Automobile: ಮಹೀಂದ್ರ eXUV300 ಎಲೆಕ್ಟ್ರಿಕ್ SUV ಅಧಿಕೃತ ಬಿಡುಗಡೆಗೆ ಸಜ್ಜು, ಯಾವಾಗ ಗೊತ್ತಾ?

ಮಹೀಂದ್ರ eXUV300 ಎಲೆಕ್ಟ್ರಿಕ್ SUV ಬಿಡುಗಡೆಗೆ ಸಜ್ಜಾಗಿದ್ದು, 2023ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

Automobile: ಮಹೀಂದ್ರ eXUV300 ಎಲೆಕ್ಟ್ರಿಕ್ SUV ಅಧಿಕೃತ ಬಿಡುಗಡೆಗೆ ಸಜ್ಜು, ಯಾವಾಗ ಗೊತ್ತಾ?
eXUV300 ಕಾರು
Follow us
TV9 Web
| Updated By: Rakesh Nayak Manchi

Updated on:May 31, 2022 | 7:48 AM

ಮಹೀಂದ್ರ eXUV300 ಎಲೆಕ್ಟ್ರಿಕ್ SUV ಬಿಡುಗಡೆಗೆ ಸಜ್ಜಾಗಿದ್ದು, 2023ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ. ಮಹೀಂದ್ರಾ ಈ ಹಿಂದೆ ತನ್ನ ಆಲ್-ಎಲೆಕ್ಟ್ರಿಕ್ ಸಬ್‌ಕಾಂಪ್ಯಾಕ್ಟ್ SUV ಅನ್ನು 2020 ಆಟೋ ಎಕ್ಸ್‌ಪೋದಲ್ಲಿ ಪ್ರಿ-ಪ್ರೊಡಕ್ಷನ್ ಪರಿಕಲ್ಪನೆಯ ರೂಪದಲ್ಲಿ ತೋರಿಸಿತ್ತು. ಅಲ್ಲದೆ ಆಲ್-ಎಲೆಕ್ಟ್ರಿಕ್ eXUV300 ಪ್ರಸಕ್ತ ಹಣಕಾಸು ವರ್ಷದ ಮೂರನೇ ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿತ್ತು. ಇದೀಗ ಮುಂಬರುವ ವರ್ಷದ ಮೊದಲ ತ್ರೈಮಾಸಿಕದಲ್ಲೇ ಬಿಡುಗಡೆ ಮಾಡುವುದಾಗಿ ದೃಢೀಕರಿಸಿದೆ.

ಇದನ್ನೂ ಓದಿ: ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಕ್ಕರೆ ರಫ್ತಿಗೆ ಭಾರತ ಸರ್ಕಾರ ನಿರ್ಬಂಧ: ಕಳೆದ 6 ವರ್ಷಗಳಲ್ಲಿ ಇದೇ ಮೊದಲು

eXUV300 ಮಹೀಂದ್ರಾ ಯೋಜಿಸಿರುವ ಎಲೆಕ್ಟ್ರಿಕ್ ವಾಹನಗಳ ಒಂದು ಭಾಗವಾಗಿದೆ. ಕಂಪನಿಯು ಮುಂದಿನ 7 ವರ್ಷಗಳ ಅವಧಿಯಲ್ಲಿ 16 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವುದಾಗಿ 2021ರಲ್ಲಿ ಘೋಷಿಸಿತ್ತು. ಈ ಹೊಸ ಮಾದರಿಗಳು 8 ಎಲೆಕ್ಟ್ರಿಕ್ SUV ಗಳು ಮತ್ತು 8 ಲಘು ವಾಣಿಜ್ಯ ವಾಹನಗಳನ್ನು ಒಳಗೊಂಡಿರುತ್ತವೆ.

ಮಹೀಂದ್ರಾ ಇತ್ತೀಚೆಗೆ ಮೂರು ಹೊಸ ಎಲೆಕ್ಟ್ರಿಕ್ SUV ಪರಿಕಲ್ಪನೆಗಳನ್ನು ತೋರಿಸಿತ್ತು. ಈ ವರ್ಷದ ಕೊನೆಯಲ್ಲಿ ಚೊಚ್ಚಲ ಪ್ರವೇಶವನ್ನು ನಿರೀಕ್ಷಿಸಲಾಗಿದೆ. ಕಂಪನಿಯು ಇತ್ತೀಚಿಗೆ ಫೋಕ್ಸ್‌ವ್ಯಾಗನ್‌ನೊಂದಿಗೆ ತನ್ನ ಮುಂಬರುವ ಶ್ರೇಣಿಯ ‘born electric’ ಮಾದರಿಗಳಲ್ಲಿ MEB ಪ್ಲಾಟ್‌ಫಾರ್ಮ್ ಘಟಕಗಳನ್ನು ಬಳಸುವ ಸಾಧ್ಯತೆಯ ಕುರಿತು ಒಪ್ಪಂದಕ್ಕೆ ಸಹಿ ಹಾಕಿದೆ.

ಇದನ್ನೂ ಓದಿ: Trending News: ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಮಾರಾಟ! ಎಷ್ಟಕ್ಕೆ ಗೊತ್ತಾ?

2022 ಆಟೋ ಎಕ್ಸ್‌ಪೋದ eXUV300 ಪರಿಕಲ್ಪನೆಯು XUV300 ಗಿಂತ ಕೆಲವು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಪ್ರದರ್ಶಿಸಿತು. ಮುಂಭಾಗದ ಬಂಪರ್‌ನಲ್ಲಿ ಮುಚ್ಚಿದ ಗ್ರಿಲ್, ಕಾರಿನ ಕೆಲವು ಭಾಗಗಳಿಗೆ ನೀಲಿ ಬಣ್ಣ ನೀಡಲಾಗಿದ್ದು,  ವಿಶಿಷ್ಟ ವಿನ್ಯಾಸದ ಚಕ್ರಗಳು ಮತ್ತು ಹೆಡ್‌ಲ್ಯಾಂಪ್ ಇಂಟರ್ನಲ್‌ಗಳು ಇವೆ.

2022ರ ಶೋ ಕಾರ್‌ನ ಕೆಲವು ಕಾನ್ಸೆಪ್ಟ್ ಕಾರಿನ ಅಂಶಗಳನ್ನು ಬದಲಾಯಿಸಲಾಗಿದ್ದರೂ, ಪರಿಕಲ್ಪನೆಯ ಪ್ರಕಾರ ಉತ್ಪಾದನಾ ವಾಹನವು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯ ಮೇಲೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಪವರ್‌ಟ್ರೇನ್‌ಗೆ ಸಂಬಂಧಿಸಿದಂತೆ, SUV 40kWh ಬ್ಯಾಟರಿಯೊಂದಿಗೆ ಜೋಡಿಸಲಾದ ಒಂದೇ ಎಲೆಕ್ಟ್ರಿಕ್ ಮೋಟರ್‌ನಿಂದ 130 bhp ಅನ್ನು ಅಭಿವೃದ್ಧಿಪಡಿಸುತ್ತದೆ ಮತ್ತು 300 ಕಿ.ಮೀ. ವ್ಯಾಪ್ತಿಯನ್ನು ಹೊಂದಿರಲಿದೆ ಎಂದು 2020 ಎಕ್ಸ್‌ಪೋದಲ್ಲಿ ಕಂಪನಿಯು ಹೇಳಿದೆ.

ಇದನ್ನೂ ಓದಿ: Uber: ತೆರಳಬೇಕಾದ ಸ್ಥಳದ ವಿವರ ಉಬರ್ ಚಾಲಕರಿಗೆ ಇನ್ನು ಮುಂದೆ ಆರಂಭದಲ್ಲೇ ಲಭ್ಯ; ಟ್ರಿಪ್ ರದ್ದು ಕಡಿಮೆ ಮಾಡಲು ಕ್ರಮ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:48 am, Tue, 31 May 22