AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಎರಡನೆ ದಿನ; ಎಕ್ಸ್​ಪೋಗೆ ಭೇಟಿ ನೀಡಿ, ಚಿನ್ನ ಗೆಲ್ಲಿ

ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ಎಕ್ಸ್​ಪೋದಲ್ಲಿ ಹಲವು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿಯಾಗಿವೆ. ನಿಮ್ಮ ಕನಸಿನ ಮನೆ ಕಟ್ಟಲು ರಿಯಲ್ ಎಸ್ಟೇಟ್ ಎಕ್ಸ್​ಪೋ ಒಂದು ಸುವರ್ಣ ಅವಕಾಶ.

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಎರಡನೆ ದಿನ; ಎಕ್ಸ್​ಪೋಗೆ ಭೇಟಿ ನೀಡಿ, ಚಿನ್ನ ಗೆಲ್ಲಿ
ಎರಡನೇ ದಿನದ ಎಕ್ಸ್​ಪೋಗೆ ಗ್ರಾಹಕರು ಆಗಮಿಸುತ್ತಿದ್ದಾರೆ
TV9 Web
| Updated By: sandhya thejappa|

Updated on:May 28, 2022 | 3:46 PM

Share

ಬೆಂಗಳೂರು: ಟಿವಿ9 (Tv9 Kannada) ವತಿಯಿಂದ ನಡೆಯುತ್ತಿರುವ 12ನೇ ಆವೃತ್ತಿಯ ಅತಿದೊಡ್ಡ ರಿಯಲ್ ಎಸ್ಟೇಟ್ ಎಕ್ಸ್​ಪೋ (Real Estate Expo) ಇಂದು (ಮೇ 28) ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆಯಿಂದ ಆರಂಭವಾಗಿರುವ ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಸ್ಯಾಂಡಲ್​ವುಡ್​ ನಟ, ನಿರ್ದೇಶಕ ರಿಷಭ್ ಶೆಟ್ಟಿ ಚಾಲನೆ ನೀಡಿದ್ದಾರೆ. ಎಕ್ಸ್​ಪೋದಲ್ಲಿ ಪ್ರತಿಷ್ಠಿತ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಭಾಗಿಯಾಗಿದ್ದಾರೆ. ಪ್ರತಿಷ್ಠಿತ ಬ್ಯಾಂಕ್​ಗಳಿಂದ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯದ ವ್ಯವಸ್ಥೆಯಿದೆ. ಜೊತೆಗೆ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಬಂದವರು ಚಿನ್ನ ಗೆಲ್ಲುವ ಅವಕಾಶ ಕೂಡಾ ಇದೆ. ಮಾತ್ರವಲ್ಲದೆ, ಲಕ್ಕಿ ಡಿಪ್​ನಲ್ಲಿ ಆಯ್ಕೆಯಾದವರಿಗೆ ಗೋಲ್ಡ್ ಕಾಯಿನ್​ನ ಉಡುಗೊರೆಯಾಗಿ ನೀಡಲಾಗುತ್ತದೆ.

ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ಎಕ್ಸ್​ಪೋದಲ್ಲಿ ಹಲವು ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಭಾಗಿಯಾಗಿವೆ. ನಿಮ್ಮ ಕನಸಿನ ಮನೆ ಕಟ್ಟಲು ರಿಯಲ್ ಎಸ್ಟೇಟ್ ಎಕ್ಸ್​ಪೋ ಒಂದು ಸುವರ್ಣ ಅವಕಾಶ. ಎಕ್ಸ್​ಪೋಗೆ ಬರುವ ಜನರಿಗೆ ಉಚಿತ ಪ್ರವೇಶ. ಹಾಗೇ ಕಾರ್ ಪಾರ್ಕಿಂಗ್​ಗೂ ವ್ಯವಸ್ಥೆ ಮಾಡಲಾಗಿದೆ.

ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಆಗಮನ: ಒಟ್ಟು ಮೂರು ದಿನಗಳ ಕಾಲ ಎಕ್ಸ್​ಪೋ ನಡೆಯುತ್ತದೆ. ನಿನ್ನೆಯಿಂದ ಆರಂಭವಾಗಿರುವ ಎಕ್ಸ್​ಪೋ ನಾಳೆಗೆ ಮುಗಿಯಲಿದೆ. ಸದ್ಯ ನೂರಾರು ಸಂಖ್ಯೆಯಲ್ಲಿ ಜನರು ಎಕ್ಸ್​ಪೋ ಭೇಟಿ ನೀಡುತ್ತಿದ್ದಾರೆ. ಸ್ಟಾಲ್​ಗಳಲ್ಲಿ ಕುಳಿತು ಗ್ರಾಹಕರು ಸೈಟ್ ಮನೆಗೆ ಸಂಬಂಧಿಸಿದ ವಿವರಗಳನ್ನು ಪಡೆಯುತ್ತಿದ್ದಾರೆ. ಇನ್ನು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿದರು. ಭೇಟಿ ನೀಡಿ ಸೈಟ್​ಗಳ ಬಗ್ಗೆ ಮಾಹಿತಿ ಪಡೆದರು.

ಇದನ್ನೂ ಓದಿ
Image
ಬಾಲಕಿ ಒಂಟಿಕಾಲಲ್ಲಿ ಜಿಗಿದುಕೊಂಡು ಶಾಲೆಗೆ ಹೋಗುವ ದೇಶವಿದು! ಹಾಗಾದರೆ ಶಾಲೆಗೆ ನಡೆದುಹೋಗುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ!? ಇಲ್ಲಿದೆ ಅಂಕಿ ಅಂಶಗಳು
Image
Relationship: ನಿಮ್ಮ ಪತಿ ಸದಾ ಸಂತೋಷದಿಂದರಬೇಕು ಎಂದರೆ ಹೀಗೆ ಮಾಡಿ
Image
IPL 2022 Prize Money: ಚಾಂಪಿಯನ್​ಗೆ 20 ಕೋಟಿ, ರನ್ನರ್ ಅಪ್​ಗೆ 13 ಕೋಟಿ! ಆರ್​ಸಿಬಿಗೆ ಸಿಕ್ಕಿದ್ದೆಷ್ಟು?
Image
Virat Kohli: ಹೀಗೂ ಆಡ್ತಾರಾ?..ವಿರಾಟ್ ಕೊಹ್ಲಿ ವಿರುದ್ದ ಸೆಹ್ವಾಗ್ ಟೀಕಾ ಪ್ರಹಾರ

ಇದನ್ನೂ ಓದಿ: ಮೈಸೂರಿನಲ್ಲಿ ಶಾಲೆಗೆ ಹೋಗದೆ ಈಜಲು ಕೆರೆಗೆ ಇಳಿದಿದ್ದ ಬಾಲಕ ಸಾವು; ಶಿವಮೊಗ್ಗದಲ್ಲಿ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು

ಲಕ್ಕಿ ಡಿಪ್ ಯಾರಿಗೆ? ಡಿಸಿಪಿ ಸಂಜೀವ್ ಪಾಟೀಲ್ ಲಕ್ಕಿ ಡಿಪ್ ಘೋಷಣೆ ಮಾಡಿದರು. ಪಾಟೀಲ್ ಎನ್ನುವ ವ್ಯಕ್ತಿ ಗೋಲ್ಡ್ ಕಾಯಿನ್ ಪಡೆದಿದ್ದಾರೆ ಎಂದು ತಿಳಿಸಿದ ಸಂಜೀವ್ ಪಾಟೀಲ್, ಟಿವಿ9 ಎಕ್ಸ್​ಪೋ ಮೂಲಕ ಜನರಿಗೆ ಬೇಕಾಗುವ ಮನೆ, ಫ್ಲಾಟ್, ಸೈಟ್​ಗಳನ್ನ ಖರೀದಿಸಬಹುದು. ಹೀಗಾಗಿ ಜನರು ಬಂದು ಎಕ್ಸ್​ಪೋ ವಿಸಿಟ್ ಮಾಡಬೇಕು ಎಂದು ಹೇಳಿದರು.

Published On - 3:26 pm, Sat, 28 May 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!