
ಬೆಂಗಳೂರು, ಜುಲೈ 13: ಶಾಲಾ ಮಕ್ಕಳಲ್ಲಿ (School Children) ದೈಹಿಕ ಚಟುವಟಿಕೆಗಳ ಬಗೆಗಿನ ಆಸಕ್ತಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ (Private Schools Association) ಆತಂಕ ವ್ಯಕ್ತಪಡಿಸಿದೆ. ಖಾಸಗಿ ಶಾಲಾ ಒಕ್ಕೂಟಗಳ ಅಧೀನದ ಶಾಲೆಗಳಲ್ಲಿ ನಡೆಸಿದ ಸರ್ವೆಯಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಪೋಷಕರು ಈ ಬಗ್ಗೆ ಜಾಗರೂಕತೆ ವಹಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆಗ್ರಹ ಮಾಡಿವೆ.
ಯುವ ಜನಾಂಗಕ್ಕೆ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಸಂಬಂಧಿತ ಕಾಯಿಲೆಗಳು ಅಕಾಲಿಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಆಘಾತ ಮೂಡಿಸುತ್ತಿದೆ. ಇದರ ಮಧ್ಯೆ ರಾಜ್ಯದ ಖಾಸಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಸಂಯೋಜಿತ ಆಡಳಿತ ಮಂಡಳಿಗಳು ಸಮೀಕ್ಷೆಯೊಂದನ್ನು ನಡೆಸಿದ್ದು, ಕಳವಳಕಾರಿ ಅಂಶ ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ ಶೇ 95 ರಷ್ಟು ಮಕ್ಕಳು ದೈಹಿಕ ಚಟುವಟಿಕೆಗಳ ಸಂಬಂಧಿತ ತರಗತಿಗಳಿಗೆ ನಿರಾಸಕ್ತಿ ತೋರಿ ಗೈರು ಹಾಜರಾಗುತ್ತಿದ್ದು, ಮನೆಯಲ್ಲೂ ಕೂಡ ದೈಹಿಕ ಚಟುವಟಿಕೆಗಳಲ್ಲಿ ಹಿಂದೆ ಉಳಿದಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿದೆ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ
ಒಟ್ಟಾರೆಯಾಗಿ ಕೊರೊನಾ ನಂತರದಲ್ಲಿ ಶಾಲಾ ಮಕ್ಕಳು ಜೀವನ ಶೈಲಿ ಬದಲಾವಣೆ ಆಗಿರುವುದನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ದೃಢಪಡಿಸಿವೆ. ಈ ನಿಟ್ಟಿನಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪೋಷಕರು ಜಾಗರೂಕತೆ ವಹಿಸುವಂತೆ ಮನವಿ ಮಾಡಿವೆ.
ವರದಿ: ಲಕ್ಷ್ಮೀ ನರಸಿಂಹ್ ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 pm, Sun, 13 July 25