Wipro: ವಿಪ್ರೋದಿಂದ 2021ರಲ್ಲಿ ಎರಡನೇ ಬಾರಿಗೆ ವೇತನ ಹೆಚ್ಚಳ ಘೋಷಣೆ; ಶೇ 80ಕ್ಕೂ ಹೆಚ್ಚು ಮಂದಿಗೆ ಸೆ. 1ರಿಂದ ಜಾಸ್ತಿ ಸಂಬಳ

ಬೆಂಗಳೂರು ಮೂಲದ ವಿಪ್ರೋ ಕಂಪೆನಿಯಿಂದ ಸೆಪ್ಟೆಂಬರ್​ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳದ ಘೋಷಣೆ ಮಾಡಲಾಗಿದೆ. ಶೇ 80ಕ್ಕೂ ಉದ್ಯೋಗಿಗಳಿಗೆ ಇದರ ಅನುಕೂಲ ಆಗಲಿದೆ. ಈ ವರ್ಷದಲ್ಲಿ ಕಂಪೆನಿಯಿಂದ ಆಗುತ್ತಿರುವ ಎರಡನೇ ಹೆಚ್ಚಳ ಇದು.

Wipro: ವಿಪ್ರೋದಿಂದ 2021ರಲ್ಲಿ ಎರಡನೇ ಬಾರಿಗೆ ವೇತನ ಹೆಚ್ಚಳ ಘೋಷಣೆ; ಶೇ 80ಕ್ಕೂ ಹೆಚ್ಚು ಮಂದಿಗೆ ಸೆ. 1ರಿಂದ ಜಾಸ್ತಿ ಸಂಬಳ
ವಿಪ್ರೋ (ಸಾಂದರ್ಭಿಕ ಚಿತ್ರ)
Edited By:

Updated on: Jun 18, 2021 | 11:49 PM

ಬೆಂಗಳೂರು ಮೂಲದ ವಿಪ್ರೋ ಕಂಪೆನಿಯ ಶೇ 80ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸೆಪ್ಟೆಂಬರ್ 1, 2021ರಿಂದ ಅನ್ವಯ ಆಗುವಂತೆ ವೇತನ ಹೆಚ್ಚಳ ಆಗಲಿದೆ. 2021ರಲ್ಲಿ ಆಗುತ್ತಿರುವ ಎರಡನೇ ವೇತನ ಹೆಚ್ಚಳ ಇದು. “ವಿಪ್ರೋ ಕಂಪೆನಿಯಿಂದ ಸೆಪ್ಟೆಂಬರ್​ 1, 2021ಕ್ಕೆ ಜಾರಿಯಾಗುವಂತೆ ಮೆರಿಟ್ ಸ್ಯಾಲರಿ ಇನ್​ಕ್ರೀಸಸ್ (ಎಂಎಸ್​ಐ) ಆರಂಭಿಸಲಾಗುವುದು. ಕಂಪೆನಿಯ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇ 80ರಷ್ಟಾಗುವ ಇದೇ ಬ್ಯಾಂಡ್​ನ ಅರ್ಹರಿಗೆ 2021ರ ಜನವರಿಯಲ್ಲೂ ವೇತನ ಹೆಚ್ಚಿಸಲಾಗಿತ್ತು. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಇದು ಎರಡನೇ ವೇತನ ಹೆಚ್ಚಳ,” ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಈ ಹಿಂದೆ ಘೋಷಣೆ ಮಾಡಿದಂತೆ, ಬ್ಯಾಂಡ್ C1 ಮೇಲ್ಪಟ್ಟವರು (ಮ್ಯಾನೇಜರ್​ಗಳು ಮತ್ತು ಮೇಲ್ಪಟ್ಟಂತೆ) ಜೂನ್ 1ರಿಂದ ಅನ್ವಯ ಆಗುವಂತೆ ವೇತನ ಹೆಚ್ಚಳವನ್ನು ಪಡೆಯಲಿದ್ದಾರೆ. ಸರಾಸರಿಯಾಗಿ ಹೊರ ದೇಶಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಂಕಿಯ ವೇತನ ಹೆಚ್ಚಳ ಆಗಬಹುದಾದರೆ, ದೇಶದಲ್ಲೇ ಕಾರ್ಯ ನಿರ್ವಹಿಸುವವರಿಗೆ ಒಂದಂಕಿಯ ಮಧ್ಯ ಭಾಗದಲ್ಲಿ ಸಂಬಳ ಜಾಸ್ತಿ ಆಗಲಿದೆ. ಉತ್ತಮ ಪರ್ಫಾರ್ಮರ್​ಗಳಿಗೆ ಸ್ವಲ್ಪ ಮಟ್ಟಿಗೆ ಹೆಚ್ಚಾದ ಏರಿಕೆಯೇ ಆಗಲಿದೆ,” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಅಂದ ಹಾಗೆ, ಟಿಸಿಎಸ್​​ನಿಂದ ಮೊದಲಿಗೆ ಈ ಹಣಕಾಸು ವರ್ಷದ ಆರಂಭದ ಏಪ್ರಿಲ್ 1, 2021ರಿಂದಲೇ ಹೆಚ್ಚಳವನ್ನು ಘೋಷಣೆ ಮಾಡಲಾಯಿತು. ಗುಣಮಟ್ಟದ ಪ್ರತಿಭೆಗಳ ಹುಡುಕಾಟಕ್ಕೆ ಭಾರೀ ಪರದಾಟ ಪಡುತ್ತಿರುವ ಕಾಲದಲ್ಲಿ ಈ ವೇತನ ಹೆಚ್ಚಳದ ಸುದ್ದಿ ಹೊರಬರುತ್ತಿವೆ. ಇನ್ಫೋಸಿಸ್​ನಿಂದ ಇನ್ನೂ ಘೋಷಣೆ ಆಗಬೇಕಿದೆ. FY22ರಲ್ಲಿ ಪ್ರಮುಖ ಐ.ಟಿ. ಕಂಪೆನಿಗಳಿಂದ ಅನುಭವಿಗಳ ಜತೆಗೆ ಒಂದು ಲಕ್ಷದಷ್ಟು ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಡಿಜಿಟಲ್ ಬದಲಾವಣೆಯ ಕಾರಣಕ್ಕೆ ತಂತ್ರಜ್ಞಾನ ಸೇವೆ ಕ್ಷೇತ್ರದಲ್ಲಿ ಸಂಸ್ಥೆಗಳ ಸಂಖ್ಯೆಯು ವಿಶ್ವದಾದ್ಯಂತ ಜಾಸ್ತಿಯಾಗಿ, ಬೇಡಿಕೆ ಸಹ ಹೆಚ್ಚಾಗಲಿದೆ.

ಇದನ್ನೂ ಓದಿ: Wipro market capitalisation: 3 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ದಾಖಲಿಸಿದ 14ನೇ ಕಂಪೆನಿ ವಿಪ್ರೋ; ಏನಿದು ಸಾಧನೆ?

ಇದನ್ನೂ ಓದಿ: TCS employees salary hike: FY22ಕ್ಕೆ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದ ಮೊದಲ ಕಂಪೆನಿ ಟಿಸಿಎಸ್

(Bengaluru based Wipro company announced salary hike to 80 percent of employees effective from 2021 September)

Published On - 11:46 pm, Fri, 18 June 21