April car buying offers: ಕಾರುಗಳ ಮೇಲೆ 2021ರ ಏಪ್ರಿಲ್ನಲ್ಲಿ ಇರುವ ಭರ್ಜರಿ ರಿಯಾಯಿತಿ, ಆಫರ್ಗಳಿವು
ಕಾರು ಖರೀದಿ ಮಾಡಬೇಕು ಎಂದಿದ್ದೀರಾ? 2021ರ ಏಪ್ರಿಲ್ನಲ್ಲಿ ಕಾರು ಖರೀದಿಗೆ ಇರುವ ಆಫರ್ಗಳ ಬಗ್ಗೆ ಮಾಹಿತಿ ಇದೆ. ವಿವಿಧ ಕಂಪೆನಿಗಳು ನೀಡುತ್ತಿರುವ ಆಫರ್ಗಳು ಮತ್ತು ಡಿಸ್ಕೌಂಟ್ಗಳ ಬಗ್ಗೆ ವಿವರಗಳು ಹೀಗಿವೆ.
ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಈ ತಿಂಗಳು ಹೆಸರಾಂತ ಮಾಡೆಲ್ಗಳ ಮೇಲೆ ಕಾರು ತಯಾರಕ ಕಂಪೆನಿಗಳು ಭಾರೀ ಪ್ರಮಾಣದ ರಿಯಾಯಿತಿಗಳನ್ನು ಘೋಷಣೆ ಮಾಡಿವೆ. ಮಾರುತಿ ಸುಜುಕಿ, ರೆನಾಲ್ಟ್ ಇಂಡಿಯಾ, ಟಾಟಾ ಮೋಟಾರ್ಸ್, ಹುಂಡೈ, ಹೋಂಡಾ ಮತ್ತಿತರ ತಯಾರಕರು ಭಾರೀ ರಿಯಾಯಿತಿಗಳನ್ನು ಘೋಷಣೆ ಮಾಡಿದ್ದಾರೆ. ಈ ಅನುಕೂಲಗಳನ್ನು ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಲಾಯಲ್ಟಿ ರಿಯಾಯಿತಿ ಹೀಗೆ ವಿವಿಧ ರೂಪದಲ್ಲಿ ಪಡೆಯಬಹುದು. ಯಾವ ಆಫರ್ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.
ಮಾರುತಿ ಸುಜುಕಿ ಲಿಮಿಟೆಡ್ ನೆಕ್ಸಾ ಮಾಡೆಲ್ಗಳ ಮೇಲೆ ಮಾರುತಿಯಿಂದ ಗರಿಷ್ಠ 57,000 ರೂಪಾಯಿ ರಿಯಾಯಿತಿ ನೀಡಿದರೆ, ಅರೆನಾ ಮಾಡೆಲ್ಗಳ ಮೇಲೆ ಗರಿಷ್ಠ 35,000 ರೂಪಾಯಿ ರಿಯಾಯಿತಿ ಇದೆ. ಮಾರುತಿ ಎಕ್ಸ್6 ಖರೀದಿದಾರರಿಗೆ ನಗದು ರಿಯಾಯಿತಿ 25,000 ರೂಪಾಯಿ ತನಕ ಸಿಗುತ್ತದೆ. ಇನ್ನು ನೆಕ್ಸಾ ಮಾಡೆಲ್ಗಳ ಪೈಕಿ ಮಾರುತಿ ಬಲೆನೋಗೆ ಒಟ್ಟಾರೆ ರಿಯಾಯಿತಿ ರೂ. 33,000 ಪಡೆಯಬಹುದು. ಮಾರುತಿ ಇಗ್ನಿಸ್ಗೆ ರೂ. 43,000 ತನಕ ಮತ್ತು ಮಾರುತಿ ಸಿಯಾಜ್ಗೆ ರೂ. 30,000 ತನಕ ರಿಯಾಯಿತಿ ದೊರೆಯುತ್ತದೆ.
ಮಾರುತಿ ಎಕ್ಸ್ಎಲ್S ಮೇಲೆ ಕಾರ್ಪೊರೇಟ್ ರಿಯಾಯಿತಿ ರೂ. 4000 ಮಾತ್ರ ದೊರೆಯುತ್ತದೆ. ಮಾರುತಿ ಎಸ್ ಕ್ರಾಸ್ ಮೇಲೆ 35,000 ರೂ., S- Pressoಗೆ ರೂ. 32,000 ತನಕ, ಸೆಲೆರಿಯೊ ಮೇಲೆ ರೂ. 33,000 ತನಕ, ಮಾರುತಿ ಸುಜುಕಿ ವ್ಯಾಗನ್ R ಸಿಎನ್ಜಿ ಮತ್ತು ಪೆಟ್ರೋಲ್ ವೇರಿಯಂಟ್ಗೆ ಕ್ರಮವಾಗಿ ರೂ. 31,000 ಮತ್ತು ರೂ. 26,000 ರಿಯಾಯಿತಿ ಸಿಗುತ್ತದೆ.
ಹುಂಡೈ ಮೋಟಾರ್ಸ್ ಹುಂಡೈ ಮೋಟಾರ್ಸ್ನಿಂದ ರಿಯಾಯಿತಿ ಹಾಗೂ ಕೊಡುಗೆಗಳನ್ನು ನೀಡಲಾಗುತ್ತಿದೆ. ಸ್ಯಾಂಟ್ರೋ, ಔರಾ, ಐ20, ಗ್ರ್ಯಾಂಡ್ ಐ10 ನಿಯೋಸ್ ಮತ್ತು ಕೋನಾ ಎಲೆಕ್ಟ್ರಿಕಲ್ ವಾಹನಗಳಿಗೆ ಏಪ್ರಿಲ್ನಲ್ಲಿ ಆಫರ್ಗಳಿವೆ. ಮೊದಲ ಬಾರಿಗೆ ಕಾರು ಖರೀದಿಸುತ್ತಿರುವವರಿಗೆ ಹೊಸ ಐ20 ಮೇಲೆ ಅನುಕೂಲಗಳಿವೆ. ಆದರೆ ಕ್ರೆಟಾ, ವೆರ್ನಾ, ವೆನ್ಯೂ ಮತ್ತು ಎಲಾಂಟ್ರ ಕಾರುಗಳ ಮೇಲೆ ಯಾಚ ಆಫರ್ ಸಹ ಇಲ್ಲ.
ಹುಂಡೈ ಸ್ಯಾಂಟ್ರೋ ಮೇಲೆ ರೂ. 35,000 ತನಕ ರಿಯಾಯಿತಿ ಇದ್ದರೆ, ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಮತ್ತು ಔರ ಮೇಲೆ ರೂ. 45,000 ತನಕ ಇದೆ. ಐ 20 ಮೇಲೆ ರೂ. 15,000 ತನಕ ರಿಯಾಯಿತಿ ಇದೆ. ಇನ್ನು ಕಂಪೆನಿಯ ಎಲೆಕ್ಟ್ರಿಕಲ್ ವಾಹನ ಕೋನಾಗೆ ರೂ. 1.5 ಲಕ್ಷದವರೆಗೆ ನಗದು ರಿಯಾಯಿತಿ ಇದೆ.
ರೆನಾಲ್ಟ್ ಇಂಡಿಯಾ ಕ್ವಿಡ್, ಟ್ರೈಬರ್, ಡಸ್ಟರ್, ಕೈಗರ್ಗೆ ರಿಯಾಯಿತಿ ಜತೆಗೆ ಕಾರಿನ ಸಾಲದ ಮೇಲೆ ಕಡಿಮೆ ಬಡ್ಡಿ ದರ ಸಹ ಇದೆ. ಕ್ವಿಡ್ಗೆ ರೂ. 40,000 ರಿಯಾಯಿತಿ ನೀಡಲಾಗುತ್ತಿದೆ. ಬಿಎಸ್6 ಟ್ರೈಬರ್ಗೆ ಕಂಪೆನಿಯಿಂದ 45,000 ರೂಪಾಯಿ ತನಕ ರಿಯಾಯಿತಿ ಇದೆ. ಇನ್ನು ಈಗಾಗಲೇ ಇರುವ ರೆನಾಲ್ಟ್ ಗ್ರಾಹಕರಿಗೆ ಕೈಗರ್ ಖರೀದಿಗೆ ಲಾಯಲ್ಟಿ ಅನುಕೂಲ ನೀಡಲಾಗುತ್ತಿದೆ. ರೆನಾಲ್ಟ್ ಡಸ್ಟರ್ಗೆ ರೂ. 90,000 ತನಕ ರಿಯಾಯಿತಿ ದೊರೆಯುತ್ತದೆ.
ಟಾಟಾ ಮೋಟಾರ್ಸ್ ವಿವಿಧ ಮಾಡೆಲ್ಗಳ ಮೇಲೆ ಟಾಟಾ ಮೋಟಾರ್ಸ್ ರಿಯಾಯಿತಿ ನೀಡುತ್ತಿದೆ. ಟಾಟಾ ಹ್ಯಾರಿಯರ್ ಮೇಲೆ 65,000 ರೂಪಾಯಿ ತನಕ ರಿಯಾಯಿತಿ ಇದೆ. ಟಿಯಾಗೋ ಮೇಲೆ ರೂ. 25,000 ತನಕ, ನೆಕ್ಸಾನ್ ಮೇಲೆ ರೂ. 15,000, ಟೈಗೋರ್ ಮೇಲೆ 30,000 ರೂಪಾಯಿ ರಿಯಾಯಿತಿ ದೊರೆಯುತ್ತದೆ. ಟಾಟಾ ಸಫಾರಿಗೆ ಯಾವುದೇ ರಿಯಾಯಿತಿ ಇಲ್ಲ.
ಹೋಂಡಾ ಇಂಡಿಯಾ ಹೋಂಡಾ ಕಂಪೆನಿಯಿಂದ ಅಮೇಜ್, ಐದನೇ ತಲೆಮಾರಿನ ಸಿಟಿ, ಜಾಜ್ ಮತ್ತು WR-Vಗೆ ಏಪ್ರಿಲ್ 30, 2021ರ ತನಕ ರಿಯಾಯಿತಿ ಇದೆ. ಅಮೆಜ್ ಮೇಲೆ ಗರಿಷ್ಠ ರಿಯಾಯಿತಿ ರೂ. 38,000 ನೀಡಲಾಗುತ್ತಿದೆ. 5ನೇ ತಲೆಮಾರಿನ ಹೋಂಡಾ ಸಿಟಿಗೆ ರೂ. 10,000 ಇದೆ. ಇನ್ನು ಹೋಂಡಾ ಜಾಜ್ಗೆ ಗರಿಷ್ಠ ರಿಯಾಯಿತಿ ರೂ. 32,000 ಇದ್ದರೆ, WR-V ಮೇಲೆ ಗರಿಷ್ಠ ರೂ. 32,500 ಇದೆ. ಸರ್ಕಾರಿ ಉದ್ಯೋಗಿಗಳು ಮತ್ತು ಕಾರ್ಪೊರೇಟ್ಗಳಿಗೆ ವಿಶೇಷ ಅನುಕೂಲಗಳಿವೆ. ಈ ಮೇಲ್ಕಂಡ ಎಲ್ಲ ಆಫರ್ಗಳು ಏಪ್ರಿಲ್ 30, 2021ರ ತನಕ ದೇಶದಾದ್ಯಂತ ಲಭ್ಯ ಇವೆ. ಆದರೆ ಈ ಆಫರ್ಗಳು, ರಿಯಾಯಿತಿಗಳು ಒಬ್ಬ ಡೀಲರ್ನಿಂದ ಮತ್ತೊಬ್ಬರಿಗೆ ಹಾಗೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬದಲಾವಣೆ ಆಗುತ್ತದೆ.
ಇದನ್ನೂ ಓದಿ: Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು
ಇದನ್ನೂ ಓದಿ: 5G ಕನೆಕ್ಟಿವಿಟಿ ಇರುವ, ಒಂದು ಚಾರ್ಜ್ಗೆ 800 ಕಿ.ಮೀ. ಸಾಗಬಲ್ಲ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರು ಎಂಜಿ ಸೈಬರ್ಸ್ಟರ್
(Here is the various car companies offers and discounts in 2021 April)
Published On - 6:07 pm, Mon, 19 April 21