ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ: ಅಂದುಕೊಂಡಂತೆ ಬದುಕಲಾಗದೇ ಸಾವಿಗೆ ಶರಣಾದ್ರಾ ನಂದಿನಿ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನ ಅರಿಶಿನಕುಂಟೆ ಗ್ರಾಮದಲ್ಲಿ ಕುಟುಂಬದ ಆದಾಯ ವಿಚಾರವಾಗಿ ಮನನೊಂದು ಮನೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮೃತ ಮಹಿಳೆ ಉತ್ತಮ ರೀತಿಯಲ್ಲಿ ಬದುಕುವ ಆಸೆ ಹೊಂದಿದ್ದರು. ಆದರೆ ಬದುಕಲಾಗದೇ ಸಾವಿಗೆ ಶರಣಾದ್ರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ನೆಲಮಂಗಲ, ಜುಲೈ 23: ಕುಟುಂಬದ ಆದಾಯ ವಿಚಾರವಾಗಿ ಮನನೊಂದ ಗೃಹಿಣಿ (housewife) ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ನ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ. ನಂದಿನಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲಾಗಿದ್ದು, 8 ವರ್ಷದ ಮಗಳು ಗೋಳಾಟ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸೀನ್ ಆಫ್ ಕ್ರೈಂ ತಂಡದಿಂದ ಮೃತದೇಹ ಪರಿಶೀಲನೆ ಮಾಡಲಾಗಿದ್ದು, ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 ವರ್ಷದ ಹಿಂದೆ ಚಾಲಕ ಸುನಿಲ್ ಜೊತೆ ನಂದಿನಿ ವಿವಾಹವಾಗಿದ್ದರು. 8 ವರ್ಷದ ಹೆಣ್ಣು ಮಗಳಿದ್ದಾಳೆ. ನಂದಿನಿ ಬಿಕಾಂ ಓದಿದ್ದು, ಪತಿ ಬಿಎ ಮುಗಿಸಿ ಖಾಸಗಿ ಶಾಲೆಯ ವಾಹನಕ್ಕೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪತಿಗೆ ಬರುವ ಅಲ್ಪ ವೇತನದಲ್ಲೇ ಜೀವನ ನಡೆಸುತ್ತಿದ್ದರು. ಆದರೆ ನಂದಿನಿ ಉತ್ತಮ ರೀತಿಯಲ್ಲಿ ಬದುಕುವ ಆಸೆ ಹೊಂದಿದ್ದರು. ಆದರೆ ಅದನ್ನು ಬದುಕಲಾಗದೇ ಸಾವಿಗೆ ಶರಣಾದ್ರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ಸಾಲಬಾಧೆ: ಕಳೆನಾಶಕ ಸೇವಿಸಿ ಶಿವಮೊಗ್ಗ ರೈತ ಆತ್ಮಹತ್ಯೆ
ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿ ಓರ್ವ ರೈತ ಸಾಲಬಾಧೆ ತಾಳಲಾರದೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಕೊಲ್ಲೂರಪ್ಪ (55) ಮೃತ ರೈತ.
ಇದನ್ನೂ ಓದಿ: ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲೇ ವಕೀಲೆಗೆ ಚಾಕು ಇರಿತ
ಖಾಸಗಿ ಹಾಗೂ ವಿವಿಧ ಬ್ಯಾಂಕಿನಲ್ಲಿ 7 ಲಕ್ಷ ರೂ. ಸಾಲ ಮಾಡಿದ್ದರು. ಇದೀಗ ಸಾಲ ತೀರಿಸಲಾಗದೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ಬೆಂಗಳೂರು: ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ 5.30ಕ್ಕೆ ರಸ್ತೆಗಿಳಿದು ಕಳ್ಳತನ ಮಾಡುತ್ತಿದ್ದರು. ಮಹಿಳೆಯೊಬ್ಬರ 50ಗ್ರಾಂ ಚಿನ್ನ ಕದ್ದಿದ್ದರು. ಇದೇ ರೀತಿಯಾಗಿ ಬೆಂಗಳೂರಿನ ಹಲವೆಡೆ ಆರೋಪಿಗಳು ಕೃತ್ಯವೆಸಗಿದ್ದರು.
ಇದನ್ನೂ ಓದಿ: ಭೂ ವಿವಾದ: ಪರಸ್ಪರ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಅಣ್ಣ-ತಮ್ಮ, ಇಬ್ಬರು ಸಾವು
ಸದ್ಯ ಆರೋಪಿಗಳನ್ನ ಬಂಧಿಸಿ 2.40 ಲಕ್ಷ ರೂ. ಮೌಲ್ಯದ 27 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:39 pm, Tue, 23 July 24