ಸೈಕ್ಲೋನ್ ಅಬ್ಬರಕ್ಕೆ ಸಿಕ್ಕಿ ಸಾವನ್ನೆ ಗೆದ್ದು ಬಂದ ಕಾರವಾರ ವೃದ್ಧ

ವೃದ್ಧನೋರ್ವ ನದಿಯ ಹಿನ್ನೀರಿನಲ್ಲಿ ಕೊಚ್ಚಿ ಹೋಗಿ ಮೂರು ದಿನದಿಂದ ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಆದರೆ ಕೊನೆಗೂ ಸಾವನ್ನೆ ಗೆದ್ದು ಬಂದಿದ್ದಾರೆ. ಈ ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ.

ಸೈಕ್ಲೋನ್ ಅಬ್ಬರಕ್ಕೆ ಸಿಕ್ಕಿ ಸಾವನ್ನೆ ಗೆದ್ದು ಬಂದ ಕಾರವಾರ ವೃದ್ಧ
ಸಾವನ್ನು ಗೆದ್ದು ಬಂದ ಅಜ್ಜ
Follow us
sandhya thejappa
|

Updated on: May 20, 2021 | 2:40 PM

ಕಾರವಾರ: ತೌಕ್ತೆ ಸೈಕ್ಲೋನ್​ನಿಂದ ರಾಜ್ಯದ ಹಲವು ಕಡೆ 4-5 ದಿನಗಳ ಹಿಂದೆ ಮಳೆ ಅಬ್ಬರ ಜೋರಾಗಿತ್ತು. ಕರಾವಳಿ ಭಾಗದಲ್ಲಿ ವಾಸಿಸುವ ಜನರು ಜೀವವನ್ನು ಕೈಯಲ್ಲಿ ಹಿಡಿದು ಕೂತ್ತಿದ್ದರು. ಸಮುದ್ರದ ಅಲೆಗಳು ಜೋರಾಗಿ ಬಂದು ಅಪ್ಪಳಿಸುತ್ತಿದ್ದ ವೇಗಕ್ಕೆ ಅಲ್ಲಿ ವಾಸಿಸುವ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಕೆಲವು ಕಡೆ ಜಲಾವೃತವೂ ಅಗಿತ್ತು. ಈ ಎಲ್ಲಾ ಅವಾಂತರದ ನಡುವೆ ನದಿಯ ಹಿನ್ನೀರಿನಲ್ಲಿ ಕೊಚ್ಚಿ ಹೋಗಿದ್ದ ವೃದ್ಧರೊಬ್ಬರು ಮೂರು ದಿನದ ಬಳಿಕ ಬದುಕಿ ಬಂದಿದ್ದಾರೆ.

ವೃದ್ಧನೋರ್ವ ನದಿಯ ಹಿನ್ನೀರಿನಲ್ಲಿ ಕೊಚ್ಚಿ ಹೋಗಿ ಮೂರು ದಿನದಿಂದ ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಆದರೆ ಕೊನೆಗೂ ಸಾವನ್ನೆ ಗೆದ್ದು ಬಂದಿದ್ದಾರೆ. ಈ ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ. ವೆಂಕಟರಾಯ್ ಕೋಠಾರಕರ್ ಮೇ 16 ರ ಸಂಜೆ ಕೋಣವನ್ನು ಹುಡುಕಿಕೊಂಡು ಬರುವುದಾಗಿ ತೌಕ್ತೆ ಚಂಡಮಾರುತ ಅಬ್ಬರಿಸುತ್ತಿದ್ದ ವೇಳೆಗೆ ತೆರಳಿದ್ದರು. ಆದರೆ ತಂದೆ ಸಂಜೆಯಾದರು ಮನೆಗೆ ಬಾರದೆ ಇದ್ದಾಗ ಎಲ್ಲೆಡೆ ಹುಡುಕಾಡಿದ್ದಾರೆ.

ಕೊನೆಗೆ ಊರಿನವರಿಗೂ ವಿಷಯ ತಿಳಿಸಿದ್ದು, ಎಲ್ಲರೂ ಗಾಬರಿಗೊಂಡು ಎರಡು ದಿನ ಹುಡುಕಿದ್ದಾರೆ. ಆದರೆ ಎಲ್ಲಿಯೂ ಸಿಗದೆ ಇದ್ದಾಗ ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದರು. ಕೊನೆಗೆ ಕಾಳಿ ನದಿ ತೀರದುದ್ದಕ್ಕೂ ಹುಡುಕುತ್ತಿದ್ದಾಗ ನದಿಯ ಹಿನ್ನೀರಿನಲ್ಲಿ ಮುಳುಗಿಕೊಂಡು ಸಣ್ಣದೊಂದು ಗಿಡ ಹಿಡಿದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವುದು ಗೊತ್ತಾಗಿದೆ. ತಕ್ಷಣ ಊರಿನ ಕೆಲವರು ನದಿಗೆ ಇಳಿದು ಆತನನ್ನು ರಕ್ಷಣೆ ಮಾಡಿ ಮನೆಗೆ ಕರೆತಂದು ಆರೈಕೆ ಮಾಡಲಾಗಿದೆ. ಮೂರು ದಿನ ನೀರಿನಲ್ಲಿದ್ದ ಕಾರಣ ಅಸ್ವಸ್ಥರಾದ ಸ್ಥಿತಿಯಲ್ಲಿದ್ದಾರೆ ಎಂದು ಊರಿನ ಮಂದಿ ತಿಳಿಸಿದರು.

ಇದನ್ನೂ ಓದಿ

ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕರ್ನಾಟಕದಲ್ಲಿ ಎದುರಾಗಿದೆ ತಜ್ಞರ ಕೊರತೆ: ಸಚಿವ ಜಗದೀಶ್ ಶೆಟ್ಟರ್ ಕಳವಳ

ಕೊವಿಡ್ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ, ಪ್ರತಿಯೊಂದು ಜೀವವನ್ನು ಕಾಪಾಡಲು ನಾವು ಬದ್ಧ: ನರೇಂದ್ರ ಮೋದಿ

(Elderly man stayed in backwaters for three days at Uttara Kannada)