Year Ender 2021: Google ನಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಕಾರು ಯಾವುದು ಗೊತ್ತಾ?

2021 ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕಾರು ಕಿಯಾ ಸೆಲ್ಟೋಸ್. ಈ ಕಾರನ್ನು ಪ್ರತಿ ತಿಂಗಳು 8 ಲಕ್ಷಕ್ಕೂ ಅಧಿಕ ಬಾರಿ ಹುಡುಕಲಾಗಿದೆ. ಆದರೆ...

Year Ender 2021: Google ನಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಕಾರು ಯಾವುದು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 28, 2021 | 7:58 PM

2021 ರಲ್ಲಿ Google ನಲ್ಲಿ ಹೆಚ್ಚು ಹುಡುಕಲಾದ ಟಾಪ್ 5 ಕಾರುಗಳು: ಸಾಮಾನ್ಯವಾಗಿ ನಾವು ಯಾವುದೇ ವಾಹನವನ್ನು ಖರೀದಿಸುವ ಮೊದಲು ಆನ್‌ಲೈನ್‌ನಲ್ಲಿ ಅದರ ವೈಶಿಷ್ಟ್ಯಗಳನ್ನು ಪರಿಶೀಲಿಸುತ್ತೇವೆ. ಏಕೆಂದರೆ ನಾವು ಖರೀದಿಸುವ ಕಾರು ಅಥವಾ ಬೈಕು ಎಷ್ಟು ಜನಪ್ರಿಯವಾಗಿದೆ? ಜನರು ಇಷ್ಟಪಡುತ್ತಾರೋ ಇಲ್ಲವೋ? ಎಂಬಿತ್ಯಾದಿ ಮಾಹಿತಿಗಳನ್ನು ನೋಡುತ್ತೇವೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಜನಪ್ರಿಯತೆಯನ್ನು ಅಳೆಯುವ ಒಂದು ಮಾರ್ಗವೆಂದರೆ Google.ಹೀಗೆ 2021 ರಲ್ಲಿ ಗೂಗಲ್​ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಕಾರುಗಳ ಪಟ್ಟಿಯನ್ನು ಇಲ್ಲಿ ತಿಳಿಸಲಾಗಿದೆ.

2021 ರಲ್ಲಿ ಭಾರತದಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕಾರು ಕಿಯಾ ಸೆಲ್ಟೋಸ್. ಈ ಕಾರನ್ನು ಪ್ರತಿ ತಿಂಗಳು 8 ಲಕ್ಷಕ್ಕೂ ಅಧಿಕ ಬಾರಿ ಹುಡುಕಲಾಗಿದೆ. ಆದಾಗ್ಯೂ, SUV ಅನ್ನು ಪಕ್ಕಕ್ಕೆ ಇರಿಸಿ, ಸಾಮಾನ್ಯ ಕಾರುಗಳ ವಿಭಾಗಕ್ಕೆ ಬಂದಾಗ ಮಾರುತಿ ಸುಜುಕಿ ಡಿಜೈರ್ ಡಿಜೈರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

1. ಮಾರುತಿ ಸುಜುಕಿ ಡಿಜೈರ್: ಮಾರುತಿ ಸುಜುಕಿ ಡಿಜೈರ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದು. ಅಲ್ಲದೆ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸೆಡಾನ್ ಮಾಡೆಲ್ ಕೂಡ ಇದಾಗಿದೆ. ಹೀಗಾಗಿಯೇ ಈ ಕಾರನ್ನು 2021 ರಲ್ಲಿ Google ನಲ್ಲಿ ಅತಿ ಹೆಚ್ಚು ಬಾರಿ ಹುಡುಕಲಾಗಿದೆ. ತಿಂಗಳ ಲೆಕ್ಕದಲ್ಲಿ ನೋಡಿದರೆ ಪ್ರತಿ ತಿಂಗಳು 4.5 ಲಕ್ಷ ಬಾರಿ ಹುಡುಕಲಾಗಿದೆ.

2- ಟಾಟಾ ಅಲ್ಟ್ರೋಸ್: ಟಾಟಾ ಮೋಟಾರ್ಸ್‌ನ ALTROZ ಹ್ಯಾಚ್‌ಬ್ಯಾಕ್ ಕಾರು ಕೂಡ ಭಾರತದಲ್ಲಿ ಇತ್ತೀಚಿನ ದಿನಗಳ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದು. 2021 ರಲ್ಲಿ, ಡಿಸೈರ್ ನಂತರ ಗೂಗಲ್‌ನಲ್ಲಿ ಎರಡನೇ ಅತಿ ಹೆಚ್ಚು ಬಾರಿ ಹುಡುಕಿದ್ದು ಕೂಡ ಇದೇ ಕಾರನ್ನು ಎಂಬುದು ವಿಶೇಷ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿ ಟಾಟಾ ಅಲ್ಟ್ರೋಸ್​ ಕಾರಿಗೆ 5 ಸ್ಟಾರ್ ರೇಟಿಂಗ್ ನೀಡಿರುವುದು ಮತ್ತೊಂದು ವಿಶೇಷ.

3-ಹೋಂಡಾ ಸಿಟಿ: ಹೋಂಡಾ ಸಿಟಿ ಕೂಡ ಭಾರತದಲ್ಲಿನ ಅತ್ಯಂತ ಜನಪ್ರಿಯ ಸೆಡಾನ್‌ ಕಾರುಗಳಲ್ಲಿ ಒಂದು. ಗೂಗಲ್ ಹುಡುಕಾಟದಲ್ಲಿ ಈ ಕಾರು ಮೂರನೇ ಸ್ಥಾನ ಪಡೆದಿದೆ. ಇದನ್ನು ಒಂದು ತಿಂಗಳಲ್ಲಿ ಸರಾಸರಿ 3.6 ಲಕ್ಷಕ್ಕೂ ಹೆಚ್ಚು ಬಾರಿ ಹುಡುಕಲಾಗಿದೆ.

4- ಟಾಟಾ ಟಿಯಾಗೊ: ಟಾಟಾ ಕಂಪೆನಿಯ ಟಿಯಾಗೊ ಹ್ಯಾಚ್‌ಬ್ಯಾಕ್ ಕಾರು ಗೂಗಲ್​ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕಾರುಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟಿಯಾಗೊ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿರುವುದು ವಿಶೇಷ.

5- ಮಾರುತಿ ಸುಜುಕಿ ಆಲ್ಟೊ 800: ಮಾರುತಿ ಸುಜುಕಿಯ ಆಲ್ಟೊ 800 ಅನ್ನು ಈ ವರ್ಷ ಗೂಗಲ್‌ನಲ್ಲಿ ತಿಂಗಳಿಗೆ ಸರಾಸರಿ 3 ಲಕ್ಷಕ್ಕೂ ಹೆಚ್ಚು ಬಾರಿ ಹುಡುಕಲಾಗಿದೆ. ಅದರಂತೆ ಈ ಪಟ್ಟಿಯಲ್ಲಿ ಆಲ್ಟೊ 800 ಐದನೇ ಸ್ಥಾನದಲ್ಲಿದೆ. ಅಂದಹಾಗೆ ಆಲ್ಟೊ ಕಾರು ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿದೆ. ಈ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಪ್ರಸ್ತುತ, ಇದು 800 ಸಿಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಅಲ್ಲದೆ 2022 ರಲ್ಲಿ ಮಾರುತಿ ಸುಜುಕಿ ಇಂಡಿಯಾ ನ್ಯೂ-ಜೆನ್ ಆಲ್ಟೊವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Top 5 Cars Most Searched On Google In 2021 In India)

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ