ಸಿಡಿ ಯುವತಿಗೆ ವಿಶ್ರಾಂತಿ ಇಲ್ಲ; ತಲೆ ನೋವು, ಕೈಕಾಲು ನಡುಗುತ್ತಿದೆ: ಬೌರಿಂಗ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್

ಬೌರಿಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತ ಯುವತಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ವಿಶ್ರಾಂತಿ ಇಲ್ಲದೇ ಯುವತಿಗೆ ಕೈಕಾಲು ನಡುಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಸಿಡಿ ಯುವತಿಗೆ ವಿಶ್ರಾಂತಿ ಇಲ್ಲ; ತಲೆ ನೋವು, ಕೈಕಾಲು ನಡುಗುತ್ತಿದೆ: ಬೌರಿಂಗ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್
ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಗೆ ಕೌನ್ಸಿಲಿಂಗ್
Follow us
shruti hegde
| Updated By: ಸಾಧು ಶ್ರೀನಾಥ್​

Updated on: Mar 31, 2021 | 1:51 PM

ಬೆಂಗಳೂರು: ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಗಳು ಹಲವಾರು ಆಯಾಮಗಳನ್ನು ಪಡೆದುಕೊಳ್ಳುತ್ತಾ ಸಾಗಿದೆ. 28 ದಿನಗಳ ನಂತರ ಸಂತ್ರಸ್ತ ಯುವತಿ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಬಂದಿದ್ದಾಳೆ. ಇಂದು ಎರಡನೇ ದಿನ ಯುವತಿ ವಿಚಾರಣೆಗೆ ಹಾಜರಾಗಿದ್ದು ಇದೀಗ ಸಂತ್ರಸ್ತ ಯುವತಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್ ನಡೆಸಲಾಗುತ್ತಿದೆ.

ಬೌರಿಂಗ್ ಆಸ್ಪತ್ರೆಯ ವೈಲೆನ್ಸ್ ಎಗೆನೆಸ್ಟ್ ವುಮೆನ್ ಸೆಂಟರ್‌ನಲ್ಲಿ ಸಂತ್ರಸ್ತ ಯುವತಿಗೆ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವತಿಗೆ ವಿಶ್ರಾಂತಿ ಇಲ್ಲದಿರುವುದರಿಂದ ತಲೆ ನೋವು, ಕೈಕಾಲು ನಡುಗುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಒಟ್ಟು 2 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ರು ಎಂದ ಸಿಡಿ ಲೇಡಿ: ಇಂದು ರಮೇಶ್ ಬಂಧನವಾಗುತ್ತಾ?

‘ನನ್ನನ್ನು ಯಾರೂ ಕಿಡ್ನ್ಯಾಪ್​ ಮಾಡಿರಲಿಲ್ಲ; ನನ್ನ ತಂದೆ, ತಾಯಿ, ಸೋದರ ರಮೇಶ್ ಜಾರಕಿಹೊಳಿ ಹಿಡಿತದಲ್ಲಿದ್ದಾರೆ’