ಹಂಪಿ ನೋಡಲು ಬಂದ ಕುಟುಂಬ ಆತ್ಮಹತ್ಯೆಗೆ ಯತ್ನ: ಓರ್ವ ಸಾವು, ಮೂರು ಪ್ರಾಣಾಪಾಯದಿಂದ ಪಾರು

| Updated By: ರಮೇಶ್ ಬಿ. ಜವಳಗೇರಾ

Updated on: Mar 19, 2025 | 4:06 PM

ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಜಯನಗರ ಜಿಲ್ಲೆ ಕೊಟ್ಟೂರ ಪಟ್ಟಣದ ಕುಟುಂಬ ಹಂಪಿಗೆ ಆಗಮಿಸಿದ್ದು, ಈ ವೇಳೆ ದಂಪತಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ಬಳಿಕ ತಾವು ಸೇವಿಸಿದ್ದಾರೆ. ಅದೃಷ್ಟವಶಾತ್​ ಮೂವರು ಮೂರು ಬದುಕಿಳಿದಿದ್ದಾರೆ.

ಹಂಪಿ ನೋಡಲು ಬಂದ ಕುಟುಂಬ ಆತ್ಮಹತ್ಯೆಗೆ ಯತ್ನ: ಓರ್ವ ಸಾವು, ಮೂರು ಪ್ರಾಣಾಪಾಯದಿಂದ ಪಾರು
Family
Follow us on

ವಿಜಯನಗರ, (ಮಾರ್ಚ್​ 19): ಸಾಲಬಾಧೆಗೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಸ್ನಾನಘಟ್ಟದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆ ಕೊಟ್ಟೂರ ಪಟ್ಟಣದ ಕುಟುಂಬ ನಿನ್ನೆ(ಮಾರ್ಚ್ 18)  ಹಂಪಿಗೆ ಬಂದಿದೆ. ಆದ್ರೆ, ಇಂದು (ಮಾರ್ಚ್​ 19)  ಸ್ನಾನಘಟ್ಟ‌ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆ. ಇದರಿಂದ ಚಂದ್ರಯ್ಯ‌(42) ಸಾವನ್ನಪ್ಪಿದ್ದರೆ, ಇನ್ನುಳಿದಂತೆ ಮೃತ ಚಂದ್ರಯ್ಯ‌ ಪತ್ನಿ ಸೌಮ್ಯ ಹಾಗೂ ಮಕ್ಕಳಾದ ಭವಾನಿ, ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

6 ವರ್ಷದಿಂದ ಕೊಟ್ಟೂರಿನಲ್ಲಿ SBI ಸೇವಾಕೇಂದ್ರ ನಡೆಸುತ್ತಿದ್ದ ಚಂದ್ರಯ್ಯ, 10 ಲಕ್ಷಕ್ಕೂ‌ ಹೆಚ್ಚು ಕೈಗಡ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಿರುಕುಳದಿಂದ ಬೇಸತ್ತು ನಿನ್ನೆ (ಮಾರ್ಚ್​ 18) ಚಂದ್ರಯ್ಯ ಕುಟುಂಬ ಹಂಪಿಗೆ ಬಂದಿದೆ. ಆದ್ರೆ, ಇಂದು (ಮಾರ್ಚ್​ 19) ಹಂಪಿ ಸ್ನಾನಘಟ್ಟ‌ ಸಮೀಪದ ಸರಸ್ವತಿ ದೇವಸ್ಥಾನದ ಬಳಿ ಚಂದ್ರಯ್ಯ ತಾನೂ ವಿಷ ಸೇವಿವುದರ ಜೊತೆ ತನ್ನ ಹೆಂಡ್ತಿ ಹಾಗೂ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದಾರೆ.

ಇದನ್ನೂ ಓದಿ: 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಯುವ ಮುಖಂಡ ಅರೆಸ್ಟ್

ಆದ್ರೆ, ಚಂದ್ರಯ್ಯ ಚಿಕಿತ್ಸೆ ಫಲಕಾರಿಯಾಗದೇ ಕುಟುಂಬದ ಯಜಮಾನ ಚಂದ್ರಯ್ಯ ಸಾವನ್ನಪ್ಪಿದ್ದು, ಹೆಂಡ್ತಿ ಸೌಮ್ಯ(35) ಹಾಗೂ ಮಕ್ಕಳಾದ ಭವಾನಿ (12) ಶಿವಕುಮಾರ್​ (10) ಬದುಕುಳಿದಿದ್ದಾರೆ. ಮೂವರಿಗೆ ಹೊಸಪೇಟೆ ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಯುವಕ ಸಾವು

ಚಿಕ್ಕಬಳ್ಳಾಪುರ : ಇನ್ನೊಂದೆಡೆ ಮಾರ್ಚ 11 ರಂದು ಚಿಕ್ಕಬಳ್ಳಾಪುರದಲ್ಲಿ ಪ್ರೀಯತಮೆ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಪ್ರೀಯತಮೆ ಕೈಕೊಟ್ಟಿದ್ದಕ್ಕೆ ಆಕೆ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಹೋಗಿ ಯುವಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.

24 ವರ್ಷದ ಯುವಕ ಗಿರೀಶ್ ಮಾರ್ಚ 11 ರಂದು ಚಿಕ್ಕಬಳ್ಳಾಪುರದಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗರೀಶ್​ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ