Ola electric to royal enfield: ಆಗಸ್ಟ್‌ನಲ್ಲಿ ಬಿಡುಗಡೆಯಾಗುವ ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಕಂಪೆನಿ ಸ್ಪಷ್ಟಪಡಿಸಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಓಲಾ ಇ ಸ್ಕೂಟರ್ನ್ನು ಬುಕ್ ಮಾಡಿಕೊಂಡಿದ್ದಾರೆ.
ನೀವು ಉತ್ತಮ ಬೈಕ್ ಅಥವಾ ಸ್ಕೂಟರ್ ಖರೀದಿಸಲು, ಆಗಸ್ಟ್ ತಿಂಗಳಾಂತ್ಯದವರೆಗೆ ಕಾಯುವುದು ಉತ್ತಮ. ಏಕೆಂದರೆ ಈ ತಿಂಗಳಲ್ಲಿ ಹಲವು ಹೊಸ ಬೈಕ್ ಮತ್ತು ಸ್ಕೂಟರ್‌ಗಳು ಬಿಡುಗಡೆಯಾಗಲಿದೆ. ಈ ಪಟ್ಟಿಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಸೇರಿದಂತೆ ಅನೇಕ ದ್ವಿಚಕ್ರ ವಾಹನಗಳಿರುವುದು ವಿಶೇಷ.
ಓಲಾ ಮತ್ತು ರಾಯಲ್ ಎನ್‍ಫೀಲ್ಡ್ ಹೊರತುಪಡಿಸಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬಿಎಂಡಬ್ಲ್ಯು, ಸಿಂಪಲ್ ಒನ್ ಮತ್ತು ಹೋಂಡಾ ಹಾರ್ನೆಟ್ 2.0 ನಂತಹ ಬೈಕ್‌ಗಳು ಆಗಸ್ಟ್ನಲ್ಲೇ ಬಿಡುಗಡೆಯಾಗಲಿದೆ. ಈ ಎಲ್ಲಾ ದ್ವಿಚಕ್ರ ವಾಹನಗಳು ಹಲವು ವಿಶೇಷತೆಗಳನ್ನು ಹೊಂದಿರುವುದೇ ಇಲ್ಲಿ ವಿಶೇಷ. ಹಾಗಿದ್ರೆ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ದ್ವಿಚಕ್ರ ವಾಹನಗಳಾವುವು ನೋಡೋಣ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ (Ola electric scooter)- ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಕಂಪೆನಿ ಸ್ಪಷ್ಟಪಡಿಸಿದೆ. ಇದು ವಿದ್ಯುತ್ (ಬ್ಯಾಟರಿ) ಚಾಲಿತ ಸ್ಕೂಟರ್ ಆಗಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಓಲಾ ಇ ಸ್ಕೂಟರ್ನ್ನು ಬುಕ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಮಾಹಿತಿ ಪ್ರಕಾರ ಈ ಸ್ಕೂಟರ್ ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ ಕನಿಷ್ಠ 130 ಕ್ಕೂ ಅಧಿಕ ಮೈಲೇಜ್ (ರೇಂಜ್) ನೀಡಲಿದೆ.
ಬಿಎಂಡಬ್ಲ್ಯು ಸಿ 400 ಜಿಟಿ (BMW C 400 GT)- ಬಿಎಂಡಬ್ಲ್ಯು ಮೊಟೊರಾಡ್ ತನ್ನ ಹೊಸ ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ಅನ್ನು ಈ ತಿಂಗಳು ಬಿಡುಗಡೆ ಮಾಡಲಿದೆ. ಈ ದ್ವಿಚಕ್ರ ವಾಹನವನ್ನು ಅತ್ಯಂತ ಪ್ರೀಮಿಯಂ ಸ್ಕೂಟರ್ ಎಂದು ಕರೆಯಲಾಗಿದ್ದು, ಇದರ ಬೆಲೆ ಸುಮಾರು 5 ಲಕ್ಷ ಇರಲಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (Royal Enfield Classic 350)- ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಅನ್ನು ಸಹ ಆಗಸ್ಟ್ನಲ್ಲೇ ಬಿಡುಗಡೆ ಮಾಡಲಿದೆ. ಈ ಬೈಕ್ ವಿನ್ಯಾಸ ಈಗಾಗಲೇ ಬೈಕ್ ಪ್ರಿಯರ ಮೆಚ್ಚುಗೆ ಗಳಿಸಿದ್ದು, ಶೀಘ್ರದಲ್ಲೇ ನೂತನ ಎನ್ಫೀಲ್ಡ್ ಬಗ್ಗೆಗಿನ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಇನ್ನು ಇದು ಅಪ್ಡೇಟ್ ವರ್ಷನ್ ಅಲ್ಲ ಎಂದು ಕಂಪೆನಿ ತಿಳಿಸಿದೆ. ಹೀಗಾಗಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಯಲ್ಲಿ ಹೊಸ ಎಂಜಿನ್, ಫ್ರೇಮ್, ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನ ಕಂಡು ಬರಲಿದೆ.
ಸಿಂಪಲ್ ಒನ್ (Simple One)- ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಗಸ್ಟ್ 15 ರಂದು ಪರಿಚಯಿಸಲಾಗುತ್ತದೆ. ಈ ಸ್ಕೂಟರ್ ಅಥರ್ 450X, ಟಿವಿಎಸ್ ಐಕ್ಯೂಬ್ ಮತ್ತು ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ.
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಸಿಗ್ನಲ್ಸ್ (Royal Enfield Classic Signals)- ಹೊಸ ತಲೆಮಾರಿನ ಕ್ಲಾಸಿಕ್ 350 ಹೊರತಾಗಿ , ಕಂಪನಿಯು ಇದೇ ತಿಂಗಳು ಭಾರತದಲ್ಲಿ ಹೊಸ ಕ್ಲಾಸಿಕ್ ಸಿಗ್ನಲ್ಸ್ ಮೋಟಾರ್ ಸೈಕಲ್ ಅನ್ನು ಪರಿಚಯಿಲಿದೆ.
ಹೋಂಡಾ ಹಾರ್ನೆಟ್ 2.0 ಬೇಸ್ಡ್ ಎಡಿವಿ (Honda Hornet 2.0 based ADV)- ಹೊಂಡಾ ಕಂಪೆನಿಯು ಈ ಬೈಕ್ ಅನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಿದೆ. ಇದನ್ನು ಹೋಂಡಾದ ರೆಡ್‌ವಿಂಗ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದ್ದು, ಅದರಂತೆ ಇದರ ಬೆಲೆ ರೂ 1.20 ಲಕ್ಷದಿಂದ ರೂ 1.50 ಲಕ್ಷದವರೆಗೆ ಇರಲಿದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಪವರ್ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್ಟಾಪ್ನ್ನು ಚಾರ್ಜ್ ಮಾಡಬಹುದು
ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ
(Ola electric scooter to royal enfield: here is the list of bikes and scooters launching in August)