ಕೋಲಾರ: ಕಳೆದ 16 ದಿನಗಳಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಮುಳಬಾಗಲು ತಾಲೂಕಿನ ಎನ್.ಚಮಕಲಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ವೃದ್ಧರು, ಮಹಿಳೆಯರು, ಯುವಕರು ಸೇರಿ 11 ಮಂದಿ ಸಾವಿಗೀಡಗಿದ್ದಾರೆ. ಸರಣಿ ಸಾವಿನಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸ್ವಚ್ಛತೆ ಅಭಾವ ಸರಣಿ ಸಾವಿಗೆ ಕಾರಣ?
ಎನ್.ಚಮಕಲಹಳ್ಳಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ವರ್ಣಾ ಸೇರಿದಂತೆ ವೈದ್ಯರ ತಂಡ ಭೇಟಿ ನೀಡಿದ್ದಾರೆ. ನೀರು ನೈರ್ಮಲ್ಯ ಸೇರಿದಂತೆ ಸ್ವಚ್ಛತೆ ಅಭಾವ ಗ್ರಾಮಸ್ಥರ ಸರಣಿ ಸಾವಿಗೆ ಕಾರಣ ಎನ್ನುತ್ತಿದ್ದಾರೆ ವೈದ್ಯರು.
ನೀರಿನ ಸ್ಯಾಂಪಲ್ ಸೇರಿದಂತೆ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನ ವೈದ್ಯರ ತಂಡ ಪರಿಶೀಲಿಸುತ್ತಿದೆ. ಕಳೆದ ಎರಡು ದಿನಗಳ ಕಾಲ ಗ್ರಾಮದಲ್ಲಿ ಆರೋಗ್ಯ ಶಿಬಿರವನ್ನು ಆರೋಗ್ಯಾಧಿಕಾರಿಗಳು ಹಮ್ಮಿಕೊಂಡಿದ್ದಾರೆ.