ಪೊಲೀಸರಿಗೆ ಶುರುವಾಯ್ತು ಸಂಕಷ್ಟ: ಮಾನವ ಹಕ್ಕುಗಳ ಆಯೋಗದಲ್ಲಿ 135 ಕೇಸ್ ದಾಖಲು, 18 ಇನ್ಸ್ಪೆಕ್ಟರ್ಗಳಿಗೆ ನೋಟಿಸ್
ಅಕ್ರಮವಾಗಿ ಬಂಧಿಸಿ, ಹಲ್ಲೆ ನಡೆಸಿದ ಬೆಂಗಳೂರಿನ ವಿವಿಧ ಠಾಣೆಗಳ 18 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ನೀಡಲು ರಾಜ್ಯ ಮಾನವ ಹಕ್ಕುಗಳ ಆಯೋಗ ನಿರ್ಧರಿಸಿದೆ. ಈ ಎಲ್ಲ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸುವಂತೆ ಮೇಲಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ.
ಬೆಂಗಳೂರು, ಡಿಸೆಂಬರ್ 10: ಅಕ್ರಮವಾಗಿ ಬಂಧಿಸಿ, ಹಲ್ಲೆ ನಡೆಸಿದ ಬೆಂಗಳೂರಿನ ವಿವಿಧ ಠಾಣೆಗಳ 18 ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ (Police Inspector) ನೋಟಿಸ್ ನೀಡಲು ರಾಜ್ಯ ಮಾನವ ಹಕ್ಕುಗಳ ಆಯೋಗ (Human Rights Commission) ನಿರ್ಧರಿಸಿದೆ. ಈ ಎಲ್ಲ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸುವಂತೆ ಮೇಲಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ. ಈ ವರ್ಷ ಮಾನವ ಹಕ್ಕುಗಳ ಆಯೋಗದಲ್ಲಿ 4500ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಅಧ್ಯಕ್ಷ ಮತ್ತು ಸದಸ್ಯರು ಇಲ್ಲದ ಕಾರಣ ಯಾವ ಪ್ರಕರಣ ಕೂಡ ತನಿಖೆಯಾಗಿರಲಿಲ್ಲ. ಈಗ ಹೊಸದಾಗಿ ಅಧ್ಯಕ್ಷ ಹಾಗೂ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ ಅಲರ್ಟ್ ಆದ ಅಧಿಕಾರಿಗಳು, ಪ್ರಾಥಮಿಕವಾಗಿ 150 ಪ್ರಕರಣಗಳನ್ನು ತಕ್ಷಣವೇ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ನಡೆದ 39 ಲಾಕಪ್ ಡೆತ್ ಪ್ರಕರಣಗಳನ್ನೂ ತನಿಖೆ ನಡೆಸಲು ಆಯೋಗ ತೀರ್ಮಾನಿಸಿದೆ.
ಇದನ್ನೂ ಓದಿ: 8 ತಿಂಗಳ ಬಳಿಕ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷ, ಸದಸ್ಯರ ನೇಮಕ
150 ಪ್ರಕರಣಗಳಲ್ಲಿ ಶೇ90 ರಷ್ಟು ಪೊಲೀಸರ ವಿರುದ್ಧ ಆರೋಪ ಕೇಳಿಬಂದಿವೆ. ಅಕ್ರಮ ಬಂಧನ, ಸಾಕ್ಷ್ಯಾಧಾರಗಳ ನಾಶ, ಸುಳ್ಳು ಪ್ರಕರಣ ದಾಖಲು, ಅಕ್ರಮವಾಗಿ ಬಂಧಿಸಿ ಹಲ್ಲೆ ಆರೋಪ, ಅಕ್ರಮವಾಗಿ ಬಂಧಿಸಿ ಹಣ ಪಡೆದು ಬಿಟ್ಟಿರುವ ಆರೋಪ ಹೀಗೆ ಪೊಲೀಸರ ಮೇಲೆ ಸುಮಾರು 135 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳನ್ನು ಜನವರಿ ಅಂತ್ಯದ ಒಳಗಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ