International Yoga Day 2022: ಈ ಆಸನಗಳು ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ

| Updated By: ಶ್ರೀದೇವಿ ಕಳಸದ

Updated on: Jun 16, 2022 | 1:28 PM

Yogasana : ಎಷ್ಟೇ ಔಷಧೋಪಚಾರ ಮಾಡಿಕೊಂಡರೂ ವ್ಯಾಯಾಮ, ಯೋಗಾಭ್ಯಾಸದಂಥ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳದಿದ್ದರೆ ಅಡ್ಡಪರಿಣಾಮಗಳಿಂದಾಗಿ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತವೆ.

International Yoga Day 2022: ಈ ಆಸನಗಳು ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ
ಸೌಜನ್ಯ : ಅಂತರ್ಜಾಲ
Follow us on

Yoga for Diabetes and Blood Pressure : ನಮ್ಮ ದೇಹದಲ್ಲಿ ರಕ್ತಪರಿಚಲನೆ ಸೂಕ್ತ ರೀತಿಯಲ್ಲಿದ್ದರೆ ಸಾಕಷ್ಟು ರೋಗಗಳಿಂದ ದೂರವಿರಬಹುದು. ಆದರೆ ನಮ್ಮ ಜೀವನಶೈಲಿ, ಆಹಾರಕ್ರಮ, ಒತ್ತಡದಿಂದಾಗಿ ರಕ್ತಪರಿಚಲನೆಯಲ್ಲಿ ಏರುಪೇರು ಉಂಟಾಗಿ ಇಂದು ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಕಾಯಿಲೆಗಳಿಗೆ ಈಡಾಗುತ್ತಿದ್ದೇವೆ. ಅದರಲ್ಲೂ ಮಧುಮೇಹ, ರಕ್ತದೊತ್ತಡದಂಥ ಕಾಯಿಲೆ ಸರ್ವೇಸಾಮಾನ್ಯವೆಂಬಂತಾಗಿದೆ. ಎಷ್ಟೇ ಔಷಧೋಪಚಾರ ಮಾಡಿಕೊಂಡರೂ ವ್ಯಾಯಾಮ, ಯೋಗಾಭ್ಯಾಸದಂಥ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳದಿದ್ದರೆ ಅಡ್ಡಪರಿಣಾಮಗಳಿಂದಾಗಿ ಮತ್ತಷ್ಟು ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಮಧುಮೇಹ ಒಳಗೊಂಡಂತೆ ಇನ್ನಿತರ ಯಾವುದೇ ಕಾಯಿಲೆಗಳು ಉಲ್ಭಣಿಸದಂತೆ ನಮ್ಮ ದೇಹವನ್ನು ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಇಲ್ಲಿರುವ ಈ ಎರಡು ಆಸನಗಳು ಪ್ರಯೋಜನಕಾರಿ.

ಪ್ರಸಾರಿತ ಪಾದೋತ್ತಾನಾಸನ 
ಈ ಆಸನವು ನಿಮ್ಮ ಕಾಲು, ಬೆನ್ನು, ತೊಡೆಗಳಿಗೆ ಬಲ ನೀಡುತ್ತದೆ. ಅಲ್ಲದೆ, ಮನಸ್ಸಿನ ಹತೋಟಿಗೂ ಇದು ಪೂರಕವಾಗಿದೆ. ಬೆನ್ನುನೋವನ್ನೂ ಇದು ನಿವಾರಿಸುತ್ತದೆ.

ವಿಧಾನ : ನೇರವಾಗಿ ನಿಲ್ಲಿ. ನಿಮ್ಮ ಕಾಲುಗಳ ಮಧ್ಯೆ ಸುಮಾರು 3 ಅಡಿ ಅಂತರವಿರಲಿ. ನಿಮ್ಮ ಕೈಗಳನ್ನು ನೆಲಕ್ಕೆ ಸಮಾನಾಂತರವಾಗಿ ಚಾಚಿ. ಉಸಿರನ್ನು ಜೋರಾಗಿ ಎಳೆದುಕೊಳ್ಳಿ. ಈಗ ಬಾಗಿ ಅಂಗೈಗಳನ್ನು ನೆಲಕ್ಕೆ ಊರಿ ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಿ. ಬೆನ್ನುಮೂಳೆಯಲ್ಲಿ ವಿರುದ್ಧ ದಿಕ್ಕಿಗೆ ಸೆಳೆತವಾಗುವಂತೆ ನಿಮ್ಮ ಭಂಗಿಯಿರಿಲಿ. ಐದಾರು ಸಲ ದೀರ್ಘ ಉಸಿರೆಳೆದುಕೊಳ್ಳುತ್ತ ನಿಧಾನ ದೇಹವನ್ನು ಮೂಲಸ್ಥಿತಿಗೆ ತಂದುಕೊಳ್ಳಿ.

ಇದನ್ನೂ ಓದಿ
Beetroot Juice Benefits: ಬೀಟ್ರೂಟ್ ಜ್ಯೂಸ್ ಕುಡಿದು ಈ ರೋಗಗಳಿಗೆ ಗುಡ್​ಬೈ ಹೇಳಿ
Art Of Yoga: ದೇಹ ಮತ್ತು ಮನಸ್ಸಿಗೆ ಸ್ಫೂರ್ತಿ ತುಂಬಿ ಆತ್ಮ ವಿಶ್ವಾಸ ಹೆಚ್ಚಿಸುವ ವೃಕ್ಷಾಸನ
Back Pain: ಬೆನ್ನು ನೋವಿದಿಯೇ? ಹಾಗಾದರೆ ಈ ಆಹಾರಗಳನ್ನು ತಿನ್ನಲೇಬೇಡಿ
Relationship: ಸಂಗಾತಿ ಜತೆ ನಿಮ್ಮ ಬಂಧ ಗಟ್ಟಿಯಾಗಿರಬೇಕೆಂದರೆ ಮಾತಿನ ಶೈಲಿ ಬದಲಿಸಿಕೊಳ್ಳಿ

ಇದನ್ನೂ ಓದಿ : International Yoga Day 2022: ಅಂತರಾಷ್ಟ್ರೀಯ ಯೋಗ ದಿನದ ಮಹತ್ವ: ಈ ವರ್ಷದ ಥೀಮ್​ ಏನು ಗೊತ್ತಾ..?

ತ್ರಿಕೋನಾಸಾನ 
ಹೃದಯದ ಆರೋಗ್ಯಕ್ಕೆ ಈ ಆಸನ ಸಹಕಾರಿ. ಇದು ಮಾನಸಿಕ ಸ್ಥಿರತೆಯೊಂದಿಗೆ ದೈಹಿಕವಾಗಿಯೂ ಶಕ್ತಿ ಕೊಡುತ್ತದೆ. ವಿಶೇಷವಾಗಿ ಕಾಲುಗಳಿಗೆ ಬಲವನ್ನೊದಗಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿರುವ ಅನವಶ್ಯಕ ಕೊಬ್ಬನ್ನು ಕರಗಿಸುತ್ತದೆ. ದೇಹದಲ್ಲಿ ಉಂಟಾಗುವ ನೋವು, ಸೆಳೆತವನ್ನು ಇದು ನಿವಾರಿಸುತ್ತದೆ. ಈ ಆಸನವನ್ನು ನಿಮ್ಮ ಅನುಕೂಲಕರ ಸಮಯದಲ್ಲಿ ಮಾಡಬಹುದು.

ಇದನ್ನೂ ಓದಿ : International Yoga Day: ಈ 5 ಯೋಗದಿಂದ ನಿಮ್ಮ ದೇಹದ ಎತ್ತರವನ್ನು ಹೆಚ್ಚಿಸಿಕೊಳ್ಳಬಹುದು! ಇಲ್ಲಿದೆ ತಜ್ಞರ ಸಲಹೆ

ವಿಧಾನ : ನಿಮ್ಮ ಕಾಲುಗಳ ನಡುವೆ ಸುಮಾರು ಮೂರು ಅಡಿ ಅಂತರವಿರಲಿ. ನಿಮ್ಮ ಎಡ ಪಾದವನ್ನು ಹೊರಗೆ ಮತ್ತು ಬಲ ಪಾದವನ್ನು ಸುಮಾರು 45 ಡಿಗ್ರಿಯಷ್ಟು ಒಳಭಾಗಕ್ಕೆ ತಿರುಗಿಸಿಕೊಳ್ಳಿ. ದೀರ್ಘವಾಗಿ ಉಸಿರಾಡಿ. ನಂತರ ತೋಳುಗಳನ್ನು ಚಾಚಿ ಅಂಗೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ನಿಧಾನ ಉಸಿರು ಬಿಡುತ್ತಾ ನಿಮ್ಮ ಎಡಭಾಗಕ್ಕೆ ತಿರುಗಿ ಸೊಂಟದಭಾಗಕ್ಕೆ ಒತ್ತಡ ಕೊಡಿ. ನಿಮ್ಮ ಎಡಗೈ ಈಗ ನಿಮ್ಮ ಎಡಪಾದವನ್ನು ಸ್ಪರ್ಶಿಸಲಿ.  ನಿಮ್ಮ ಇನ್ನೊಂದು ಕೈ ಆಕಾಶಮುಖಿಯಾಗಿ ಚಾಚಲಿ. ಎರಡೂ ಕಾಲುಗಳು ದೃಢವಾಗಿರಲಿ. ಮೊಣಕಾಲುಗಳು ಮಡಚಬೇಡಿ. ಇದೇ ಭಂಗಿಯಲ್ಲಿದ್ದು ಸುಮಾರು ಏಳೆಂಟುಬಾರಿ ದೀರ್ಘವಾಗಿ ಉಸಿರಾಡಿ. ಇದೇ ವಿಧಾನವನ್ನು ಇನ್ನೊಂದು ಬದಿಗೂ ಅನುಸರಿಸಿ.

 

Published On - 1:28 pm, Thu, 16 June 22