ಹೊಸ ವರ್ಷದ ಉಡುಗೊರೆ: ಈ ಕಂಪನಿಯು ಎಲೆಕ್ಟ್ರಿಕ್ ವಾಹನ ಖರೀದಿಗೆ ಉಚಿತವಾಗಿ 3 ಲಕ್ಷ ರೂ. ನೀಡುತ್ತಿದೆ..!

| Updated By: ಝಾಹಿರ್ ಯೂಸುಫ್

Updated on: Dec 28, 2021 | 5:47 PM

JSW ಗ್ರೂಪ್ ಉಕ್ಕು, ಇಂಧನ, ಮೂಲಸೌಕರ್ಯ, ಸಿಮೆಂಟ್, ಪೈಂಟ್, ಸಾಹಸೋದ್ಯಮಳ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿರುವ ಕಂಪೆನಿ.

ಹೊಸ ವರ್ಷದ ಉಡುಗೊರೆ: ಈ ಕಂಪನಿಯು ಎಲೆಕ್ಟ್ರಿಕ್ ವಾಹನ ಖರೀದಿಗೆ ಉಚಿತವಾಗಿ 3 ಲಕ್ಷ ರೂ. ನೀಡುತ್ತಿದೆ..!
ಸಾಂದರ್ಭಿಕ ಚಿತ್ರ
Follow us on

ಸ್ವಂತ ಕಾರು ಖರೀದಿಸುವುದು ಪ್ರತಿಯೊಬ್ಬರ ಕನಸು. ಆದರೆ ಏರುತ್ತಿರುವ ವಾಹನಗಳ ಬೆಲೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಹಣದುಬ್ಬರ ಈ ಕನಸಿಗೆ ಅತೀ ದೊಡ್ಡ ಅಡ್ಡಿಯಾಗಿದೆ. ಇದೇ ವೇಳೆ ಭಾರತೀಯ ಕಂಪನಿಯೊಂದು ತನ್ನ ಉದ್ಯೋಗಿಗಳ ಈ ಕನಸನ್ನು ನನಸು ಮಾಡಲು ಮುಂದಾಗಿದೆ. ಹೊಸ ವರ್ಷದ ಉಡುಗೊರೆಯಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಕಂಪನಿಯು ತನ್ನ ಉದ್ಯೋಗಿಗಳಿಗೆ ಮೂರು ಲಕ್ಷ ಪ್ರೋತ್ಸಾಹ ಧನವನ್ನು ಘೋಷಿಸಿದೆ. ಹೌದು, ಇಂತಹದೊಂದು ಆಫರ್ ನೀಡಿದ ಕಂಪೆನಿ ದೇಶದ ಅಗ್ರ ಕಾರ್ಪೊರೇಟ್ ಕಂಪೆನಿಗಳಲ್ಲಿ ಒಂದಾಗಿರುವ JSW ಗ್ರೂಪ್.

JSW ಗ್ರೂಪ್ ತನ್ನ ಉದ್ಯೋಗಿಗಳಿಗೆ ಜನವರಿ 1 ರಿಂದ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಿದೆ. ಆದರೆ ಇದು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮಾತ್ರ ಅನ್ವಯಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅದರಂತೆ ದೇಶದಲ್ಲಿರುವ JSW ಕಂಪೆನಿಗಳ ಉದ್ಯೋಗಿಗಳು ಎಲೆಕ್ಟ್ರಿಕ್ ವಾಹನ ಖರೀದಿಸಿದರೆ 3 ಲಕ್ಷ ರೂ.ಗಳನ್ನು ತಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ JSW ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯನ್ನು ಪರಿಚಯಿಸಿದ್ದು, ಈ ಮೂಲಕ ಉದ್ಯೋಗಿಗಳಿಗೆ ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ.

JSW ಗ್ರೂಪ್ ಘೋಷಿಸಿದ ಎಲೆಕ್ಟ್ರಿಕ್ ವೆಹಿಕಲ್ ನೀತಿಯ ಅಡಿಯಲ್ಲಿ, ಉದ್ಯೋಗಿಗಳು 2 ಅಥವಾ 4 ಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಬಹುದು. ಅಷ್ಟೇ ಅಲ್ಲ, ಎಲ್ಲಾ JSW ಕಚೇರಿಗಳು ಮತ್ತು ಸ್ಥಾವರಗಳಲ್ಲಿ ಕಂಪನಿಯ ಉದ್ಯೋಗಿಗಳಿಗೆ ಉಚಿತ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಪಾರ್ಕಿಂಗ್ ಸ್ಲಾಟ್‌ಗಳನ್ನು ಸಹ ಒದಗಿಸಲಾಗುತ್ತದೆ. ಈ ಮೂಲಕ ಉದ್ಯೋಗಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಉತ್ತೇಜಿಸುವುದು ನೀತಿಯ ಉದ್ದೇಶವಾಗಿದೆ ಎಂದು ಕಂಪನಿ ಹೇಳಿದೆ.

“ಜೆಎಸ್‌ಡಬ್ಲ್ಯೂ ಗ್ರೂಪ್‌ನ ಹೊಸ ಇವಿ ನೀತಿಯು ಒಂದು ವಿಶಿಷ್ಟ ಉಪಕ್ರಮವಾಗಿದೆ. ಇದರಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಲಿದೆ. ಭಾರತದಲ್ಲಿ ಹಸಿರು ನೀತಿಯನ್ನು ಸಕ್ರಿಯಗೊಳಿಸಲು. ನಾವು ಜವಾಬ್ದಾರಿಯುತವಾಗಿ ಮುಂದುವರಿಯುತ್ತೇವೆ ಎಂದು ಜೆಎಸ್‌ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು,

JSW ಗ್ರೂಪ್:
JSW ಗ್ರೂಪ್ ಉಕ್ಕು, ಇಂಧನ, ಮೂಲಸೌಕರ್ಯ, ಸಿಮೆಂಟ್, ಪೈಂಟ್, ಸಾಹಸೋದ್ಯಮಳ ಮತ್ತು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿರುವ ಕಂಪೆನಿ. ಕಂಪನಿಯು CO2 (ಕಾರ್ಬನ್ ಡೈಆಕ್ಸೈಡ್) ಹೊರಸೂಸುವಿಕೆಯ ಗುರಿಯನ್ನು ಸ್ವತಃ ನಿಗದಿಪಡಿಸಿದೆ. JSW ಗ್ರೂಪ್‌ನ ಭಾಗವಾಗಿರುವ JSW ಸ್ಟೀಲ್, ಹವಾಮಾನ ಬದಲಾವಣೆ ನೀತಿಯನ್ನು ಅಳವಡಿಸಿಕೊಂಡಿದೆ. 2005 ಮೂಲ ವರ್ಷದಲ್ಲಿ 2030 ರ ವೇಳೆಗೆ 42 ಪ್ರತಿಶತದಷ್ಟು ಮಹತ್ವಾಕಾಂಕ್ಷೆಯ CO2 ಹೊರಸೂಸುವಿಕೆ ಕಡಿತದ ಗುರಿಯನ್ನು ಹೊಂದಿದೆ. ಇದೀಗ ಉದ್ಯೋಗಿಗಳಿಗೆ 3 ಲಕ್ಷ ರೂ. ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನೂ ಸಹ ಉತ್ತೇಜಿಸುತ್ತಿರುವುದು ವಿಶೇಷ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(This Indian company will pay ₹3 lakh incentive to employees to buy an EV)

Published On - 5:46 pm, Tue, 28 December 21