ಬೆಂಗಳೂರು: ಅಪರಿಚಿತನ ಬಳಿ ಕ್ವಾಟರ್ ಎಣ್ಣೆ ಆಸೆಗೆ ಬಿದ್ದು ಆಟೋ ಕಳ್ಕೊಂಡ ಚಾಲಕ; ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಬೆಂಗಳೂರಿನ ದಾಸರಹಳ್ಳಿಯ 8ನೇ ಮೈಲು ಬಳಿಯಿರುವ ಅಟೋಸ್ಟಾಂಡ್​ಗೆ ಹಳೆಯ ಆಟೋದಲ್ಲಿ ಬಂದಿದ್ದ ಅಪರಿಚಿತನೊಬ್ಬ, ಆತ್ಮೀಯವಾಗಿ ಮಾತನಾಡಿ ಮತ್ತೋರ್ವ ಆಟೋ ಚಾಲಕನಿಗೆ ಎಣ್ಣೆ ಕುಡಿಸಿ, ತನ್ನ ಹಳೆಯ ಆಟೋವನ್ನು ಬಿಟ್ಟು, ಹೊಸ ಆಟೋವನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ.

ಬೆಂಗಳೂರು: ಅಪರಿಚಿತನ ಬಳಿ ಕ್ವಾಟರ್ ಎಣ್ಣೆ ಆಸೆಗೆ ಬಿದ್ದು ಆಟೋ ಕಳ್ಕೊಂಡ ಚಾಲಕ; ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಆಟೋ ಕಳ್ಳತನ ಮಾಡಿದ ಆರೋಪಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 18, 2023 | 2:34 PM

ಬೆಂಗಳೂರು, ಆ.18: ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ನಮ್ಮ ಬಳಿಯಿರುವ ಮೊಬೈಲ್​, ಪರ್ಸ್​ ಇತ್ಯಾದಿ ವಸ್ತುಗಳು ಮಾಯವಾಗುತ್ತದೆ. ಅದರಂತೆ ಇದೀಗ ಕ್ವಾಟರ್ ಎಣ್ಣೆಗಾಗಿ ತನ್ನ ಹೊಸ ಆಟೋ (Auto) ವನ್ನು ಕಳೆದುಕೊಂಡ ಘಟನೆ ಬೆಂಗಳೂರಿನ(Bengaluru) ದಾಸರಹಳ್ಳಿ(Dasarahalli)ಯ 8ನೇ ಮೈಲಿ ಅಟೋಸ್ಟಾಂಡ್​ನಲ್ಲಿ ನಡೆದಿದೆ. ವಿಜಯ್ ಕುಮಾರ್ ಆಟೋ ಕಳೆದುಕೊಂಡವರು. ನಿನ್ನೆ(ಆ.17) ಮಟ ಮಟ ಮಧ್ಯಾಹ್ನದ ವೇಳೆ ಹಳೆಯ ಅಟೋದಲ್ಲಿ ಬಂದಿದ್ದ ಅಪರಿಚಿತ ಚಾಲಕನೊಬ್ಬ, ಹಾಯ್ ಎಂದುಕೊಂಡು ಆತ್ಮೀಯವಾಗಿ ಈ ಸ್ಟ್ಯಾಂಡ್​ನಲ್ಲಿ ಎಷ್ಟು ಕಲೆಕ್ಷನ್ ಆಗುತ್ತೆ ಅಂದುಕೊಂಡು ಪರಿಚಯಸ್ಥನ ತರ ನಟನೆ ಮಾಡಿ, ಆಟೋವನ್ನೇ ಕದ್ದುಕೊಂಡು ಹೋದ ಘಟನೆ ನಡೆದಿದೆ.

ಎಣ್ಣೆ ಕುಡಿಸಿ, ಆಟೋ ಕದ್ದ ಖದೀಮ

ಹೌದು, ಆತ್ಮೀಯವಾಗಿ ಮಾತನಾಡುತ್ತ, ಬಾ ಗುರು ಎಣ್ಣೆ ಹೊಡೆಯೋಣವೆಂದು ಪಕ್ಕದಲ್ಲೇ ಇದ್ದ ಮೂನ್ ಲೈಟ್ ಬಾರ್​ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆತನ ದುಡ್ಡಲ್ಲೇ ಕ್ವಾಟರ್​ ಎಣ್ಣೆಯನ್ನು ಕುಡಿಸಿದ್ದಾನೆ. ಬಳಿಕ ಎಣ್ಣೆ ಕುಡಿದು ಹೊಸ ಅಟೋದಲ್ಲಿ ಮಲಗಬಾರದೆಂದು ವಿಜಯ್ ಕುಮಾರ್ ಅವರು ಅರೋಪಿ ತಂದಿದ್ದ ಹಳೆಯ ಅಟೋದಲ್ಲಿ ಮಲಗಿದ್ದಾರೆ. ಅಷ್ಟೇ, ಮಲಗಿ ಎದ್ದೇಳುವಷ್ಟರಲ್ಲಿ ಆತನ ಹಳೆಯ ಅಟೋ ಬಿಟ್ಟು ಹೊಸ ಆಟೋದಲ್ಲಿ ಪರಾರಿಯಾಗಿದ್ದಾನೆ.

ಇದನ್ನೂ ಓದಿ:Mysore police: ಐಶಾರಾಮಿ ಕಾರು, ಶ್ರೀಮಂತರ ಮನೆಯೇ ಇವನ ಟಾರ್ಗೆಟ್: 56 ಕಳ್ಳತನ ಮಾಡಿದ್ದರೂ ಪೊಲೀಸರಿಗೆ ಮಾತ್ರ ಸಿಕ್ಕಿರಲಿಲ್ಲ- ಕೊನೆಗೂ ಅಂದರ್​

ಆಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿಕ್ಯಾಮಾರದಲ್ಲಿ ಸೆರೆ

ಇನ್ನು ಅಟೋದಲ್ಲಿದ್ದ 25ಸಾವಿರ ಬೆಲೆಬಾಳುವ ಮೊಬೈಲ್ ಜೊತೆ ಆಟೋವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಇತ್ತ ಹಳೆಯ ಅಟೋ ಸುದ್ದಗುಂಟೆಪಾಳ್ಯದಲ್ಲಿ ಕದ್ದಿರುವುದು ಎಂದು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತ ಅಪರಿಚಿತನ ಬಳಿ ಕ್ವಾಟರ್ ಎಣ್ಣೆಯ ಆಸೆಗೆ ಬಿದ್ದು ಆಟೋ ಕಳಕೊಂಡಿದ್ದಾನೆ. ಇನ್ನು ಅಟೋ ಕದ್ದು ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಪೀಣ್ಯಾ ಪೊಲೀಸ್ ಠಾಣೆಯಲ್ಲಿ IPC 1860 ರೀತ್ಯಾ 379ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ