ಪ್ರವಾಸಕ್ಕೆ ಹೋಗಿದ್ದ ರಾಮನಗರದ ವ್ಯಕ್ತಿ ದೆಹಲಿಯಲ್ಲಿ ನಾಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2024 | 5:06 PM

ರಾಮನಗರ ಮೂಲದ ವ್ಯಕ್ತಿ ದೆಹಲಿಯ ಪಹರ್ಗಂಜ್‌ನಲ್ಲಿ ಪ್ರವಾಸದ ಸಂದರ್ಭದಲ್ಲಿ ನಾಪತ್ತೆಯಾಗಿರುವಂತಹ ಘಟನೆ ನವೆಂಬರ್ 28ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಮಂಗಳೂರಿನ ವ್ಯಕ್ತಿ ನಾಪತ್ತೆಯಾಗಿದ್ದ, ಕೊಲೆ ಶಂಕೆ ವ್ಯಕ್ತವಾಗಿದೆ. ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರವಾಸಕ್ಕೆ ಹೋಗಿದ್ದ ರಾಮನಗರದ ವ್ಯಕ್ತಿ ದೆಹಲಿಯಲ್ಲಿ ನಾಪತ್ತೆ
ಪ್ರವಾಸಕ್ಕೆ ಹೋಗಿದ್ದ ರಾಮನಗರದ ವ್ಯಕ್ತಿ ದೆಹಲಿಯಲ್ಲಿ ನಾಪತ್ತೆ
Follow us on

ಬೆಂಗಳೂರು, ಡಿಸೆಂಬರ್​ 02: ಪ್ರವಾಸಕ್ಕೆ (trip) ಹೋಗಿದ್ದ ಕನ್ನಡಿಗ ದೆಹಲಿಯ ಪಹರ್ಗಂಜ್ ಪ್ರದೇಶದಲ್ಲಿ ನಾಪತ್ತೆ ಆಗಿರುವಂತಹ ಘಟನೆ ನವೆಂಬರ್ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಮನಗರದ ಅಂಬೇಡ್ಕರ್‌ ನಗರದ ನಿವಾಸಿ ಲಿಂಗರಾಜು (55) ನಾಪತ್ತೆ ಆಗಿರುವ ವ್ಯಕ್ತಿ. ತಂಡದ ಜೊತೆ ಉತ್ತರ ಭಾರತದ ಪ್ರವಾಸಕ್ಕೆ ಲಿಂಗರಾಜು ಬಂದಿದ್ದರು. ಈ ವೇಳೆ ನಾಪತ್ತೆ ಆಗಿದ್ದಾರೆ. ಸದ್ಯ ಪಹರ್ಗಂಜ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ್ದ ವ್ಯಕ್ತಿ ಕೊಲೆ ಶಂಕೆ: ಪೊಲೀಸರ ವಿರುದ್ಧ ಆಕ್ರೋಶ

ಮಂಗಳೂರು: ಬಂಟ್ರ ಗ್ರಾಮದ ಮರ್ದಾಳ ಎಂಬಲ್ಲಿ ನಾಪತ್ತೆಯಾದ್ದ ವ್ಯಕ್ತಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದ್ದ ವ್ಯಕ್ತಿ ಮನೆಯವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ನವೆಂಬರ್ 27ರಂದು ಬಿಳಿನೆಲೆ ಗ್ರಾಮದ ಮುಂಗ್ಲಿ ಮಜಲು ನಿವಾಸಿ ಸಂದೀಪ್ (29) ನಾಪತ್ತೆಯಾಗಿದ್ದರು. ನಾಪತ್ತೆ ಬಗ್ಗೆ ದೂರು ನೀಡಿದರೂ ಸ್ವೀಕರಿಸದ ಕಡಬ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!

ದೂರು ನೀಡಲು ಬಂದ ಸಂದೀಪ್ ಅವರ ತಾಯಿ ಸರೋಜ ಅವರನ್ನು ಪೊಲೀಸ್ ಸಿಬ್ಬಂದಿ ಗದರಿದ್ದಾರೆ. ಮರ್ದಾಳ ಎಂಬಲ್ಲಿ ವಿನಯ ಎಂಬವರೊಂದಿಗೆ ಸಂದೀಪ್ ಶಾಮಿಯಾನ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 27 ಸಂಜೆ ನೆಟ್ಟಣ ನಿವಾಸಿ ಪ್ರತೀಕ್ ಎಂಬಾತನೊಂದಿಗೆ ಕಾರಿನಲ್ಲಿ ನೋಡಿರುವುದಾಗಿ ಶಾಮಿಯಾನ ಮಾಲೀಕ ವಿನಯ್ ತಿಳಿಸಿದ್ದಾರೆ.

ಒಂದು ವಾರಗಳಿಂದ ಹುಡುಕಾಡಿದರೂ ಸಂದೀಪ್ ಪತ್ತೆಯಾಗಿಲ್ಲ. ಮೂರು ದಿನಗಳ ಬಳಿಕ ಕಡಬ ಪೊಲೀಸರು ದೂರು ಸ್ವೀಕರಿಸಿದ್ದಾರೆ. ನಿನ್ನೆ ಪ್ರತೀಕ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖೆಯ ಬಳಿಕ ಸ್ಥಳಕ್ಕೆ ಕರೆತಂದು ಪರಿಶೀಲನೆ ಮಾಡಲಾಗಿದ್ದು, ಪ್ರಕರಣ ಮುಚ್ಚಿ ಹಾಕಲು ರಾಜಕೀಯ ಒತ್ತಡ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಪೆರೇಸಂದ್ರ ಬಳಿ ಕಂಟೈನರ್ ಪತ್ತೆ: 3 ಕೋಟಿ ರೂ ಮೌಲ್ಯದ ಮೊಬೈಲ್ ಜತೆಗೆ ಚಾಲಕ ನಾಪತ್ತೆ

ಸದ್ಯ ಕುಟುಂಬಸ್ಧರು ಸಾವಿನ ಸುತ್ತ ಗಾಂಜಾ ಜಾಲದ ಅನುಮಾನ ವ್ಯಕ್ತಪಡಿಸಿದ್ದು, ಕಡಬ ಪೊಲೀಸ್ ಸಿಬ್ಬಂದಿ ಲೋಹಿತಾಕ್ಷ ಎಂಬವರ ವಿರುದ್ಧ ಕುಟುಂಬಸ್ಧರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಸಾರ್ವಜನಿಕರಿಂದ ಕೂಡ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಲಾಗಿದ್ದು, ಕಡಬ ಪೊಲೀಸ್ ಠಾಣೆಯ ಮುಂದೆ ಸೇರಿದ ನೂರಾರು ಸಂಖ್ಯೆಯ ಗ್ರಾಮಸ್ಥರಿಂದ ಗಲಾಟೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.