ಅಧಿಕಾರಿಯ ಎಡವಟ್ಟು: ನೆರೆ ಪರಿಹಾರ ವಿತರಣೆಯಲ್ಲಿ ಅನ್ಯಾಯ?
ಮೈಸೂರು: ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ? 5 ಲಕ್ಷ ಪರಿಹಾರ ಬದಲಿಗೆ ₹2,100 ಚೆಕ್ ವಿತರಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಸರಿಯಾಗಿ ಪರಿಹಾರ ಸಿಗದೆ ಕುಟುಂಬಗಳು ಕಂಗಾಲಾಗಿವೆ. ನಂಜನಗೂಡು ತಾಲೂಕಿನ ಕಪ್ಪುಸೋಗೆ ಗ್ರಾಮದ ಮಹದೇವಯ್ಯ ಕುಟುಂಬಸ್ಥರು ಈಗ ಆತಂಕದಲ್ಲಿದ್ದಾರೆ. ಯಾಕಂದ್ರೆ 6 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮಹದೇವಯ್ಯ ಮನೆ ನೆಲಸಮವಾಗಿತ್ತು. ಈ ವೇಳೆ ದೇವರ ದಯೆ ಇಂದ ಈ ಬಡ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ಹಾನಿ ಸರ್ವೆ […]
ಮೈಸೂರು: ನೆರೆ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ? 5 ಲಕ್ಷ ಪರಿಹಾರ ಬದಲಿಗೆ ₹2,100 ಚೆಕ್ ವಿತರಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಸರಿಯಾಗಿ ಪರಿಹಾರ ಸಿಗದೆ ಕುಟುಂಬಗಳು ಕಂಗಾಲಾಗಿವೆ.
ನಂಜನಗೂಡು ತಾಲೂಕಿನ ಕಪ್ಪುಸೋಗೆ ಗ್ರಾಮದ ಮಹದೇವಯ್ಯ ಕುಟುಂಬಸ್ಥರು ಈಗ ಆತಂಕದಲ್ಲಿದ್ದಾರೆ. ಯಾಕಂದ್ರೆ 6 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಮಹದೇವಯ್ಯ ಮನೆ ನೆಲಸಮವಾಗಿತ್ತು. ಈ ವೇಳೆ ದೇವರ ದಯೆ ಇಂದ ಈ ಬಡ ಕುಟುಂಬ ಪ್ರಾಣಾಪಾಯದಿಂದ ಪಾರಾಗಿತ್ತು. ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ಹಾನಿ ಸರ್ವೆ ಮಾಡಿದ್ರು. ಆದ್ರೀಗ ₹5 ಲಕ್ಷ ಪರಿಹಾರದ ಬದಲು 2,100 ರೂ.ನ ಚೆಕ್ ನೀಡಿದ್ದಾರೆ.
ಸರ್ವೆ ವರದಿಯಲ್ಲಿ ಮಹದೇವಯ್ಯ ಮನೆ ಕೊಟ್ಟಿಗೆ ಎಂದು ನಮೂದಿಸಲಾಗಿದೆ. ಸಿಬ್ಬಂದಿ ಎಡವಟ್ಟಿನಿಂದ ಮಹದೇವಯ್ಯ ಕುಟುಂಬ ಕಂಗಾಲಾಗಿದೆ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸುಸ್ತಾಗಿರುವ ಕುಟುಂಬ ಸದ್ಯ ಸೋದರನ ಮನೆಯಲ್ಲಿ ಆಶ್ರಯ ಪಡೆಯುತ್ತಿದೆ. ಸೂಕ್ತ ಪರಿಹಾರ ನೀಡದಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ಕುಟುಂಬ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
Published On - 9:55 am, Fri, 28 February 20