ಅಗತ್ಯವಿರೋದು 4.55 ಲಕ್ಷ ಕೊವ್ಯಾಕ್ಸಿನ್, ಲಭ್ಯವಿರೋದು 97 ಸಾವಿರ ಮಾತ್ರ; ಏನ್ಮಾಡ್ತೀರಿ? ಹೈಕೋರ್ಟ್ ಪ್ರಶ್ನೆ

ಹೈಕೋರ್ಟ್​ನ ಪ್ರಶ್ನೆಗೆ ಉತ್ತರಿಸಿದ ಎಜಿ ಪ್ರಭುಲಿಂಗ್ ನಾವದಗಿ, ಬಾಕಿ ಇರುವ ವ್ಯಾಕ್ಸಿನ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಬಾಕಿ 3.55 ಲಕ್ಷ ಕೊವ್ಯಾಕ್ಸಿನ್ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದರು.

ಅಗತ್ಯವಿರೋದು 4.55 ಲಕ್ಷ ಕೊವ್ಯಾಕ್ಸಿನ್, ಲಭ್ಯವಿರೋದು 97 ಸಾವಿರ ಮಾತ್ರ; ಏನ್ಮಾಡ್ತೀರಿ? ಹೈಕೋರ್ಟ್ ಪ್ರಶ್ನೆ
ಕರ್ನಾಟಕ ಹೈಕೋರ್ಟ್
Follow us
guruganesh bhat
|

Updated on:May 20, 2021 | 3:27 PM

ಬೆಂಗಳೂರು: ರಾಜ್ಯದಲ್ಲಿ ಸದ್ಯ 4.55 ಲಕ್ಷ ಜನರಿಗೆ ಕೊವ್ಯಾಕ್ಸಿನ್ ಲಸಿಕೆ ಅಗತ್ಯವಿದೆ. ಆದರೆ ಕೇವಲ 97 ಸಾವಿರದಷ್ಟು ಕೊವ್ಯಾಕ್ಸಿನ್ ಮಾತ್ರ ಲಭ್ಯವಿದೆ. ಮಿಕ್ಕ ಕೊವ್ಯಾಕ್ಸಿನ್ ಪೂರೈಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಕೊವಿಡ್ ಪರಿಸ್ಥಿತಿ ನಿರ್ವಹಣೆ ಮತ್ತು ತಡೆಗಟ್ಟುವಿಕೆಯ ಕುರಿತು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಲಸಿಕೆ ವಿಚಾರದಲ್ಲಿ ತರಾಟೆಗೆ ತೆಗೆದುಕೊಂಡಿತು.

ಹೈಕೋರ್ಟ್​ನ ಪ್ರಶ್ನೆಗೆ ಉತ್ತರಿಸಿದ ಎಜಿ ಪ್ರಭುಲಿಂಗ್ ನಾವದಗಿ, ಬಾಕಿ ಇರುವ ವ್ಯಾಕ್ಸಿನ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಬಾಕಿ 3.55 ಲಕ್ಷ ಕೊವ್ಯಾಕ್ಸಿನ್ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದರು.

ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ ಗಂಭೀರ ವಿಚಾರವಾಗಿದ್ದು, ಆರೋಗ್ಯದ ಹಕ್ಕು ಜೀವಿಸುವ ಹಕ್ಕಿನ ಭಾಗ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಒಟ್ಟು 58.38 ಲಕ್ಷ ಜನರಿಗೆ 2ನೇ ಡೋಸ್ ನೀಡಬೇಕಿದ್ದು, ತಜ್ಞರ ಸಮಿತಿ ಸೂಚಿಸಿದ ಅವಧಿಯಲ್ಲಿ 2ನೇ ಡೋಸ್ ನೀಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿತು.

2 ಲಕ್ಷ ಪರಿಹಾರ ನೀಡಲು ಆದೇಶ ಚಾಮರಾಜನಗರ ಆಕ್ಸಿಜನ್​ ಕೊರತೆಯ ಕಾರಣ ಮೇ 2ರಂದು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆಕ್ಸಿಜನ್ ಕೊರತೆಯಿಂದ ಸಾವಿಗೀಡಾದವರ ಕುಟುಂಬಸ್ಥರಿಗೆ ತಕ್ಷಣಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ. ನೀವು ನಿರ್ಧರಿಸಿರುವ ಪರಿಹಾರ ತಕ್ಷಣ ನೀಡಿ, ಪರಿಹಾರದ ಪ್ರಮಾಣದ ಬಗ್ಗೆ ನಂತರ ವಿಚಾರಣೆ ಮಾಡಬಹುದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಕೊವಿಡ್ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ, ಪ್ರತಿಯೊಂದು ಜೀವವನ್ನು ಕಾಪಾಡಲು ನಾವು ಬದ್ಧ: ನರೇಂದ್ರ ಮೋದಿ

Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್​ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್​

(4.55 lakh Vaccines required but only 97 thousand available What are you doing questions High Court)

Published On - 3:12 pm, Thu, 20 May 21