Ola MoveOS 3: ಓಲಾ Move OS 3 ಇ-ಸ್ಕೂಟರ್ ಬಿಡುಗಡೆಗೆ ಸಜ್ಜು; ಯಾವಾಗ? ಹೊಸತೇನಿದೆ ಗೊತ್ತಾ?

| Updated By: Rakesh Nayak Manchi

Updated on: Jul 18, 2022 | 2:58 PM

ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಹೊಸ ಸ್ಕೂಟರ್ Ola Move OS 3 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಕಂಪನಿ ಸಿಇಒ ಭವಿಶ್ ಅಗರ್ವಾಲ್ ಅವರು, ಸ್ಕೂಟರ್​ಗೆ ಸೇರಿಸಲಾದ ಹೆಚ್ಚಿನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

Ola MoveOS 3: ಓಲಾ Move OS 3 ಇ-ಸ್ಕೂಟರ್ ಬಿಡುಗಡೆಗೆ ಸಜ್ಜು; ಯಾವಾಗ? ಹೊಸತೇನಿದೆ ಗೊತ್ತಾ?
Ola MoveOS 3
Follow us on

ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಹೊಸ ಸ್ಕೂಟರ್ Ola Move OS 3 ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದೀಗ ಗ್ರಾಹಕರಿಗೆ ಸಿಹಿ ಸಿದ್ದಿ ಏನೆಂದರೆ, ಕೊಂಚ ತಡವಾಗಿದ್ದರೂ Move OS 3 ಸ್ಕೂಟರ್​ ಬಿಡುಗಡೆಯ ಸುಳಿವು ಹಾಗೂ ಸ್ಕೂಟರ್​ನಲ್ಲಿ ಅಳವಡಿಸಲಾದ ಹೆಚ್ಚಿನ ವೈಶಿಷ್ಟ್ಯಗಳನ್ನು ಬಹಿರಂಗಗೊಳಿಸಲಾಗಿದೆ. ಈ ಸ್ಕೂಟರ್ ದೀಪಾವಳಿಯ ಮೊದಲು ಗ್ರಾಹಕರಿಗೆ ವಿತರಿಸಲಾಗುವುದು ಎಂದು ಓಲಾ ಸಿಇಒ ಮತ್ತು ಸಂಸ್ಥಾಪಕ ಭವಿಶ್ ಅಗರ್ವಾಲ್ ಹೇಳಿದ್ದಾರೆ.

Ola Move OS 2 ಗಿಂತ ಹೆಚ್ಚಿನ ನಿರೀಕ್ಷೆಯನ್ನು Ola Move OS 3 ಸ್ಕೂಟರ್​ನಲ್ಲಿ ಇಡಬಹುದು. S1 ಪ್ರೊ ಬಳಕೆದಾರರಿಗೆ ಮೌಲ್ಯವನ್ನು ಸೇರಿಸುವ ಕೆಲವು ವೈಶಿಷ್ಟ್ಯಗಳ ನವೀಕರಣಗಳು ಮತ್ತು ಸೇರ್ಪಡೆಗಳ ಬಗ್ಗೆ ಭವಿಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿದ ಅವರು,  ಹಿಲ್ ಹೋಲ್ಡ್, ರೀಜೆನ್ v2, ಹೈಪರ್ ಚಾರ್ಜಿಂಗ್, ಕರೆ ಮಾಡುವಿಕೆ ಮತ್ತು ಕೀ ಹಂಚಿಕೆ ಸೇರಿದಂತೆ ಕೆಲವು ವೈಶಿಷ್ಟ್ಯಗಳ ಸೇರ್ಪಡೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.

Move OS 3ನಲ್ಲಿ ಭವಿಶ್ ಅಗರ್ವಾಲ್ ಅವರು ಹೆಚ್ಚು ಹೈಲೈಟ್ ಮಾಡಿದ ವೈಶಿಷ್ಟ್ಯಗಳಲ್ಲಿ ಮೂಡ್ಸ್ ಒಂದಾಗಿದೆ. ಡಿಜಿಟಲ್ ಪರದೆಯ ಮೇಲೆ ಅನ್​ಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್​ನಂತೆ ಗೋಚರಿಸುವ ಪ್ರಮುಖ ವಾಹನ ಅಂಕಿಅಂಶಗಳೊಂದಿಗೆ ಇದು ರೆಟ್ರೊ ನೋಟವನ್ನು ನೀಡಲು ಸುಧಾರಿತ ಗ್ರಾಫಿಕ್ಸ್ ಅನ್ನು ನೀಡುತ್ತದೆ.

ಇತ್ತೀಚೆಗೆ, Ola Electric S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ MoveOS 2 ಅಪ್‌ಡೇಟ್ ಅನ್ನು ಹೊರತಂದಿತ್ತು. MoveOS 2 ನವೀಕರಣವು ಎಲೆಕ್ಟ್ರಿಕ್ ಸ್ಕೂಟರ್‌ಗಳ ಫರ್ಮ್‌ವೇರ್‌ನಲ್ಲಿನ ಅನೇಕ ಸಮಸ್ಯೆಗಳು ಕಂಡುಬಂದಿತ್ತು. ಈ ಸಮಸ್ಯೆಗಳನ್ನು ಕಂಪನಿಯು ಪರಿಹರಿಸಿದೆ. ಈ ನಡುವೆ MoveOS 3 ಬಿಡುಗಡೆ ದಿನಾಂಕದ ಬಗ್ಗೆ ಸುಳಿವು ನೀಡಲಾಗಿದೆ.

Published On - 2:58 pm, Mon, 18 July 22