ಲುಂಗಿ ಡ್ಯಾನ್ಸ್ ಹಾಡಿಗೆ ಸ್ಟೆಪ್ ಹಾಕಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್; ವಿಡಿಯೋ ವೈರಲ್

ಲುಂಗಿ ಡ್ಯಾನ್ಸ್ ಎಂಬ ಹಿಂದಿ ಹಾಡಿಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ನೃತ್ಯ ಮಾಡಿದ್ದು, ಇವರಿಗೆ ಕೋಸ್ಟಲ್​ವುಡ್ ಮತ್ತು ಸ್ಯಾಂಡಲ್​ವುಡ್ ನಟ ಪೃಥ್ವಿ ಅಂಬರ್ ಕೂಡ ಸಾಥ್ ನೀಡಿದರು. ಸದ್ಯ ಪೊಲೀಸರ ಈ ಲುಂಗಿ ಡ್ಯಾನ್ಸ್ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಲುಂಗಿ ಡ್ಯಾನ್ಸ್ ಹಾಡಿಗೆ ಸ್ಟೆಪ್ ಹಾಕಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್; ವಿಡಿಯೋ ವೈರಲ್
ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ನೃತ್ಯ ಮಾಡಿದ್ದು, ಅವರಿಗೆ ನಟ ಪೃಥ್ವಿ ಅಂಬರ್
Follow us
preethi shettigar
|

Updated on: Mar 31, 2021 | 4:23 PM

ದಕ್ಷಿಣ ಕನ್ನಡ: ಪೊಲೀಸ್ ಎಂದರೆ ಯಾವಾಗಲೂ ಒಂದು ಪ್ರಕರಣದ ಬೆನ್ನಟ್ಟಿ ಹೋಗುವುದು ಅಥವಾ ಕೋರ್ಟ್ ಕಚೇರಿ ಎಂದು ತಿರುಗುವುದು ದಿನನಿತ್ಯದ ಕಾರ್ಯ. ಅದರಲ್ಲೂ ಹೇಳಿ ಕೇಳಿ ಮಂಗಳೂರು ಮೋಸ್ಟ್ ಹ್ಯಾಪನಿಂಗ್ ಸಿಟಿ. ಸದ್ಯ ಈ ಪೊಲೀಸರಿಗೆ ಸ್ವಲ್ಪಮಟ್ಟಿಗೆ ಖುಷಿ ನೀಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಮಾಡಲಾಗಿತ್ತು. ಇಲ್ಲಿ ಪೊಲೀಸರು ಕುಣಿದು ಕುಪ್ಪಳಿಸಿದ್ದು, ತಮ್ಮ ಒತ್ತಡಗಳನ್ನೆಲ್ಲಾ ದೂರ ಮಾಡಿಕೊಂಡು ಸಂತೋಷವಾಗಿ ಕಾಲ ಕಳೆದರು.

70 ಕೆ.ಜಿಗಿಂತ ತೂಕ ಇದ್ದ ಪೊಲೀಸರಿಗೆ ಕಳೆದ ಎರಡು ತಿಂಗಳಿನಿಂದ ಯಾವುದೇ ಕೆಲಸ ಕೊಡದೇ ಕೇವಲ ವರ್ಕೌಟ್, ಯೋಗ ಮತ್ತು ವ್ಯಾಯಾಮಗಳನ್ನು ಮಾಡಿಸಲಾಗುತ್ತಿತ್ತು. ಮಂಗಳೂರು ನಗರ ಪೊಲೀಸರಿಗೆ ದೈಹಿಕ ಸದೃಢತೆಯನ್ನು ನೀಡುವ ನಿಟ್ಟಿನಲ್ಲಿ ಈ ಕಾರ್ಯಗಾರ ನಡೆಯುತ್ತಿತ್ತು. ಇಲ್ಲಿ ಪುರುಷ ಹಾಗೂ ಮಹಿಳಾ ಪೊಲೀಸರು ಎರಡು ತಿಂಗಳಲ್ಲಿ ಅಧಿಕ 8 ಕೆ.ಜಿ ಮತ್ತು ಕನಿಷ್ಠ ಮೂರು ಕೆ.ಜಿ ತೂಕ ಇಳಿಸಿದ್ದಾರೆ.

ಈ ಕಾರ್ಯಗಾರದ ಸಮಾರೋಪ ಸಮಾರಂಭಕ್ಕೆ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಯಿ ಆಗಮಿಸಿದ್ದರು. ಇನ್ನು ಈ ಸಂದರ್ಭದಲ್ಲಿ ತೂಕ ಇಳಿಸಿದವರಿಗೆ ಸನ್ಮಾನಿಸಲಾಯಿತು. ಅಲ್ಲದೇ ಇದೇ ವೇಳೆ ಪೊಲೀಸರು ಹಾಗೂ ಪೊಲೀಸ್ ಕುಟುಂಬಕ್ಕೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

police dance

ಗೃಹ ಸಚಿವ ಬಸವರಾಜ ಬೊಮ್ಮಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದೃಶ್ಯ

ಇನ್ನು ಕಾರ್ಯಕ್ರಮದಲ್ಲಿ ಪೊಲೀಸರಿಂದ ಕಸರತ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಲ್ಲದೇ ವೃತ್ತಿಪರ ಕಲಾವಿದರು ಹಾಡು ನೃತ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಈ ಕಾರ್ಯಕ್ರಮದಲ್ಲಿ ನಟ ಪೃಥ್ವಿ ಅಂಬರ್ ಜೊತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಡನ್ನು ಕೂಡ ಹಾಡಿದ್ದು, ಸಮಾರೋಪಕ್ಕೆ ಮತ್ತಷ್ಟು ಮೆರುಗು ತುಂಬಿತ್ತು.

police dance

ನಟ ಪೃಥ್ವಿ ಅಂಬರ್ ಜೊತೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಡು ಕಾಡಿದ ಕ್ಷಣ

ಲುಂಗಿ ಡ್ಯಾನ್ಸ್ ಎಂಬ ಹಿಂದಿ ಹಾಡಿಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ನೃತ್ಯ ಮಾಡಿದ್ದು, ಇವರಿಗೆ ನೃತ್ಯ ಮಾಡಲು ಕೋಸ್ಟಲ್​ವುಡ್ ಮತ್ತು ಸ್ಯಾಂಡಲ್​ವುಡ್ ನಟ ಪೃಥ್ವಿ ಅಂಬರ್  ಸಾಥ್ ನೀಡಿದರು.  ಸದ್ಯ ಪೊಲೀಸರ ಈ ಲುಂಗಿ ಡ್ಯಾನ್ಸ್ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಪೊಲೀಸರು ಮತ್ತು ಪೊಲೀಸ್ ಕುಟುಂಬ ಈ ಕಾರ್ಯಕ್ರಮವನ್ನು ಆನಂದಿಸಿದರು. ಇನ್ನು ಇದೇ ವೇಳೆ ಪೊಲೀಸ್ ಇಲಾಖೆಯಿಂದ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ಮಾಡಿದರು. ಯಾವಾಗಲು ಕ್ರೈಂ, ಕೇಸು, ಕಾನೂನು ಸುವ್ಯವಸ್ಥೆ ಎಂದು ಜಂಜಾಟದಲ್ಲಿದ್ದ ಪೊಲೀಸರಿಗೆ ಇಂತಹ ಕಾರ್ಯಕ್ರಮದಿಂದ ಮತ್ತಷ್ಟು ಉತ್ಸಾಹ ಬಂದಿದೆ. ಇನ್ನು ಇಂತಹ ಸ್ಟ್ರೆಸ್ ಬರ್ನ್ ಕಾರ್ಯಕ್ರಮಗಳನ್ನು ಆಗಾಗ ಮಾಡುತ್ತಾ ಇದ್ದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಪೊಲೀಸರಿಗೆ ಇನ್ನಷ್ಟು ಶಕ್ತಿ ಕೂಡ ಬರುತ್ತದೆ.

ಇದನ್ನೂ ಓದಿ:

ಹೋಲಾ ಮೊಹಲ್ಲಾ ಮೆರವಣಿಗೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಸಿಖ್​ ಯುವಕರು; ಕತ್ತಿ ಹಿಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ವಾಹನಗಳೆಲ್ಲ ಪುಡಿಪುಡಿ

ನೃತ್ಯಾಭ್ಯಾಸ ಮಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ