ಮೈಸೂರು: ಶಾಲೆಗೆ (School) ಹಾಜರಾಗದೆ ಈಜಲು ಕೆರೆಗೆ (Lake) ಇಳಿದಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕು ತಿಪ್ಪಲಾಪುರ ಬೆಳ್ತೂರು ಬಳಿ ಸಂಭವಿಸಿದೆ. ಚಿಲ್ಕುಂದ ಗ್ರಾಮದ ನಿವಾಸಿ ಹರ್ಷ (14) ಮೃತ ದುರ್ದೈವಿ. ಹರ್ಷ ಮಂಜುನಾಥ್ ಮತ್ತು ಶೈಲಜಾ ದಂಪತಿ ಪುತ್ರ. ಬಾಲಕ ಸಂತ ಜೋಸೆಫ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಶಾಲೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದ ಐವರು ಬಾಲಕರು ಈಜುವುದಕ್ಕೆ ಕೆರಗೆ ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಘಟನೆ ನಡೆಯುತ್ತಿದ್ದಂತೆ ಉಳಿದ ನಾಲ್ವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು:
ಶಿವಮೊಗ್ಗ: ಕೋಳಿ ಆಹಾರ ತಯಾರಿಸುವ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವನ್ನಪ್ಪಿದ್ದಾರೆ. ಭದ್ರಾವತಿಯ ಸೆಂದಿಲ್ ಕುಮಾರ್ (35) ಮೃತ ಕಾರ್ಮಿಕ. ಭದ್ರಾವತಿ ಲೋಯರ್ ಹುತ್ತಾ ಸಮೀಪದ ಪ್ಯಾರಾ ಸಿಟಿಕಲ್ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದೆ. ಸೆಂದಿಲ್ ಕುಮಾರ್ ಕೋಳಿ ಫೀಡ್ ಫ್ಯಾಕ್ಟರಿಯಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಘಟನೆ ಕುರಿತು ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಕಲ್ ಕದಿಯುತ್ತಿದ್ದ ಆರೋಪಿ ಬಂಧನ:
ಬೆಂಗಳೂರು: ಕುಡಿತದ ಚಟಕ್ಕೆ ಸೈಕಲ್ ಕದಿಯುತ್ತಿದ್ದ ಆರೋಪಿಯನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಾಲರಾಜ್ ಬಂಧಿಸಿದ್ದಾರೆ. ಬಂಧಿತನಿಂದ ಪೊಲೀಸರು ಸುಮಾರು 54 ಸೈಕಲ್ ರಿಕವರಿ ಮಾಡಿದ್ದಾರೆ. ಆರೋಪಿ ದುಬಾರಿ ಬೆಲೆಯ ಸೈಕಲ್ಗಳನ್ನು ಟಾರ್ಗೆಟ್ ಮಾಡಿ ಕದಿಯುತ್ತಿದ್ದ. 30-40 ಸಾವಿರ ಬೆಲೆಬಾಳುವ ಸೈಕಲ್ಗಳನ್ನ ಬರೀ 2-3 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಮಾರಾಟ ಮಾಡಿ ಬಂದ ಹಣದಿಂದ ಕುಡಿಯುತ್ತಿದ್ದ. ಆರೋಪಿ ಸೈಕಲ್ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Sat, 28 May 22