AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಶಾಲಾ ಶಿಕ್ಷಕರಿಗೂ ಪ್ಯಾಕೇಜ್ ಘೋಷಿಸಲು ಸಚಿವ ಸುರೇಶ್​ ಕುಮಾರ್ ಪತ್ರ; ಶಿಕ್ಷಣ ಸಚಿವರ ಬಳಿ ಪ್ಯಾಕೇಜ್ ಕೊಡಿಸೋಕೆ ಈವರೆಗೂ ಆಗಿಲ್ಲ ಎಂದ ರುಪ್ಸಾ

ಬರೀ ಪತ್ರ ಬರೆದು ಸುಮ್ನನಾದ್ರೆ ಏನೂ ಪ್ರಯೋಜನ ಆಗೊಲ್ಲ. ಮುಖ್ಯಮಂತ್ರಿಗಳಿಂದ ಏನ್ ಪ್ರತಿಕ್ರಿಯೆ ಬರುತ್ತೆ ಕಾಯುತ್ತಿರುತ್ತೇವೆ. ಪ್ಯಾಕೇಜ್ ಕೊಡಿಸುವ ಜವಾಬ್ದಾರಿ ಶಿಕ್ಷಣ ಸಚಿವರಿಗೆ ಹೊರಬೇಕು ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಖಾಸಗಿ ಶಾಲಾ ಶಿಕ್ಷಕರಿಗೂ ಪ್ಯಾಕೇಜ್ ಘೋಷಿಸಲು ಸಚಿವ ಸುರೇಶ್​ ಕುಮಾರ್ ಪತ್ರ; ಶಿಕ್ಷಣ ಸಚಿವರ ಬಳಿ ಪ್ಯಾಕೇಜ್ ಕೊಡಿಸೋಕೆ ಈವರೆಗೂ ಆಗಿಲ್ಲ ಎಂದ ರುಪ್ಸಾ
ಸಚಿವ ಎಸ್​. ಸುರೇಶ್​ ಕುಮಾರ್​
guruganesh bhat
|

Updated on:May 20, 2021 | 4:07 PM

Share

ಬೆಂಗಳೂರು: ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೋರಿ ಸಿಎಂ ಯಡಿಯೂರಪ್ಪಗೆ ಪತ್ರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಕೊವಿಡ್​ನಿಂದಾಗಿ ಎರಡು ಲಕ್ಷದಷ್ಟು ಶಿಕ್ಷಕರು, ಸಿಬ್ಬಂದಿಗೆ ತೊಂದರೆಯಾಗಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಬಜೆಟ್ ಶಾಲೆಗಳಿಗೆ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಿಸಲು ಪತ್ರದಲ್ಲಿ ಸಚಿವ ಸುರೇಶ್‌ಕುಮಾರ್ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿರುವ ಖಾಸಗಿ ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರು ಮತ್ತು ಸಿಬ್ಬಂದಿಗೆ ಪ್ಯಾಕೇಜ್ ನೀಡುವಂತೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.

ಸಚಿವ ಸುರೇಶ್ ಕುಮಾರ್ ಸಿಎಂ ಯಡಿಯೂರಪ್ಪ ಅವರಿಗೆ ಈ  ಮನವಿ ಮಾಡಿದ ಬೆನ್ನಲ್ಲೇ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಹ ಸಚಿವ ಸುರೇಶ್​ ಕುಮಾರ್​ಗೆ ಪತ್ರ ಬರೆದಿದ್ದಾರೆ. ಕಳೆದ ಒಂದು ವರ್ಷದಿಂದ ಕಷ್ಟದಲ್ಲಿರುವ ಬೋಧಕ -ಬೋಧಕೇತರರಿಗೆ ನೆರವು ಕೋರಿ ಬರೆದಿರುವ ಪತ್ರ ಹಾಗೂ ತಮ್ಮ ಕಳಕಳಿಗೆ ಅಭಿನಂದನೆ ತಿಳಿಸಿರುವ ಲೋಕೇಶ್ ತಾಳಿಕಟ್ಟೆ, ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಶಿಕ್ಷಕ ವರ್ಗ ಪ್ರತಿಭಟಿಸಿದ ಕಾರಣಗಳನ್ನು ಈಡೇರಿಸಿದ್ದೀರೇ ಎಂದು ಪ್ರಶ್ನಿಸಿದ್ದಾರೆ.

ಈ ಮೊದಲೇ ಮುಖ್ಯಮಂತ್ರಿಗಳಿಗೆ ಪ್ರಭಾವ ಬೀರಿದ್ದರೆ ಇಷ್ಟೊತ್ತಿಗೆ ಪ್ಯಾಕೇಜ್ ಘೋಷಣೆಯಾಗುತ್ತಿತ್ತೇನೊ.. ಆದ್ರೆ ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೊ ಗೊತ್ತಿಲ್ಲ. ರಾಜ್ಯದಲ್ಲಿನ 8 ಜನ ಎಂಎಲ್ ಸಿ‌ಗಳು ಶಿಕ್ಷಕರ ಪರ ಕೆಲಸ ಮಾಡಿಲ್ಲ. ಶಿಕ್ಷಣ ಸಚಿವರು ಸಿಎಂ ಪ್ಯಾಕೇಜ್ ಕೊಡಿಸೋಕೆ ಇವತ್ತಿನವರೆಗೂ ಆಗಿಲ್ಲ. ಬರೀ ಪತ್ರ ಬರೆದು ಸುಮ್ನನಾದ್ರೆ ಏನೂ ಪ್ರಯೋಜನ ಆಗೊಲ್ಲ. ಮುಖ್ಯಮಂತ್ರಿಗಳಿಂದ ಏನ್ ಪ್ರತಿಕ್ರಿಯೆ ಬರುತ್ತೆ ಕಾಯುತ್ತಿರುತ್ತೇವೆ. ಪ್ಯಾಕೇಜ್ ಕೊಡಿಸುವ ಜವಾಬ್ದಾರಿ ಶಿಕ್ಷಣ ಸಚಿವರಿಗೆ ಹೊರಬೇಕು ಎಂದು ರುಪ್ಸಾ ಸಂಘಟನೆ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವಿಷಯ ಕುರಿತು ಕಳೆದ ವರ್ಷದ ಮೇ ತಿಂಗಳಿನಲ್ಲಿ ನೀವು ಪತ್ರ ಬರೆದಿದ್ದೀರಿ. ಶಾಲೆಗಳ ದಾಖಲಾತಿ ಹಾಗೂ ಪರ್ಯಾಯ ಬೋಧನೆ ಕುರಿತು ತಾವು ಬರೆದ ಪತ್ರ ಬರೆದಿದ್ದೀರಿ. ಅವೈಜ್ಞಾನಿಕ ವಿದ್ಯಾಗಮದಿಂದ ನೂರಾರು ಶಿಕ್ಷಕರು ಬಲಿಯಾದಾಗ ನೆರವು ಕೋರಿ ಪತ್ರ ಬರೆದಿದ್ದೀರಿ. ಕನ್ನಡ ಮಾಧ್ಯಮದ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕೆನ್ನುವ ಕುರಿತು ಪತ್ರ ಬರೆದಿದ್ದೀರಿ. ಆರ್​ಟಿಇ ಶುಲ್ಕ ಮರುಪಾವತಿಯನ್ನು ತಕ್ಷಣ ಬಿಡುಗಡೆಗೊಳಿಸುವ ವಿಚಾರ ಕುರಿತು ಪತ್ರ ಬರೆದಿದ್ದೀರಿ. ಆದರೆ ಪತ್ರಗಳು ಪತ್ರಕ್ಕಷ್ಟೇ ಸೀಮಿತಗೊಂಡಿವೆ. ಈ ಬಾರಿಯಾದರೂ ಪತ್ರ ಬರೆದ ನಂತರವೂ ಹೋರಾಡಿ ಶಿಕ್ಷಕ ವರ್ಗಕ್ಕೆ ನ್ಯಾಯ ಒದಗಿಸಿ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸಚಿವ ಸುರೇಶ್ ಕುಮಾರ್​ಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೊವಿಡ್ ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಿ, ಪ್ರತಿಯೊಂದು ಜೀವವನ್ನು ಕಾಪಾಡಲು ನಾವು ಬದ್ಧ: ನರೇಂದ್ರ ಮೋದಿ

ಬೆಳಗಾವಿಯಲ್ಲಿ 20 ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ! ಸದ್ಯ ಅಡ್ಡ ಪರಿಣಾಮ ಬೀರಿಲ್ಲ; ಮುಂದೇನು?

(Karnataka Education minister S Suresh Kumar demands give covid package to private school teachers)

Published On - 4:00 pm, Thu, 20 May 21