ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಶೇ 60 ರಷ್ಟು ಬೈಕ್ ಸವಾರರು; ಹೆಲ್ಮೆಟ್ ಧರಿಸಿದ್ದವರು ಎಷ್ಟು ಮಂದಿ?

| Updated By: Ganapathi Sharma

Updated on: Aug 18, 2023 | 3:52 PM

ಅಂಕಿಅಂಶಗಳ ಪ್ರಕಾರ, 2021 ರಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳಿಂದ 4,938 ಜನರು ಸಾವನ್ನಪ್ಪಿದ್ದರು. 2020 ರಲ್ಲಿ ದ್ವಿಚಕ್ರ ವಾಹನಗಳಲ್ಲಿ 5,171 ಜನರು ಸಾವನ್ನಪ್ಪಿದ್ದರು. 2021 ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ದ್ವಿಚಕ್ರ ವಾಹನಗಳ ಸವಾರರ ಸಾವಿನ ಪ್ರಮಾಣ ಶೇ 59.21 ರಷ್ಟು ಇತ್ತು.

ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಶೇ 60 ರಷ್ಟು ಬೈಕ್ ಸವಾರರು; ಹೆಲ್ಮೆಟ್ ಧರಿಸಿದ್ದವರು ಎಷ್ಟು ಮಂದಿ?
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್ 18: ಕರ್ನಾಟಕದಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತಗಳಲ್ಲಿ (Fatal Accident) ಮೃತಪಟ್ಟವರಲ್ಲಿ ಬೈಕ್ ಸವಾರರ ಸಂಖ್ಯೆಯೇ ಹೆಚ್ಚಿದೆ. ಅದರಲ್ಲಿಯೂ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ಮೂರನೇ ಎರಡರಷ್ಟು ಜನರು ಮಾತ್ರ ಹೆಲ್ಮೆಟ್ ಧರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ಮಾಹಿತಿ ಹಂಚಿಕೊಂಡಿದ್ದಾರೆ. ಒಟ್ಟಾರೆಯಾಗಿ ಸಂಭವಿಸಿದ ಮಾರಣಾಂತಿಕ ಅಪಘಾತಗಳಲ್ಲಿ ಬಲಿಯಾದವರಲ್ಲಿ ಶೇಕಡಾ 60 ರಷ್ಟು ಜನರು ಬೈಕ್ ಸವಾರರು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ (ADGP Alok Kumar) ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಬಳಕೆದಾರರಿಗೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳನ್ನು ಅತಿಯಾಗಿ ಒತ್ತಿ ಹೇಳಲಾಗದು ಎಂದು ಅಲೋಕ್ ಕುಮಾರ್ ಸಾಮಾಜಿಕ ಮಾಧ್ಯಮ ತಾಣ ಟ್ವಿಟರ್​​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಲ್ಮೆಟ್ ಧರಿಸದಿರುವುದು ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸುರಕ್ಷಿತ ಚಾಲನೆಯು ಅಂತಹ ಸಾವುಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅವರು ಟ್ವೀಟ್​​ನಲ್ಲಿ ಉಲ್ಲೇಖಿಸಿದ್ದಾರೆ.

ಅಂಕಿಅಂಶಗಳ ಪ್ರಕಾರ, 2021 ರಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳಿಂದ 4,938 ಜನರು ಸಾವನ್ನಪ್ಪಿದ್ದರು. 2020 ರಲ್ಲಿ ದ್ವಿಚಕ್ರ ವಾಹನಗಳಲ್ಲಿ 5,171 ಜನರು ಸಾವನ್ನಪ್ಪಿದ್ದರು. 2021 ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ದ್ವಿಚಕ್ರ ವಾಹನಗಳ ಸವಾರರ ಸಾವಿನ ಪ್ರಮಾಣ ಶೇ 59.21 ರಷ್ಟು ಇದ್ದರೆ, 2020 ರಲ್ಲಿ ದ್ವಿಚಕ್ರ ವಾಹನಗಳ ಸವಾರರ ಸಾವಿನ ಪ್ರಮಾಣ ಶೇ 63.31 ರಷ್ಟಿತ್ತು.

ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್


ಇದನ್ನೂ ಓದಿ: ಬೆಂಗಳೂರು: ಅಪರಿಚಿತನ ಬಳಿ ಕ್ವಾಟರ್ ಎಣ್ಣೆ ಆಸೆಗೆ ಬಿದ್ದು ಆಟೋ ಕಳ್ಕೊಂಡ ಚಾಲಕ; ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ದ್ವಿಚಕ್ರ ವಾಹನಗಳ ಹೊರತಾಗಿ ಕಾರುಗಳು, ಜೀಪ್‌ಗಳು, ವ್ಯಾನ್‌ಗಳು ಅಥವಾ ಟ್ಯಾಕ್ಸಿಗಳ ಅಪಘಾತದಿಂದ 2020 ಮತ್ತು 2021 ರಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದವು. ಈ ಎರಡು ವರ್ಷಗಳಲ್ಲಿ ಕ್ರಮವಾಗಿ 1,533 ಮತ್ತು 1,351 ಸಾವು ಸಂಭವಿಸಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:51 pm, Fri, 18 August 23