Okinawa Okhi 90: ಬರೋಬ್ಬರಿ 150 ಕಿ.ಮೀ ಮೈಲೇಜ್​ ನೀಡಲಿದೆ ಈ ಸ್ಕೂಟರ್

Okinawa Okhi 90: ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸ್ಕೂಟರ್​ನ ಗರಿಷ್ಠ ವೇಗ 80 kmph.

Okinawa Okhi 90: ಬರೋಬ್ಬರಿ 150 ಕಿ.ಮೀ ಮೈಲೇಜ್​ ನೀಡಲಿದೆ ಈ ಸ್ಕೂಟರ್
Okinawa Okhi 90
Edited By:

Updated on: Mar 14, 2022 | 8:36 PM

ಎಲೆಕ್ಟ್ರಿಕ್ ವಾಹನ ತಯಾರಕ ಓಕಿನಾವಾ (Okinawa) ತನ್ನ ಎಲೆಕ್ಟ್ರಿಕ್ ಸ್ಕೂಟರ್ ಓಖಿ 90 (Okhi 90) ಅನ್ನು 24 ಮಾರ್ಚ್ 2022 ರಂದು ಬಿಡುಗಡೆ ಮಾಡಲಿದೆ. Okhi 90 ಓಕಿನಾವಾ ಕಂಪನಿಯ ಹೊಸ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಂಬುದು ವಿಶೇಷ. ಈಗಾಗಲೇ ಸ್ಕೂಟರ್ ಪ್ರಿಯರ ಗಮನ ಸೆಳೆದಿರುವ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ತನ್ನ ಮೈಲೇಜ್ (ರೇಂಜ್) ಮೂಲಕ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್​ನೊಂದಿಗೆ ಎಲ್ಇಡಿ ಹೆಡ್ಲ್ಯಾಂಪ್ ನೀಡಲಾಗಿದೆ. ಹಾಗೆಯೇ ಇದರಲ್ಲಿ ಕ್ರೋಮ್-ಪೇಂಟೆಡ್ ರಿಯರ್‌ವ್ಯೂ ಮಿರರ್‌ಗಳು, ಸ್ಟೆಪ್-ಅಪ್ ಪಿಲಿಯನ್ ಸೀಟ್, ಅಲಾಯ್ ವೀಲ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳನ್ನು ನೀಡಲಾಗಿದೆ.

ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯಗಳೇನು:
ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುತ್ತದೆ. ಅದು ವೇಗ, ರೇಂಜ್, ಬ್ಯಾಟರಿ ಚಾರ್ಜ್ ಮುಂತಾದ ಮಾಹಿತಿಯನ್ನು ತೋರಿಸುತ್ತದೆ. ಸ್ಕೂಟರ್ ಇ-ಸಿಮ್ ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕನೆಕ್ಟ್ ಕೂಡ ಮಾಡಬಹುದು. ಹಾಗೆಯೇ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಅಲರ್ಟ್, ಜಿಯೋ-ಫೆನ್ಸಿಂಗ್, ಇ-ಕಾಲ್, ಡಯಾಗ್ನೋಸ್ಟಿಕ್ಸ್, ರೈಡ್ ಬಿಹೇವಿಯರ್ ಅನಾಲಿಸಿಸ್ ಮುಂತಾದ ವೈಶಿಷ್ಟ್ಯಗಳು ಇದರಲ್ಲಿ ಇರಲಿದೆ.

150 ಕಿಮೀ ರೇಂಜ್:
ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸ್ಕೂಟರ್​ನ ಗರಿಷ್ಠ ವೇಗ 80 kmph. ಅಲ್ಲದೆ ಈ ಸ್ಕೂಟರ್​ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸುಮಾರು 150 ಕಿ.ಮೀ ದೂರದವರೆಗೆ ಚಲಾಯಿಸಬಹುದು. ಓಕಿನಾವಾ ಓಖಿ 90 ಈಗಾಗಲೇ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಸ್ಕೂಟರ್​ಗಳಾದ Ola S1, Simple One, Bajaj Chetak, TVS iCube ಗಳಿಗೆ ನೇರ ಪೈಪೋಟಿ ನೀಡುವ ನಿರೀಕ್ಷೆಯಿದೆ. ಅಂದಹಾಗೆ ಒಕಿನಾವಾ ಓಖಿ 90 ಎಲೆಕ್ಟ್ರಿಕ್ ಸ್ಕೂಟರ್ 1.20 ಲಕ್ಷ ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್

(Okinawa Okhi 90 electric scooter India launch date revealed)

TV9 Web

TV9 Kannada

Read More
Loading...
Unable to load recommendations.
Follow Us