Uber: ತೆರಳಬೇಕಾದ ಸ್ಥಳದ ವಿವರ ಉಬರ್ ಚಾಲಕರಿಗೆ ಇನ್ನು ಮುಂದೆ ಆರಂಭದಲ್ಲೇ ಲಭ್ಯ; ಟ್ರಿಪ್ ರದ್ದು ಕಡಿಮೆ ಮಾಡಲು ಕ್ರಮ

Uber: ತೆರಳಬೇಕಾದ ಸ್ಥಳದ ವಿವರ ಉಬರ್ ಚಾಲಕರಿಗೆ ಇನ್ನು ಮುಂದೆ ಆರಂಭದಲ್ಲೇ ಲಭ್ಯ; ಟ್ರಿಪ್ ರದ್ದು ಕಡಿಮೆ ಮಾಡಲು ಕ್ರಮ
ಸಾಂದರ್ಭಿಕ ಚಿತ್ರ

ಭಾರತದಲ್ಲಿ ಉಬರ್ ಪ್ರಯಾಣ ಆರಂಭಿಸುವ ಮುನ್ನ ಚಾಲಕರಿಗೆ ಗಮ್ಯ ತಿಳಿಯುವಂಥ ಹೊಸ ಫೀಚರ್ ಪರಿಚಯಿಸಲಾಗಿದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಅದೇನು, ಎತ್ತ ಎಂಬಿತ್ಯಾದಿ ವಿವರ ಇಲ್ಲಿದೆ.

TV9kannada Web Team

| Edited By: Srinivas Mata

May 24, 2022 | 5:47 PM

ಸವಾರಿ ಎಲ್ಲಿಗೆ ತೆರಳಬೇಕು ಎಂಬ ವಿಚಾರವಾಗಿ ಇಷ್ಟು ಸಮಯ ಉಬರ್ (Uber) ಚಾಲಕರಿಗೆ ಆರಂಭದಲ್ಲಿ ತಿಳಿಯುತ್ತಿರಲಿಲ್ಲ. ಆದರೆ ಈಗ ಭಾರತದಲ್ಲಿ ಉಬರ್ ಸವಾರಿಗೆ ಮುನ್ನವೇ ತೆರಳಬೇಕಾದ ಸ್ಥಳದ ಮಾಹಿತಿಯನ್ನು ಚಾಲಕರಿಗೆ ನೀಡಲು ಪ್ರಾರಂಭಿಸಿದೆ. ಚಾಲಕರು ತಮ್ಮ ಪ್ರಯಾಣದ ಗಮ್ಯಸ್ಥಾನ ತಿಳಿದ ನಂತರ ರದ್ದುಗೊಳಿಸುವ ಬಗ್ಗೆ ಸವಾರರಿಗೆ ಇರುವ ಆತಂಕವನ್ನು ನಿವಾರಿಸುವ ಗುರಿಯನ್ನು ಈ ನಡೆಯು ಹೊಂದಿದೆ. ಹತ್ತಿರದ ಸ್ಥಳದಲ್ಲಿ ಇಲ್ಲದಿರುವಾಗಲೂ ಚಾಲಕರು ಸವಾರಿ ವಿನಂತಿಗಳನ್ನು ಸ್ವೀಕರಿಸಲು ಅವಕಾಶ ಮಾಡಿಕೊಡಲು ಕ್ಯಾಬ್ ಅಗ್ರಿಗೇಟರ್ ದೂರದ ಪಿಕ್-ಅಪ್‌ಗಳಿಗಾಗಿ ಗಳಿಕೆಯನ್ನು ಪರಿಚಯಿಸಿದೆ. ಹೆಚ್ಚುವರಿಯಾಗಿ, ಸೋಮವಾರದಿಂದ ಗುರುವಾರದ ನಡುವೆ ದೈನಂದಿನ ಆಧಾರದ ಮೇಲೆ ಚಾಲಕರಿಗೆ ಪಾವತಿಸಲು ಪ್ರಾರಂಭಿಸುವುದಾಗಿ ಉಬರ್ ಭರವಸೆ ನೀಡಿದೆ. ಆದರೆ ಈ ಹೊಸ ಪ್ರಕಟಣೆಗಳಿಂದ ಚಾಲಕ ಸಂಘಗಳು ಸಮಾಧಾನಗೊಂಡಿಲ್ಲ.

ತಲುಪಬೇಕಾದ ಸ್ಥಳವನ್ನು ತಿಳಿದ ಮೇಲೆ ಆ ಟ್ರಿಪ್ ಅನ್ನು ಚಾಲಕರು ರದ್ದುಗೊಳಿಸುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಅದನ್ನು ಪರಿಹರಿಸಲು ಮಾಡಲು ಚಾಲಕರಿಗೆ ಗಮ್ಯವನ್ನು ತೋರಿಸಲು ಪ್ರಾರಂಭಿಸಿದೆ ಎಂದು ಘೋಷಿಸಲಾಗಿದೆ. ಈ ವೈಶಿಷ್ಟ್ಯವು ಈಗಾಗಲೇ 20 ನಗರಗಳಲ್ಲಿ ಲೈವ್ ಆಗಿದೆ ಮತ್ತು ಭವಿಷ್ಯದಲ್ಲಿ ಉಳಿದಿರುವ ಎಲ್ಲ ನಗರಗಳಿಗೂ ವಿಸ್ತರಿಸಲಾಗುತ್ತದೆ. ಆದರೆ ಇಲ್ಲಿ ಟ್ವಿಸ್ಟ್ ಇದೆ. ಅದೇನಪ್ಪಾ ಅಂದರೆ, ಇದು ಎಲ್ಲ ಚಾಲಕರಿಗೆ ಲೈವ್ ಅಲ್ಲ. “ಪೂರ್ವನಿರ್ಧರಿತ ಟ್ರಿಪ್ ಸ್ವೀಕಾರ ಮಿತಿಯನ್ನು ಪೂರೈಸುವ” ಚಾಲಕರಿಗೆ ಮಾತ್ರ ಈ ಫೀಚರ್ ದೊರೆಯಲಿದೆ. ಅಂದರೆ ಆ ಚಾಲಕರು ತಮ್ಮ ಪಾಲಿನ ಗುರಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ ಎಂದು ಉಬರ್ ಹೇಳಿದೆ.

ಇದನ್ನೂ ಓದಿ: Book Uber via WhatsApp: ಇನ್ಮುಂದೆ ವಾಟ್ಸ್​ಆ್ಯಪ್​ ಮೂಲಕ ಉಬರ್ ಕ್ಯಾಬ್ ಬುಕ್ ಮಾಡಿ: ಹೇಗೆ ಗೊತ್ತಾ?

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯುಯು) ಸಂಸ್ಥಾಪಕ ರಾಜ್ಯಾಧ್ಯಕ್ಷ (ತೆಲಂಗಾಣ) ಮತ್ತು ಭಾರತೀಯ ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರ (ಐಎಫ್‌ಎಟಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಕ್ ಸಲಾವುದ್ದೀನ್ ಮಾತನಾಡಿ, ಚಾಲಕ ಐದು ಟ್ರಿಪ್‌ಗಳನ್ನು ಪೂರ್ಣಗೊಳಿಸಿದಾಗ ಮಾತ್ರ ಈ ಫೀಚರ್ ಸಕ್ರಿಯವಾಗುತ್ತದೆ ಎಂದು ಹೇಳಿದ್ದಾರೆ. “ಮುಂಬರುವ ರೈಡ್‌ನ ಮಾಹಿತಿಗಾಗಿ ರೈಡ್‌ಗಳನ್ನು ಪೂರ್ಣಗೊಳಿಸುವ ಷರತ್ತು ತೆಗೆದು ಹಾಕಬೇಕು,” ಎಂದು ಪತ್ರಿಕಾ ಹೇಳಿಕೆಯಲ್ಲಿ ಉಬರ್‌ನ ಅಪ್​ಡೇಟ್​ಗಳಿಗೆ ಪ್ರತಿಕ್ರಿಯಿಸುವಾಗ ಅವರು ಹೇಳಿದ್ದಾರೆ. ಚಾಲಕರು ಒಳಬರುವ ಸವಾರಿಯನ್ನು ಸ್ವೀಕರಿಸದಿದ್ದರೆ ಅವರ ರೇಟಿಂಗ್‌ಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಒಕ್ಕೂಟದ ನಾಯಕ ಉಲ್ಲೇಖಿಸಿದ್ದಾರೆ. “ಸದ್ಯಕ್ಕೆ ಸವಾರಿ ಮುಗಿಯುವ ಮುನ್ನವೇ ಚಾಲಕರನ್ನು ಸ್ವೀಕರಿಸಲು ಬ್ಯಾಕ್-ಟು-ಬ್ಯಾಕ್ ರೈಡ್‌ಗಳನ್ನು ಮುಂದಕ್ಕೆ ಹಾಕುವ ಮೂಲಕ ಚಾಲಕರಿಗೆ ದುಃಸ್ವಪ್ನ ಎಂಬಂಥ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ,” ಎಂದು ಸಲಾವುದ್ದೀನ್ ಹೇಳಿದ್ದಾರೆ.

ಉಬರ್ ಅದರ ಪ್ರಕಟಣೆಯಲ್ಲಿ, ಚಾಲಕರು ಮತ್ತು ಸವಾರರಿಂದ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ಮತ್ತು ಮುಂಬರುವ ವಾರಗಳಲ್ಲಿ ಮಿತಿಯಲ್ಲಿ ಪುನರಾವರ್ತಿಸುವುದಾಗಿ ಉಲ್ಲೇಖಿಸಿದೆ. ಮುಂಗಡ ಗಮ್ಯಸ್ಥಾನದ ಮಾಹಿತಿಯ ಜತೆಗೆ ಸವಾರಿ ಮಾಡುವವರನ್ನು ಪ್ರಯಾಣಕ್ಕೆ ಒಯ್ಯಲು ಹೆಚ್ಚಿನ ದೂರ ಪ್ರಯಾಣಿಸಬೇಕಾದರೆ ಚಾಲಕರಿಗೆ ಹೆಚ್ಚುವರಿ ಗಳಿಕೆಯನ್ನು ಪರಿಚಯಿಸಿದೆ ಎಂದು ಉಬರ್ ಹೇಳಿದೆ. “ಚಾಲಕರು ದೀರ್ಘ ಪಿಕ್-ಅಪ್‌ಗಳಿಗಾಗಿ ಗಳಿಕೆಯನ್ನು ನೋಡಲು ಸಾಧ್ಯವಾಗುತ್ತದೆ, ಶುಲ್ಕದ ರಶೀದಿಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗುತ್ತದೆ” ಎಂದು ಕಂಪೆನಿ ಹೇಳಿದೆ. ಈ ವೈಶಿಷ್ಟ್ಯವು ಮೂಲಭೂತವಾಗಿ ಬೇಡಿಕೆ ಹೆಚ್ಚಿರುವಾಗ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಕ್ಯಾಬ್‌ಗಳ ಲಭ್ಯತೆ ಕಡಿಮೆ ಇದ್ದರೂ ಸಹ ಸವಾರರು ಕ್ಯಾಬ್‌ಗಳನ್ನು ಪಡೆಯಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಇನ್ನಷ್ಟು ಉದ್ಯಮ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Uber Price Hike: ಬೆಂಗಳೂರಿನಲ್ಲಿನ್ನು ಕ್ಯಾಬ್ ಪ್ರಯಾಣ ದುಬಾರಿ; ಉಬರ್​ನಿಂದ ಶೇ. 10ರಷ್ಟು ಬೆಲೆ ಏರಿಕೆ

Follow us on

Related Stories

Most Read Stories

Click on your DTH Provider to Add TV9 Kannada