Relationship: ಸಂಗಾತಿ ಜತೆ ನಿಮ್ಮ ಬಂಧ ಗಟ್ಟಿಯಾಗಿರಬೇಕೆಂದರೆ ಮಾತಿನ ಶೈಲಿ ಬದಲಿಸಿಕೊಳ್ಳಿ

ಒಂದು ಸಂಬಂಧದಲ್ಲಿ ಉತ್ತಮ ಸಂವಹನ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಗಾತಿಯ ನಡುವೆ ಒಳ್ಳೆಯ ಸಂವಹನ ಹೊಂದುವುದು ಬಹಳ ಮುಖ್ಯವಾದದ್ದು, ನಿಮ್ಮ ಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನು ಅವರಿಗೆ ಮನ ಮುಟ್ಟುವಂತೆ ತಲುಪಿಸುವುದು ನಿಮ್ಮ ಕೈಯಲ್ಲಿದೆ.

Relationship: ಸಂಗಾತಿ ಜತೆ ನಿಮ್ಮ ಬಂಧ ಗಟ್ಟಿಯಾಗಿರಬೇಕೆಂದರೆ ಮಾತಿನ ಶೈಲಿ ಬದಲಿಸಿಕೊಳ್ಳಿ
Couple
Follow us
| Updated By: ನಯನಾ ರಾಜೀವ್

Updated on: Jun 14, 2022 | 9:00 AM

ಒಂದು ಸಂಬಂಧದಲ್ಲಿ ಉತ್ತಮ ಸಂವಹನ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಗಾತಿಯ ನಡುವೆ ಒಳ್ಳೆಯ ಸಂವಹನ ಹೊಂದುವುದು ಬಹಳ ಮುಖ್ಯವಾದದ್ದು, ನಿಮ್ಮ ಬೇಕು, ಬೇಡಗಳು, ಇಷ್ಟ, ಕಷ್ಟಗಳನ್ನು ಅವರಿಗೆ ಮನ ಮುಟ್ಟುವಂತೆ ತಲುಪಿಸುವುದು ನಿಮ್ಮ ಕೈಯಲ್ಲಿದೆ. ನೀವು ಹೇಳಲು ಹೊರಟಿರುವ ವಿಚಾರವನ್ನು ಯಾವ ಧಾಟಿಯಲ್ಲಿ ಎಂತಹ ಪದಗಳನ್ನು ಬಳಸಿ ಹೇಳುತ್ತೀರಿ ಎಂಬುದು ಮುಖ್ಯ, ನಿಮ್ಮ ಧಾಟಿ ಮನಸ್ಸು ಹಾಳು ಮಾಡುವಂತಿದ್ದರೆ ಸಂಬಂಧದಲ್ಲಿ ಬಿರುಕು, ಭಿನ್ನಾಭಿಪ್ರಾಯ ಮೂಡಬಹುದು.

ಕೆಲವೊಮ್ಮೆ ಬೇರೊಬ್ಬರು ಮಾತನ್ನು ಆರಂಭಿಸುವ ಮುನ್ನವೇ ನಾವು ಇದನ್ನೇ ಹೇಳಲು ಹೊರಟಿದ್ದಾರೆ ಎಂದು ಊಹಿಸಿಕೊಂಡು ನಾವೇ ಮಾತು ಮುಂದುವರೆಸುತ್ತೇವೆ. ಆದರೆ ಸಂಬಂಧವನ್ನು ಉಳಿಸಿಕೊಳ್ಳಬೇಕಿದ್ದರೆ ತಾಳ್ಮೆ ಪ್ರಮುಖವಾಗಿ ಬೇಕಾಗುತ್ತದೆ.

ಸಮಸ್ಯೆಗಳಿಗಿಂತ ಪರಿಹಾರಕ್ಕೆ ನಾವು ಹೆಚ್ಚಿನ ಒತ್ತು ಕೊಡಬೇಕಾಗುತ್ತದೆ, ನಮ್ಮ ಆಸೆಗಳನ್ನು ನೆರವೇರಿಸಲು ನಮ್ಮ ಸಂಗಾತಿಗೆ ಸಾಧ್ಯವಿಲ್ಲ ಎಂದು ನೀವೇ ಮನಸ್ಸಿನಲ್ಲಿ ಊಹಿಸಿಕೊಂಡರೆ ಹೇಗೆ? ನಿಮ್ಮ ಆಸೆಗಳನ್ನು ಮುಕ್ತವಾಗಿ ಅವರ ಬಳಿ ಹೇಳಿಕೊಳ್ಳಬೇಕು. ಅದನ್ನು ಹೇಳಿಕೊಳ್ಳಲು ಕೂಡ ವಿಧಾನಗಳಿವೆ.

ಸಂಗಾತಿ ಬಳಿ ರಿಕ್ವೆಸ್ಟ್ ಮಾಡಿ -ನಾನು ಅಡುಗೆ ತಯಾರು ಮಾಡೋ ಟೈಂ ಅಲ್ಲಿ ಮಕ್ಕಳನ್ನು ಪ್ಲೀಸ್ ಬೇರೆ ರೋಂಗೆ ಕರೆದುಕೊಂಡು ಹೋಗಿ -ಒಂದು ವಾರ ತುಂಬಾ ಕೆಲಸವಿತ್ತು, ಶುಕ್ರವಾರ ನಾನು ನನಗಾಗಿ ಟೈಂ ಕೊಡಬೇಕು ಅಂದ್ಕೊಂಡಿದೀನಿ ನೀವು ಏನಂತೀರಾ -ನಮ್ಮದೇ ಆದ ಪ್ರಪಂಚದಲ್ಲಿ ನಾನು ಇರಲು ಇಷ್ಟಪಡ್ತೀನಿ, ನೀನು ನನ್ನ ಜತೆ ಇರ್ತೀಯ ಅಲ್ವಾ? -ನಿತ್ಯ ಮನೆಯಲ್ಲಿ ಇಬ್ರಿಗೂ ಕೆಲಸ ಮಾಡಿ ಮಾಡಿ ಸಾಕಾಗಿದೆ, ನಮಗೆ ನಾವು ಟೈಂ ಕೊಡೋಕೆ ಆಗ್ತಿಲ್ಲ, ಮನೆಗೆಲಸದವರನ್ನು ಇಟ್ಟುಕೊಳ್ಳೋಣ ಅಂದುಕೊಂಡಿದ್ದೀನಿ ನಿಮ್ಮ ಅಭಿಪ್ರಾಯವೇನು?

-ತುಂಬಾ ಸ್ಟ್ರೆಸ್ ಅನಿಸುತ್ತಿದೆ, ಹೊರಗಡೆ ಹೋಗಿ ಊಟ ಮಾಡಿ ಬರೋಣವೇ?

ಹೀಗೆ ನೀವು ವಿಷಯವನ್ನು ಹೇಗೆ ಪ್ರಸ್ತುತಪಡಿಸುತ್ತೀರಿ ಎಂಬುದರ ಮೇಲೆ ನಿಮ್ಮ ಸಂಬಂಧ ಹೇಗಿರುತ್ತದೆ ಎನ್ನುವುದನ್ನು ಊಹಿಸಬಹುದು. ನೀವು ಹೇಳುವ ವಿಚಾರವನ್ನೇ ಒಮ್ಮೆ ಶಾಂತತೆಯಿಂದ ಹೇಳಿ ನೋಡಿ, ಖಂಡಿತವಾಗಿಯೂ ನಿಮ್ಮ ಸಂಗಾತಿ ನಿಮ್ಮ ಮಾತುಗಳನ್ನು ತೆಗೆದು ಹಾಕುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ