ಚಾಮರಾಜನಗರ: ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತಂದು ಕೊಡೋ ದೇಗುಲಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿರೋ ಹನೂರಿನ ಮಲೆ ಮಹದೇಶ್ವರ ದೇವಾಲಯ ಈ ಬಾರಿಯ ಶಿವರಾತ್ರಿ ಜಾತ್ರೆ ವೇಳೆ ಬರೋಬ್ಬರಿ 1 ಕೋಟಿ 50 ಸಾವಿರ ಆದಾಯ ಮಾಡಿದೆ. ಅದು ಕೂಡ ಕೇವಲ ಲಾಡು ಮಾರಾಟದಲ್ಲಿ.
ಮಲೆಮಹದೇಶ್ವರ ದೇವಾಲಯ ಅತಿ ಹೆಚ್ಚು ಭಕ್ತರನ್ನು ಹೊಂದಿದೆ. ಈ ಬಾರಿ ನಡೆದ ಶಿವರಾತ್ರಿ ಜಾತ್ರೆ ವೇಳೆ ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ ಗಳಿಸಿದೆ. ಬರೋಬ್ಬರಿ 6 ಲಕ್ಷ 20 ಸಾವಿರ ಲಾಡುಗಳು ಮಾರಾಟವಾಗಿದ್ದು, ಕೌಂಟರ್ ಗಳಲ್ಲೇ 5 ಲಕ್ಷದ 2 ಸಾವಿರ ಲಾಡು ಮಾರಾಟವಾಗಿದೆ. ಕೇವಲ ಐದು ದಿನಗಳಲ್ಲಿ ಲಾಡು ಮಾರಾಟದಿಂದ ಬರೋಬ್ಬರಿ 1 ಕೋಟಿ 50 ಸಾವಿರ ಆದಾಯ ಬಂದಿದೆ.
ಶಿವರಾತ್ರಿ ಜಾತ್ರೆಯಲ್ಲಿ ನಿತ್ಯ ದಾಸೋಹಕ್ಕೆಂದು 31,900 ಕೆ.ಜಿ.ಅಕ್ಕಿ ಮತ್ತು 4733 ಲೀಟರ್ ಸೂರ್ಯಕಾಂತಿ ಎಣ್ಣೆ ಖರ್ಚಾಗುತ್ತೆ. ಆದರೆ ಜಾತ್ರೆಗೆಂದು ಭಕ್ತರಿಂದಲೇ 26 ಕ್ವಿಂಟಾಲ್, 226 ಕೆ ಜಿ ಅಕ್ಕಿ ಸಂಗ್ರಹವಾಗಿದೆ ಎಂದು ಮಲೆ ಮಹದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
Published On - 11:52 am, Fri, 28 February 20