ನನ್ನ ಮಗಳು ಯಾವುದೋ ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾಗಿ ಶಂಕೆ ವ್ಯಕ್ತವಾಗುತ್ತಿದೆ. ಆಕೆ ಸ್ವ ಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಈಗಿಲ್ಲ. ಕೆಲ ದಿನಗಳ ಕಾಲ ಆಕೆಯನ್ನು ಏಕಾಂತದಲ್ಲಿ ಇರಿಸಬೇಕು ಅಥವಾ ನ್ಯಾಯಾಂಗದ ಸುಪರ್ಧಿಯಲ್ಲಿ ಇಡಬೇಕು. ಅದೂ ಆಗದೆ ಇದ್ದರೆ ಕೋರ್ಟ್ ಸೂಚಿಸಿದ ಸ್ವತಂತ್ರ್ಯ ಸಂಸ್ಥೆಯ ಸುಪರ್ಧಿಯಲ್ಲಿ ಇಡಬೇಕು. ಅಂದಾಗ ಮಾತ್ರ ನನ್ನ ಮಗಳು ಸ್ವ ಇಚ್ಛೆಯಿಂದ ಹೇಳಿಕೆ ನೀಡಲು ಸಾಧ್ಯ. ಈ ವಿಚಾರವನ್ನು ಹಿಂದೆ ಮಾಧ್ಯಮಗಳ ಮೂಲಕವೂ ಮನವಿ ಮಾಡಿದ್ದೇನೆ ಎಂದು ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಯುವತಿಯ ತಂದೆ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಡಿ ಸಂತ್ರಸ್ತೆ ನಿನ್ನೆ ಕೋರ್ಟ್ಗೆ ಹಾಜರಾಗಿ ಜಡ್ಜ್ ಎದುರು ಹೇಳಿಕೆಗಳನ್ನು ದಾಖಲಿಸಿದ್ದಾಳೆ. ಅದಾದ ಬಳಿಕ ಎಸ್ಐಟಿ ವಶದಲ್ಲಿದ್ದು, ವಿಚಾರಣೆಗೆ ಒಳಪಟ್ಟಿದ್ದಾಳೆ. ನಿನ್ನೆ ಆಕೆ ಕೋರ್ಟ್ಗೆ ಬರುತ್ತಿದ್ದಂತೆ ಪಾಲಕರು ಗಾಬರಿಗೊಂಡು, ಕಣ್ಣೀರು ಹಾಕಿದ್ದರು. ಆಕೆಯ ತಂದೆ-ತಾಯಿ, ಇಬ್ಬರು ಸಹೋದರರು ಈಗಾಗಲೇ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ವಾಪಸ್ ತಮ್ಮ ಬಳಿ ಬರುವಂತೆ ಮಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿ ಕಚೇರಿಯಿಂದಲೇ ಲೈಂಗಿಕ ಸಿಡಿ ಕೇಸ್ ನಿರ್ವಹಣೆಯಾಗುತ್ತಿದೆ: ಬಿಜೆಪಿ ಟ್ವೀಟ್
ಇದನ್ನೂ ಓದಿ: ಸಿಡಿ ಯುವತಿಗೆ ವಿಶ್ರಾಂತಿ ಇಲ್ಲ; ತಲೆ ನೋವು, ಕೈಕಾಲು ನಡುಗುತ್ತಿದೆ: ಬೌರಿಂಗ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್