AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yezdi: ಮತ್ತೆ ರಸ್ತೆಗಿಳಿಯಲಿದೆ ರೋಡ್ ಕಿಂಗ್..!

Yezdi Roadking: ಪ್ರಸ್ತುತ ಮಾಹಿತಿಯಂತೆ ಜನವರಿ 13 ರಂದು ಹೊಸ ಯೆಜ್ಡಿ ಎರಡು ಮಾಡೆಲ್​ಗಳಲ್ಲಿ ಅನಾವರಣಗೊಳ್ಳಲಿದ್ದು, ಅದೇ ದಿನ ನೂತನ ಬೈಕ್​ನ ಬೆಲೆ ಹಾಗೂ ಇತರೆ ಮಾಹಿತಿಗಳು ಹೊರಬೀಳಲಿದೆ.

Yezdi: ಮತ್ತೆ ರಸ್ತೆಗಿಳಿಯಲಿದೆ ರೋಡ್ ಕಿಂಗ್..!
Yezdi Roadking
TV9 Web
| Updated By: ಝಾಹಿರ್ ಯೂಸುಫ್|

Updated on: Dec 29, 2021 | 7:52 PM

Share

ಮಹೀಂದ್ರಾ ಮತ್ತು ಮಹೀಂದ್ರಾ ಒಡೆತನದ ಕಂಪನಿ ಕ್ಲಾಸಿಕ್ ಲೆಜೆಂಡ್ಸ್ ಕಳೆದ ವರ್ಷ ಹಳೆಯ ಜಾವಾ ಬೈಕ್​ನ ಹೊಸ ಮಾಡೆಲ್​ಗಳನ್ನು ಪರಿಚಯಿಸಿ ಬೈಕ್​ ಪ್ರಿಯರನ್ನು ಸೆಳೆದಿತ್ತು. ಇದೀಗ ಮತ್ತೊಮ್ಮೆ ತನ್ನ ಎರಡನೇ ಬ್ರಾಂಡ್ ಯೆಜ್ಡಿಯನ್ನು ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಅದರಂತೆ ಜನವರಿ 13 ರಂದು ಹೊಸ ಯೆಜ್ಡಿ (Yezdi) ಅನಾವರಣವಾಗಲಿದೆ. ಹೊಸ ಮಾದರಿಯನ್ನು ಯೆಜ್ಡಿ ರೋಡ್​ ಕಿಂಗ್ ಅಡ್ವೆಂಚರ್ (Yezdi Roadking ADV) ಹೆಸರಿನಲ್ಲಿ ಬಿಡುಗಡೆ ಮಾಡಲಿದ್ದು, ಈ ಮೂಲಕ ಮತ್ತೊಮ್ಮೆ ರೋಡ್ ಕಿಂಗ್ ಅನ್ನು ರಸ್ತೆಗಿಳಿಸಲು ಕ್ಲಾಸಿಕ್ ಲೆಜೆಂಡ್ಸ್​ ಮುಂದಾಗಿದೆ.

1996 ರವರೆಗೆ ಭಾರತೀಯ ರಸ್ತೆಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಯೆಜ್ಡಿ ಆ ಬಳಿಕ ಸಂಪೂರ್ಣ ಸ್ಥಗಿತಗೊಂಡಿತು. ಇದಾಗ್ಯೂ ಹಳೆಯ ಯೆಜ್ಡಿಗಳು ಇಂದಿಗೂ ತನ್ನ ಡಿಮ್ಯಾಂಡ್​ ಅನ್ನು ಉಳಿಸಿಕೊಂಡಿದೆ. ಇದೀಗ ಅದೇ ಡಿಮ್ಯಾಂಡ್ ಅನ್ನು ಬಳಸಿಕೊಳ್ಳಲು ಕ್ಲಾಸಿಕ್ ಲೆಜೆಂಡ್ಸ್ ಮುಂದಾಗಿದ್ದು, ಈ ಮೂಲಕ ರಾಯಲ್ ಎನ್‌ಫೀಲ್ಡ್‌ನ ಜನಪ್ರಿಯ ಹಿಮಾಲಯನ್ ಮೋಟಾರ್​ ಸೈಕಲ್​ಗೆ ಪ್ರಬಲ ಸ್ಪರ್ಧೆಯೊಡ್ಡುವ ವಿಶ್ವಾಸದಲ್ಲಿದೆ.

ಜಾವಾ ಆಫ್ ಕ್ಲಾಸಿಕ್ ಲೆಜೆಂಡ್ಸ್ ಈಗಾಗಲೇ ಈ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಅಡ್ವೆಂಚರ್ ಸ್ಪೋರ್ಟ್ ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಉತ್ತಮ ಹಿಡಿತವನ್ನು ಹೊಂದಿದ್ದು, ಈಗ Yezdi ಈ ವಿಭಾಗದಲ್ಲಿ ರೋಡ್ಕಿಂಗ್ ADV ಮೂಲಕ ರಾಯಲ್​ ಎನ್​ಫೀಲ್ಡ್​ಗೆ ಟಕ್ಕರ್ ಕೊಡಲಿದೆ.

ಪ್ರಸ್ತುತ ಮಾಹಿತಿಯಂತೆ ಜನವರಿ 13 ರಂದು ಹೊಸ ಯೆಜ್ಡಿ ಎರಡು ಮಾಡೆಲ್​ಗಳಲ್ಲಿ ಅನಾವರಣಗೊಳ್ಳಲಿದ್ದು, ಅದೇ ದಿನ ನೂತನ ಬೈಕ್​ನ ಬೆಲೆ ಹಾಗೂ ಇತರೆ ಮಾಹಿತಿಗಳು ಹೊರಬೀಳಲಿದೆ.

1978 ಟು 2022: ಯೆಜ್ಡಿ ರೋಡ್​ ಕಿಂಗ್ ಬೈಕ್ 1978 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಇದೀಗ 44 ವರ್ಷಗಳ ಬಳಿಕ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಗಳಲ್ಲಿ ಲಗ್ಗೆಯಿಡಲು ಮುಂದಾಗಿದೆ. ಈಗಾಗಲೇ ಹಳೆಯ ಜಾವಾ ಮೂಲಕ ಬೈಕ್ ಪ್ರಿಯರನ್ನು ಸೆಳೆದಿರುವ ಮಹೀಂದ್ರಾ ಕಂಪೆನಿಯು ಯೆಜ್ಡಿ ಮೂಲಕ ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Yezdi Roadking ADV official unveil date out)