೆ.
ಇದನ್ನೂ ಓದಿ: Trending News: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಮಾರಾಟ! ಎಷ್ಟಕ್ಕೆ ಗೊತ್ತಾ?
BSA ಬ್ರಾಂಡ್‌ನ ಅಡಿಯಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಂವಾದ ನಡೆಸುತ್ತಿದ್ದಾಗ ಮಾಹಿತಿ ನೀಡಿದ ಮಹೀಂದ್ರಾ ಮತ್ತು ಮಹೀಂದ್ರಾದ ಆಟೋ ಮತ್ತು ಫಾರ್ಮ್ ವಲಯಗಳ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ್ ಜೆಜುರಿಕರ್, ”BSA ಬ್ರಾಂಡ್‌ನ ಅಡಿಯಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅಭಿವೃದ್ಧಿ ಹಂತದಲ್ಲಿದೆ. BSA ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿದೆ. ಇದು ಕ್ಲಾಸಿಕ್ ಲೆಜೆಂಡ್ಸ್‌ಗಾಗಿ ಜಾಗತಿಕ ವ್ಯಾಪಾರವನ್ನು ನಿರ್ಮಿಸಲು ಪ್ರಮುಖ ಕೇಂದ್ರವಾಗಿದೆ” ಎಂದು ಹೇಳಿದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ