Karnataka 2nd PUC Exam: ಹಿಜಾಬ್ ಧರಿಸಿ ಪಿಯು ಪರೀಕ್ಷೆ ಬರೆಯಲು ಅವಕಾಶ ಇಲ್ಲ: ಬಿಸಿ ನಾಗೇಶ್

ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷಾ ಕೊಠಡಿಗೆ ಬರಬೇಕು. ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. ಸಮವಸ್ತ್ರ ಇರುವ ಕಡೆ ವಿದ್ಯಾರ್ಥಿಗಳು ಪಾಲಿಸೋದು ಕಡ್ಡಾಯ.

Karnataka 2nd PUC Exam: ಹಿಜಾಬ್ ಧರಿಸಿ ಪಿಯು ಪರೀಕ್ಷೆ ಬರೆಯಲು ಅವಕಾಶ ಇಲ್ಲ: ಬಿಸಿ ನಾಗೇಶ್
ಶಿಕ್ಷಣ ಸಚಿವ ಬಿ ಸಿ ನಾಗೇಶ್
Follow us
TV9 Web
| Updated By: ಆಯೇಷಾ ಬಾನು

Updated on:Apr 19, 2022 | 11:32 AM

ಬೆಂಗಳೂರು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್(BC Nagesh) ಸುದ್ದಿಗೋಷ್ಠಿ ಕರೆದಿದ್ದು ಸಮವಸ್ತ್ರ ಧರಿಸಿ ಪರೀಕ್ಷಾ ಕೊಠಡಿಗೆ ಬರಬೇಕು. ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಎಂದು ಘೋಷಿಸಿದ್ದಾರೆ. ಹಿಜಾಬ್ ಧರಿಸಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಬೆಂಗಳೂರಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಏಪ್ರಿಲ್ 22ರಿಂದ ಮೇ 18ರವರೆಗೆ 2021-22ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಹಿಜಾಬ್ ಧರಿಸಿ ಬಂದವರಿಗೆ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಮವಸ್ತ್ರ ಕಡ್ಡಾಯ. SSLC ಮಾದರಿಯಲ್ಲೇ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದೆ ಎಂದು ಸಮವಸ್ತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಪರೀಕ್ಷಾ ಕೊಠಡಿಗೆ ಬರಬೇಕು. ಹಿಜಾಬ್ ಸೇರಿ ಯಾವುದೇ ಧಾರ್ಮಿಕ ವಸ್ತ್ರ ಧರಿಸುವಂತಿಲ್ಲ. ಸಮವಸ್ತ್ರ ಇರುವ ಕಡೆ ವಿದ್ಯಾರ್ಥಿಗಳು ಪಾಲಿಸೋದು ಕಡ್ಡಾಯ. ಸಮವಸ್ತ್ರ ಇಲ್ಲದ ಕಡೆ ಧರ್ಮಸೂಚಕ ವಸ್ತ್ರಕ್ಕೆ ಅನುಮತಿ ಇಲ್ಲ. ಪರೀಕ್ಷಾ ಕೇಂದ್ರಕ್ಕೆ ಬರುವ ಶಿಕ್ಷಕರಿಗೆ ಸಮವಸ್ತ್ರ ಕಡ್ಡಾಯ ಇಲ್ಲ. ಪರೀಕ್ಷೆಗೆ ಗೈರಾದವರಿಗೆ ಪ್ರತಿ ವರ್ಷದಂತೆ ಪೂರಕ ಪರೀಕ್ಷೆ ಇರುತ್ತದೆ ಎಂದು ತಿಳಿಸಿದ್ದಾರೆ.

ಮಾದರಿ ಪ್ರಶ್ನೆಪತ್ರಿಕೆಯಂತೆ ಅಂತಿಮ ಪರೀಕ್ಷೆ ಇರುತ್ತೆ. SSLC ಮಾದರಿಯಂತೆ ಸರಳ ರೀತಿಯಲ್ಲಿ ಪರೀಕ್ಷೆ ಇರಲಿದೆ ಎಂದು ಮಕ್ಕಳಿಗೆ ಧೈರ್ಯ ತುಂಬುವಂತೆ ಸಚಿವ ಬಿಸಿ ನಾಗೇಶ್ ಪೊಷಕರಿಗೆ ಸಲಹೆ ನೀಡಿದ್ದಾರೆ. ಏ.22 ರಿಂದ ಮೇ 18ರವರೆಗೆ ಸೆಕೆಂಡ್ ಪಿಯು ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ಪರೀಕ್ಷೆ ಇರಲಿದೆ. ಒಟ್ಟು 6,84,255 ಮಕ್ಕಳಿಂದ ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಲಾಗಿದೆ. ಈ ಪೈಕಿ 3,46,936 ಬಾಲಕರು, 3,37,319 ಬಾಲಕರಿಯರಿದ್ದಾರೆ. ಒಟ್ಟು 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತೆ. ಕಲಾ ವಿಭಾಗ 2,28,167, ವಾಣಿಜ್ಯ ವಿಭಾಗ 2,45,519, ವಿಜ್ಞಾನ ವಿಭಾಗ 2,10,569 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 5,241 ಕಾಲೇಜುಗಳಿಂದ ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪರೀಕ್ಷೆ ಪ್ರವೇಶ ಪತ್ರ ತೋರಿಸಿದ್ರೆ ಉಚಿತ ಬಸ್ ಸೇವೆ ಕಲ್ಪಿಸಲಾಗುತ್ತೆ ಎಂದು ಸಚಿವ ಬಿಸಿ ನಾಗೇಶ್ ಮಾಹಿತಿ ನೀಡಿದ್ದಾರೆ. ಇನ್ನು ಪರೀಕ್ಷೆ ಸಂಬಂಧ ಸಮಸ್ಯೆ ಇದ್ದರೆ, ದೂರು, ಮಾಹಿತಿ ಪಡೆಸಲು ಸಹಾಯವಾಣಿ ನಂಬರ್ ಬಿಡುಗಡೆ ಮಾಡಲಾಗಿದೆ. ಹೆಲ್ಪ್ ಲೈನ್ 08023080864 ಕರೆ ಮಾಡಿ ಪರೀಕ್ಷೆ ಸಂಬಂಧ ಮಾಹಿತಿ ಪಡೆಯಬಹುದು ಹಾಗೂ ದೂರು ನೀಡ ಬಹುದು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲಿಸಲೇ ಬೇಕಾದ ನಿಯಮಗಳು -ಪರೀಕ್ಷೆಗೆ ಸಮವಸ್ತ್ರ ಪಾಲನೆ ಕಡ್ಡಾಯ -ಹಿಜಾಬ್ ಧರಿಸಿ ಬಂದ್ರೆ ಅನುಮತಿ ಇಲ್ಲ -ಸಮವಸ್ತ್ರ ಇರುವ ಕಡೆ ಪಾಲಿಸೋದು ಕಡ್ಡಾಯ -ಸಮವಸ್ತ್ರ ಇಲ್ಲದ ಕಡೆ ಯಾವುದೇ ಧರ್ಮಸೂಚಕ ವಸ್ತ್ರಕ್ಕೆ ಅನುಮತಿ ಇಲ್ಲ -ಪರೀಕ್ಷೆಗೆ ಗೈರಾದವರಿಗೆ ಪ್ರತಿ ವರ್ಷದಂತೆ ಪೂರಕ ಪರೀಕ್ಷೆ ಇರುತ್ತೆ -ಶಿಕ್ಷಕರಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ -ಪರೀಕ್ಷಾ ಕೇಂದ್ರಕ್ಕೆ ಬರುವ ಶಿಕ್ಷಕರಿಗೆ ಯಾವುದೇ ಸಮವಸ್ತ್ರ ಕಡ್ಡಾಯ ಇಲ್ಲ

ಟಿಪ್ಪುವಿನ ಪೂರ್ಣ ಇತಿಹಾಸವನ್ನ ಪಠ್ಯದಿಂದ ಕೈಬಿಟ್ಟಿಲ್ಲ ಇನ್ನು ಪಠ್ಯ ಪುಸ್ತಕದಲ್ಲಿ ಟಿಪ್ಪು ಇತಿಹಾಸ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಆಧಾರ ಇಲ್ಲದ ಪಠ್ಯವನ್ನು ಮಾತ್ರ ಕಡಿತ ಮಾಡಿದ್ದೇವೆ. ವೈಭವೀಕರಣ ಮಾಡಿದ್ದಕ್ಕೆ ಮಾತ್ರ ಕಡಿತ ಮಾಡಲಾಗಿದೆ. ತಿರುಚಲಾದ ಇತಿಹಾಸಕ್ಕೆ ಮಾತ್ರ ಕಡಿವಾಣ ಹಾಕಿದ್ದೇವೆ. ಟಿಪ್ಪುವಿನ ಪೂರ್ಣ ಇತಿಹಾಸವನ್ನ ಪಠ್ಯದಿಂದ ಕೈಬಿಟ್ಟಿಲ್ಲ. ಮೈಸೂರು ಹುಲಿ ಎಂಬ ಬಿರುದನ್ನ ಪಠ್ಯದಿಂದ ತೆಗೆದಿಲ್ಲ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಹಿಂದೂಗಳಿಗೆ ಮಾತ್ರ: ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಫಲಕ ಹಾಕಿದ ಮಾಲೀಕ

ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ ವಿಜಯಪುರ ನೂತನ ಡಿಸಿ ಕಾರು ಪಲ್ಟಿ; ಡಿಸಿ ವಿಜಯ ಮಹಾಂತೇಶ ದಾನಮ್ಮ ಕುಟುಂಬಸ್ಥರಿಗೆ ಗಾಯ

Published On - 10:50 am, Tue, 19 April 22