AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ 6,407 ಕೋಟಿ ರೂ. ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ: 24,846 ಜನರಿಗೆ ಉದ್ಯೋಗ

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಂಬಿ ಪಾಟೀಲ್, 128 ಯೋಜನೆಗಳು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮಾನ ಹೂಡಿಕೆಯನ್ನು ಖಚಿತಪಡಿಸುತ್ತವೆ. ಕ್ಲಿಯರೆನ್ಸ್ ಸಮಿತಿಯು 22 ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, ಅದರ ಹೂಡಿಕೆ ಮೌಲ್ಯವು 50 ಕೋಟಿ ರೂ. ಆಗಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ 6,407 ಕೋಟಿ ರೂ. ಹೂಡಿಕೆಯ 128 ಯೋಜನೆಗಳಿಗೆ ಅನುಮೋದನೆ: 24,846 ಜನರಿಗೆ ಉದ್ಯೋಗ
ಅಧಿಕಾರಿಗಳೊಂದಿಗೆ ಸಚಿವ ಎಂಬಿ ಪಾಟೀಲ್ ಸಭೆ
ಗಂಗಾಧರ​ ಬ. ಸಾಬೋಜಿ
|

Updated on: Feb 10, 2024 | 6:14 PM

Share

ಬೆಂಗಳೂರು, ಫೆಬ್ರವರಿ 10: ಕರ್ನಾಟಕ ರಾಜ್ಯ ಮಟ್ಟದ ಏಕ ಗವಾಕ್ಷಿ ಅನುಮೋದನೆ ಸಮಿತಿಯು (SLSWCC) ಒಟ್ಟು 6,407.82 ಕೋಟಿ ರೂಪಾಯಿ ಮೌಲ್ಯದ 128 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯಾದ್ಯಂತ 33,771 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ (MB Patil) ನೇತೃತ್ವದ ಸಮಿತಿ ಶುಕ್ರವಾರ ಈ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರು ಮೂಲದ ಕಂಪನಿಗಳಾದ ಗೋಕುಲ ಎಜುಕೇಶನ್ ಫೌಂಡೇಶನ್ (ವೈದ್ಯಕೀಯ), ಮತ್ತು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಸಲ್ಲಿಸಿದ ಪ್ರಸ್ತಾವನೆಗಳು ಕ್ರಮವಾಗಿ 484.33 ಕೋಟಿ ರೂ. ಮತ್ತು 415 ಕೋಟಿ ರೂ. ಹೂಡಿಕೆ ಮಾಡಲಿವೆ.

ಸಚಿವ ಎಂಬಿ ಪಾಟೀಲ್ ಹೇಳಿದ್ದಿಷ್ಟು 

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ಎಂಬಿ ಪಾಟೀಲ್, 128 ಯೋಜನೆಗಳು ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮಾನ ಹೂಡಿಕೆಯನ್ನು ಖಚಿತಪಡಿಸುತ್ತವೆ. ಕ್ಲಿಯರೆನ್ಸ್ ಸಮಿತಿಯು 22 ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, ಅದರ ಹೂಡಿಕೆ ಮೌಲ್ಯವು 50 ಕೋಟಿ ರೂ. ಆಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Foxconn: ದೊಡ್ಡಬಳ್ಳಾಪುರದಲ್ಲಿ ಐಫೋನ್ ಫ್ಯಾಕ್ಟರಿಗೆ 300 ಎಕರೆ ಜಾಗ: ಕಾನೂನು ತೊಡಕು ನಿವಾರಣೆ- ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ

22 ಪ್ರಸ್ತಾವನೆಗಳು ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಒಟ್ಟು 4,230.64 ಕೋಟಿ ರೂ. ಹೂಡಿಕೆಯನ್ನು ಸೆಳೆಯಲಿದ್ದು, 24,846 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. 8,425 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆಯೊಂದಿಗೆ 104 ಹೊಸ ಯೋಜನೆಗಳು, ಅದರ ಬಂಡವಾಳವು ರೂ 15 ಕೋಟಿಯಿಂದ ರೂ 50 ಕೋಟಿ ರೂ. ಆಗಿದೆ. 2,056.68 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

ಶುಕ್ರವಾರ ಸಮಿತಿಯ ಅನುಮೋದನೆಯನ್ನು ಪಡೆದ ಎರಡು ಪ್ರಸ್ತಾವನೆಗಳು ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಬಂಡವಾಳದ ಹೆಚ್ಚುವರಿ ಹೂಡಿಕೆಯನ್ನು ಒಳಗೊಳ್ಳುತ್ತವೆ. ಈ ಎರಡು ಪ್ರಸ್ತಾವನೆಗಳಿಂದ ರಾಜ್ಯಕ್ಕೆ 120.50 ಕೋಟಿ ರೂ. ಹೂಡಿಕೆ ಆಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತ ಅನುಮೋದಿಸಲಾದ ಬೃಹತ್ ಹೂಡಿಕೆ ಯೋಜನೆಗಳ ಜೊತೆಗೆ, ಕರ್ನಾಟಕದ ಭಾಗವಾಗಿ ಇತರೆ ಜಿಲ್ಲೆಗಳಲ್ಲಿ 200 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳಿಗೆ ಸಮಿತಿ ಹಸಿರು ನಿಶಾನೆ ತೋರಿಸಿದೆ.

ಇದನ್ನೂ ಓದಿ: Airbus Contract: ಏರ್​ಬಸ್​ನ ಎ220 ವಿಮಾನಗಳಿಗೆ ಬಾಗಿಲು ತಯಾರಿಕೆಯ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿ

ಜಯದಿ ಟೆಕ್‌ಮ್ಯಾಕ್ ಪ್ರೈವೇಟ್ ಲಿಮಿಟೆಡ್‌ನ ಬೆಳಗಾವಿಯಲ್ಲಿ ಮೆಷಿನ್ಡ್ ಎರಕಹೊಯ್ದವನ್ನು ಸ್ಥಾಪಿಸಲು ರೂ 485 ಕೋಟಿ ಪ್ರಸ್ತಾವನೆ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮಿಶ್ರ ಬಳಕೆಯ ಸಮಗ್ರ ಯೋಜನೆಗಾಗಿ ಧರಿವಾಲ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‌ನ ರೂ 465 ಕೋಟಿ ಹೂಡಿಕೆ, ಬೆಂಗಳೂರಿನ ಹೊರಗಿನ ಜಿಲ್ಲೆಗಳಲ್ಲಿ ಅನುಮೋದಿಸಲಾದ ದೊಡ್ಡ ಯೋಜನೆಗಳಲ್ಲಿ ಸೇರಿವೆಕೊಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.