ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಮೇಲೆ ಮಚ್ಚು ಬೀಸಿದ್ದವ ಅಪರಾಧಿ- ಕೋರ್ಟ್ ತೀರ್ಪು: ಶಿಕ್ಷೆ ಏನು?
2013ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜ್ಯೋತಿ ಉದಯ್ ಪ್ರಕರಣಕ್ಕೆ ಇಂದು ಒಳ್ಳೇ ಅಂತ್ಯ ಸಿಕ್ಕಿದೆ. ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಮಾಡಿದ್ದ ಮಧುಕರ್ ರೆಡ್ಡಿ ಅಪರಾಧಿಯೆಂದು ಕೋರ್ಟ್ ತೀರ್ಪು ನೀಡಿದೆ.
ಬೆಂಗಳೂರು: 2013ರಲ್ಲಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಜ್ಯೋತಿ ಉದಯ್ ಪ್ರಕರಣ ಇನ್ನೇನು ಅಂತ್ಯದತ್ತ ಸಾಗಿದೆ. ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ಮಾಡಿದ್ದ ಮಧುಕರ್ ರೆಡ್ಡಿ ಅಪರಾಧಿ ಎಂದು ಸಿಸಿಹೆಚ್ ಕೋರ್ಟ್ ತೀರ್ಪು ನೀಡಿದೆ.
ನಗರದ 65ನೇ CCH ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಆದ್ರೆ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಿದೆ. ಮಧುಕರ್ ರೆಡ್ಡಿ 2013ರ ನವೆಂಬರ್ 19ರಂದು ಬಿಬಿಎಂಪಿ ಪ್ರಧಾನ ಕಚೇರಿ ಎದುರಿಗೆ ಇರುವ ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಹಣ ಡ್ರಾ ಮಾಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಅವರ ಮೇಲೆ ಹಣಕ್ಕಾಗಿ ಮಚ್ಚು ಬೀಸಿ, ಹಲ್ಲೆಗೈದಿದ್ದ.
ಇದೀಗ, ಘಟನೆ ನಡೆದು 8 ವರ್ಷಗಳ ನಂತರ ನಾಳೆ ಶಿಕ್ಷೆ ಪ್ರಕಟವಾಗಲಿದೆ. ಕೇಸ್ನಲ್ಲಿ ಅಭಿಯೋಜಕರಾಗಿ ಎಂ.ವಿ. ತ್ಯಾಗರಾಜ್ ವಾದ ಮಂಡಿಸಿದ್ದರು.
Shivamogga Blast ಅಕ್ರಮ ಗಣಿಗಾರಿಕೆ ಸಕ್ರಮ ಮಾಡುತ್ತೇವೆಂದು ಸಿಎಂ ಹೇಳಿಲ್ಲ -ಬಸವರಾಜ ಬೊಮ್ಮಾಯಿ ಸ್ಪಷ್ಟನೆ
Published On - 6:15 pm, Mon, 1 February 21