Tata Motors: ಟಾಟಾ ಮೋಟಾರ್ಸ್ನ ಈ ಎಲೆಕ್ಟ್ರಿಕ್ ಕಾರಿಗೆ ಸಂಸ್ಕೃತ ಹೆಸರು; 30 ನಿಮಿಷ ಚಾರ್ಜ್ ಮಾಡಿದರೆ 500 ಕಿ.ಮೀ. ಚಲಿಸುತ್ತದೆ
ಟಾಟಾ ಮೋಟಾರ್ಸ್ನ ಅವಿನ್ಯಾ ಅನಾವರಣಗೊಳಿಸಲಾಗಿದೆ. ಇದು ಎಲೆಕ್ಟ್ರಿಕ್ ಕಾರು. 30 ನಿಮಿಷ ಚಾಋ್ಜ್ ಮಾಡಿದರೆ 500 ಕಿಲೋಮಿಟರ್ ಚಲಿಸಬಹುದು.
ಇನ್ನೂ ಮುಂದುಮುಂದೆ ಎಂಥೆಂಥ ಕಾರುಗಳ ಬರುತ್ತವೋ! ಈಗ ಟಾಟಾ ಮೋಟಾರ್ಸ್ನವರು (Tata Motors) ಶುಕ್ರವಾರ ಶುದ್ಧಾನುಶುದ್ಧ ಎಲೆಕ್ಟ್ರಿಕ್ ಎಸ್ಯುವಿ ಕಲ್ಪನೆಯ ಕಾರು ಅನಾವರಣಗೊಳಿಸಿದ್ದಾರೆ, ಅದರ ಹೆಸರು ಅವಿನ್ಯಾ (Avinya). ಕಂಪೆನಿ ಹೇಳಿಕೊಂಡಿರುವ ಪ್ರಕಾರ, 30 ನಿಮಿಷಗಳಷ್ಟು ರೀಚಾರ್ಜ್ ಮಾಡಿದರೆ 500 ಕಿಲೋಮೀಟರ್ ಚಲಿಸುತ್ತದೆ. 2025ನೇ ಇಸವಿಯಲ್ಲಿ ಈ ವಾಹನ ರಸ್ತೆಗೆ ಇಳಿಯುವ ಸಾಧ್ಯತೆ ಇದೆ. ಎಲೆಕ್ಟ್ರಿಕ್ ವಾಹನವು ಶುದ್ಧ EV GEN 3 ಮೇಲೆ ಆಧಾರವಾಗಿದೆ. ಅಲ್ಟ್ರಾ ಫಾಸ್ಟ್ ಚಾರ್ಜ್ ಸಾಮರ್ಥ್ಯವನ್ನು ಬ್ಯಾಟರಿ ಬೆಂಬಲಿಸುತ್ತದೆ. ಟಾಟಾ ಮೋಟಾರ್ಸ್ ಅಂಗಸಂಸ್ಥೆ ಟಾಟಾ ಪ್ರಯಾಣಿಕರ ಎಲೆಕ್ಟ್ರಿಕ್ ಮೊಬಿಲಿಟಿ ಜಾಗತಿಕವಾಗಿ ಅವಿನ್ಯಾವನ್ನು ಅನಾವರಣಗೊಳಿಸಲಾಗಿದೆ.
“ಅವಿನ್ಯಾ ಕಲ್ಪನೆಯನ್ನು ಸಾಕಾರಗೊಳಿಸುವಾಗ ಬೇರೆ ಯಾವುದೇ ಸಾಫ್ಟ್ವೇರ್ ಕಾರುಗಳಲ್ಲಿ ಇಷ್ಟು ಚೆನ್ನಾಗಿ ರೂಪುಗೊಂಡಿರದಂತೆ ಅಭಿವೃದ್ಧಿ ಮಾಡಲಾಗುವುದು, ಸುಸ್ಥಿರವಾಗಿ ಇರಲಿದೆ, ಜತೆಗೆ ಭೂಮಿ ಮೇಲಿನ ಕಾರ್ಬನ್ ಪ್ರಮಾಣ ಕಡಿಮೆ ಮಾಡಲಿದೆ,” ಎಂದು ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ನ ಮುಖ್ಯಸ್ಥ ಎನ್.ಚಂದ್ರಶೇಖರನ್ ಹೇಳಿದ್ದಾರೆ.
ಈ ಕಾರಿನಲ್ಲಿ ಹಗುರ ತೂಕದ ವಸ್ತುಗಳನ್ನು ಬಳಸಲಾಗುವುದು. ಒಟ್ಟಾರೆಯಾಗಿ ತೂಕವನ್ನು ಕನಿಷ್ಠ ಮಟ್ಟಕ್ಕೆ ತಂದು, ಉತ್ತಮ ತೂಕದ ನಿರ್ವಹಣೆ ಮಾಡಲಾಗುವುದು. ಅಂದಹಾಗೆ ಈ ಕಾರಿನ ಹೆಸರು ಅವಿನ್ಯಾ. ಇದು ಸಂಸ್ಕೃತ ಪದ. ಇದರ ಅರ್ಥ ಆವಿಷ್ಕಾರ.
ಈ ಕಾರು ಹೊಸ ತಲೆಮಾರಿನ ತಂತ್ರಜ್ಞಾನದೊಂದಿಗೆ ಬರಲಿದೆ. ಹಿನ್ನೆಲೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ಕಾರ್ಯ ನಿರ್ವಹಿಸಲಿದೆ. ಪ್ರಯಾಣದ ವೇಳೆ ಇದರ ಅನುಕೂಲ ಅನುಭವಕ್ಕೆ ಬರಲಿದೆ. ಈ ತಿಂಗಳ ಆರಂಭದಲ್ಲಿ ಟಾಟಾ ಮೋಟಾರ್ಸ್ನಿಂದ ಮಧ್ಯಮ ಗಾತ್ರದ Curvv ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಪ್ರದರ್ಶಿಸಲಾಯಿತು. ಇದು ಕಂಪೆನಿಯ ಲೈನ್-ಅಪ್ನಲ್ಲಿ ನೆಕ್ಸಾನ್ ಇವಿಗಿಂತ ಮೇಲೆ ಇರಲಿದೆ.
ಹೆಚ್ಚಿನ ಉದ್ಯಮ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ