ರಾಜ್ಯದಲ್ಲಿ ಹೂಡಿಕೆಗೆ ಮಾಡಲು 241 ಕಂಪನಿಗಳಿಗೆ ಅನುಮತಿ: ಎಂಬಿ ಪಾಟೀಲ್

ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಹೂಡಿಕೆಗೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದೆ. 241 ಯೋಜನೆಗಳಲ್ಲಿ 24 ಯೋಜನೆಗಳು ಬೆಂಗಳೂರಿನಲ್ಲಿವೆ ಎಂದು ವಿಧಾನ ಪರಿಷತ್​ ಪ್ರಶ್ನೋತ್ತರ ಕಾಲಾಪದ ವೇಳೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್​ ಸದನಕ್ಕೆ ತಿಳಿಸಿದರು.

ರಾಜ್ಯದಲ್ಲಿ ಹೂಡಿಕೆಗೆ ಮಾಡಲು 241 ಕಂಪನಿಗಳಿಗೆ ಅನುಮತಿ: ಎಂಬಿ ಪಾಟೀಲ್
ಸಚಿವ ಎಂಬಿ ಪಾಟೀಲ್​
Follow us
ವಿವೇಕ ಬಿರಾದಾರ
|

Updated on: Feb 13, 2024 | 1:12 PM

ಬೆಂಗಳೂರು, ಫೆಬ್ರವರಿ 13: ಬೆಂಗಳೂರು (Bengaluru) ಹೊರತುಪಡಿಸಿ ರಾಜ್ಯದಲ್ಲಿ ಹೂಡಿಕೆಗೆ ಮಾಡಲು 241 ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಕರ್ನಾಟಕ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು ಒಟ್ಟು 6,407.82 ಕೋಟಿ ರೂಪಾಯಿ ಮೌಲ್ಯದ 128 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯಾದ್ಯಂತ 33,771 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. 128 ಯೋಜನೆಗಳಲ್ಲಿ 24 ಯೋಜನೆಗಳು ಬೆಂಗಳೂರಿನಲ್ಲಿವೆ ಎಂದು ವಿಧಾನ ಪರಿಷತ್​ (Vidhan Parishad) ಪ್ರಶ್ನೋತ್ತರ ಕಾಲಾಪದ ವೇಳೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil)​ ಸದನಕ್ಕೆ ತಿಳಿಸಿದರು. ಬಜೆಟ್​ (Budget) ಅಧಿವೇಶನದಲ್ಲಿ ಪರಿಷತ್​ ಸದಸ್ಯ ಕೇಶವ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಉದ್ದಿಮೆ ಸ್ಥಾಪನೆಯಾಗಿದೆ. ಉದ್ಯೋಗ ಸೃಷ್ಟಿಸಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.

ರಾಜ್ಯಕ್ಕೆ ಹರಿದುಬರಲಿದೆ 5.4 ಲಕ್ಷ ಕೋಟಿ ರೂ ಹೂಡಿಕೆ

ಬೆಂಗಳೂರಿನಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದ ಮೂಲಕ 57 ಕಂಪನಿಗಳೊಂದಿಗೆ ರಾಜ್ಯ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ ಈ ಎಲ್ಲಾ 57 ಒಡಂಬಡಿಕೆಗಳ ಮೊತ್ತ 5,51,369 ಕೋಟಿ ರೂ ಆಗುತ್ತದೆ. ಈ ಎಲ್ಲಾ ಯೋಜನೆಗಳು ಜಾರಿಯಾಗಲು 3ರಿಂದ 4 ವರ್ಷ ಆಗಬಹುದು ಎಂದು ಸಚಿವ ಎಂಬಿ ಪಾಟೀಲ್ ಚಳಿಗಾಲದ ಅಧಿವೇಶನದಲ್ಲಿ​ ಹೇಳಿದ್ದರು.

ಹುಬ್ಬಳ್ಳಿಯಲ್ಲಿ ನಡೆದಿದ್ದ ಎಫ್​ಎಂಸಿಜಿ ಹೂಡಿಕೆದಾರರ ಸಮಾವೇಶದಲ್ಲಿ 16 ಕಂಪನಿಗಳ ಜೊತೆ 1,275 ಕೋಟಿ ರೂ ಮೊತ್ತದ ಹೂಡಿಕೆಗೆ ಒಪ್ಪಂದಾಗಿವೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದರು. ಇನ್ವೆಸ್ಟ್ ಕರ್ನಾಟಕ ಬೆಂಗಳೂರಿನಲ್ಲಿ 2022ರ ನವೆಂಬರ್​ನಲ್ಲಿ ನಡೆದಿತ್ತು. ಎಫ್​ಎಂಸಿಜಿ ಹೂಡಿಕೆದಾರರ ಸಮಾವೇಶ ಹುಬ್ಬಳ್ಳಿಯಲ್ಲಿ ನಡೆದಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ 6,407 ಕೋಟಿ ರೂ. ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ: 24,846 ಜನರಿಗೆ ಉದ್ಯೋಗ

ಇನ್ವೆಸ್ಟ್ ಕರ್ನಾಟಕದಲ್ಲಿ ಕುದುರಿಸಲಾದ 57 ಒಡಂಬಡಿಕೆ (ಎಂಒಯು) ಪೈಕಿ 7 ಯೋಜನೆಗಳಿಗೆ ಎಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಗೆ ಭೂಮಿ, ನೀರು ಮತ್ತು ವಿದ್ಯುತ್ ಪೂರೈಕೆ ಒದಗಿಸಲಾಗುವುದು. ಇವು ಬೃಹತ್ ಯೋಜನೆಗಳಾದ್ದರಿಂದ ಕಾರ್ಯಾರಂಭಕ್ಕೆ 3-4 ವರ್ಷ ಆಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದರು.

ಇನ್ನು, ಹುಬ್ಬಳ್ಳಿಯ ಎಫ್​ಎಂಸಿಜಿ ಹೂಡಿಕೆದಾರರ ಸಮಾವೇಶದಲ್ಲಿ ಆಗಿರುವ 16 ಒಪ್ಪಂದಗಳ ಪೈಕಿ 3 ಯೋಜನೆಗಳಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಅನುಮೋದನೆ ನೀಡಲಾಗಿದೆ ಎಂದೂ ಸಚಿವರು ಸ್ಪಷ್ಟಪಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ