ಕರ್ನಾಟಕದಲ್ಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ವರ್ಷಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ದಾಖಲಾಗಿರುವ ಪ್ರಕರಣ ಸಂಖ್ಯೆ ಸಾವಿರ ದಾಟಿದ್ದು, ಕರ್ನಾಟಕದಲ್ಲೇ ಮೊದಲ ಸ್ಥಾನದಲ್ಲಿದೆ ಎನ್ನುವುದೇ ಕಳವಳಕಾರಿ ಸಂಗತಿ.

ಕರ್ನಾಟಕದಲ್ಲೇ ಮಾದನಾಯಕನಹಳ್ಳಿ ಠಾಣೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!
ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ
Follow us
ಬಿ ಮೂರ್ತಿ, ನೆಲಮಂಗಲ
| Updated By: ರಮೇಶ್ ಬಿ. ಜವಳಗೇರಾ

Updated on:Nov 29, 2024 | 7:42 PM

ಬೆಂಗಳೂರು, (ನವೆಂಬರ್ 29): 2024ಕ್ಕೆ ವಿದಾಯ ಹೇಳುವ ಸಮಯ ಬಂದಿದ್ದು, ಈ ಒಂದು ವರ್ಷದಲ್ಲಿ ಎಲ್ಲೆಲ್ಲಿ ಏನೆಲ್ಲಾ ಆಗಿವೆ ಎನ್ನುವ ಬಗ್ಗೆ ಲೆಕ್ಕಾಚಾರಗಳು ನಡೆದಿವೆ. 2024ರಲ್ಲಿ ಯಾವೆಲ್ಲಾ ಠಾಣೆಗಳಲ್ಲಿ ಎಷ್ಟೆಷ್ಟು ಪ್ರಕರಣಗಳು ದಾಖಲಾಗಿವೆ ಎನ್ನುವ ಬಗ್ಗೆ ಅಂಕಿ-ಸಂಖ್ಯೆ ಲೆಕ್ಕಾಚಾರ ಹಾಕಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೂ ಈ ವರ್ಷ ಮುಗಿಯಲು ಒಂದು ತಿಂಗಳು ಬಾಕಿ ಇರುವಾಗಲೇ ಅಸ್ವಾಭಾವಿಕ ಸಾವು(UDR) ಸೇರಿದಂತೆ ಒಟ್ಟು 1289 ಪ್ರಕರಣಗಳ ದಾಖಲಾಗಿವೆ. ಈ ಮೂಲಕ ರ್ನಾಟಕದಲ್ಲೇ ಈ ಠಾಣೆ ಮೊದಲ ಸ್ಥಾನದಲ್ಲಿದೆ.

1289 ಪ್ರಕರಣಗಳ ಪೈಕಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 1005 FIR ದಾಖಲಾಗಿದ್ದರೆ, 284 ಅಸ್ವಾಭಾವಿಕ ಸಾವು ದೂರು ದಾಖಲಾಗಿವೆ. ಇದರೊಂದಿಗೆ ಒಟ್ಟು ಈ ಠಾಣೆಯಲ್ಲಿ 1289 ಪ್ರಕರಣಗಳು ದಾಖಲಾಗಿವೆ. ಒಂದು ವರ್ಷಕ್ಕೆ ಒಂದು ತಿಂಗಳು ಬಾಕಿರುವಾಗಲೇ ಎಫ್​ಐಆರ್​ ಸಾವಿರದ ಗಡಿದಾಟಿದ್ದು, ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವ ಪಟ್ಟಿಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೊದಲ ಸ್ಥಾನ ಪಡೆದುಕೊಂಡಿದೆ.

ಇನ್ನು  ದ್ವಿತೀಯ ಸ್ಥಾನ ಕೆಆರ್ ಪುರಂ ಪೊಲೀಸ್ ಠಾಣೆ (1178 ಪ್ರಕರಣ), ತೃತೀಯ ಸ್ಥಾನ ಮಹದೇವಪುರ ಪೊಲೀಸ್ ಠಾಣೆ (1152), ನಾಲ್ಕನೇ ಸ್ಥಾನ HAL ಪೊಲೀಸ್ ಠಾಣೆ (1122), ಇನ್ನೂ ಐದನೇ ಸ್ಥಾನದಲ್ಲಿ ಮಾರತ್ತಹಳ್ಳಿ ಪೊಲೀಸ್ ಠಾಣೆ (1020) ಇದೆ.

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಅನೇಕ ಜಿಲ್ಲೆಗಳಿಗೆ ಸಂಪರ್ಕ ಹೊಂದಿರುವ ಬೆಂಗಳೂರು ಗೇಟ್‌ವೇ ಕೂಡ ಇದೇ ಆಗಿದೆ. ಇದರಿಂದ ದಾಖಲಾದ ಅಪರಾಧಗಳನ್ನು ಸಮರ್ಪಕವಾಗಿ ತನಿಖೆ ಮಾಡಲು ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ. ಒಂದು ಪೊಲೀಸ್ ಠಾಣೆಯಲ್ಲಿ ಸಾವಿರಗಟ್ಟಲೇ FIR ದಾಖಲಾದರೆ ತನಿಖೆ ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಉದ್ಭವಿಸುತ್ತವೆ.

ಮಾಹಿತಿ ಪ್ರಕಾರ ನಗರಕ್ಕೆ ಹೊಂದಿಕೊಂಡಂತೆ 77 ಹಳ್ಳಿಗಳು, 35ಕ್ಕೂ ಹೆಚ್ಚು ಲೇಔಟ್​ಗಳು, 10ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ವಾಸಿಸುವ ಐಷಾರಾಮಿ ಅಪಾರ್ಟ್ಮೆಂಟ್ ಗಳು ಸೇರಿದಂತೆ ಸುಮಾರು 5ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇನ್ನೂ ಪೊಲೀಸ್ ಠಾಣೆ ನಿರ್ಮಾಣ ಮಾಡಲು ನಿರ್ದಿಷ್ಟ ಜನಸಂಖ್ಯೆಯು ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆದಾಗ್ಯೂ, ಭಾರತ ಸರ್ಕಾರವು ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಿದೆ.

ಸಾಮಾನ್ಯವಾಗಿ ಪೊಲೀಸ್ ಠಾಣೆಯು ಒಂದು ಲಕ್ಷದಿಂದ ಐದು ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿರಬಹುದು. ಆದಾಗ್ಯೂ, ನಗರ ಪ್ರದೇಶಗಳಲ್ಲಿ ಜನಸಂಖ್ಯೆಯ ಅಧಾರದ ಮೇಲೆ ಹೊಸ ಹೊಸ ಪೊಲೀಸ್ ಠಾಣೆಯನ್ನ ಮಾನದಂಡಗಳ ಅಧಾರದ ಮೇಲೆ ಕಾರ್ಯರಂಭ ಮಾಡಲಾಗಿದೆ. ಇದರ ಹೊರತುಪಡಿಸಿ ಕರ್ನಾಟಕ ರಾಜ್ಯದಲ್ಲಿ, ಪೊಲೀಸ್ ಠಾಣೆಯು ಸಾಮಾನ್ಯವಾಗಿ ಒಂದು ಲಕ್ಷದಿಂದ ಮಿತಿಮೀರಿ ಮೂರು ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ವರ್ಷಕ್ಕೆ ಇನ್ನೂ ತಿಂಗಳು ಬಾಕಿ ಇರುವಾಗಲೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಒಂದರಲ್ಲಿಯೇ 1006 ಪ್ರಕರಣಗಳು ದಾಖಲಾಗಿದೆ. ಅತಿಹೆಚ್ಚು ವಾಹನ ಕಳವು, ಮನೆಗಳ್ಳತನ, ಕೊಲೆ, ಸುಲಿಗೆ, ಮಿಸ್ಸಿಂಗ್ ಪ್ರಕರಣಗಳೆ ತುಂಬಿತುಳುಕುತ್ತಿವೆ, ಈ ಠಾಣೆಯ ಇನ್ಸ್‌ಪೆಕ್ಟರ್ ಮುರಳೀಧರ್ ದಕ್ಷತೆಯಿಂದ ಕೆಲಸ ನಿರ್ವಹಣೆ ಮಾಡುತ್ತಿದ್ರು ಪ್ರಕರಣಗಳು ಹಚ್ಚಾಗುತ್ತಲೇ ಇವೆ.

ಸಿಬ್ಬಂದಿ ಕೊರತೆ ಮಧ್ಯ ಇಷ್ಟೊಂದು ಪ್ರಮಾಣದಲ್ಲಿ ಎಫ್​ಐಆರ್ ದಾಖಲಾಗಿದ್ದು, ಅವುಗಳನ್ನು ಸಮರ್ಪಕವಾಗಿ, ದಕ್ಷತೆಯಿಂದ. ಪ್ರಾಮಾಣಿಕತೆಯಿಂದ ತನಿಖೆ ಮಾಡಲು ಕಷ್ಟಕರವಾಗಿದೆ. ಹೀಗಾಗಿ ದೂರು ಕೊಟ್ಟವರ ನಂಬಿಕೆಗಷ್ಟೇ FIR ಹಾಕಲಾಗತ್ತೆ ಅನ್ನಿಸುತ್ತಿದೆ. ಎಫ್​ಐಆರ್​ಗಳಿಗೆ ನೊಂದ ದೂರುದಾರರಿಎಗ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು ಅಂದ್ರೆ ಪೊಲೀಸ್ ಠಾಣೆ ಇಬ್ಬಾಗ ಮಾಡಲೇಬೇಕು.

ಇಲ್ಲವೇ ಗೃಹ ಇಲಾಖೆ ಈ ಠಾಣೆಗೆ ಹೆಚ್ಚಿನ ಸಿಬ್ಬಂದಿಯನ್ನ ನೇಮಿಸಬೇಕು. ಇಲ್ಲಿನ ಜನಸಂಖ್ಯೆ ಆಧಾರದಲ್ಲಿ ಎರಡರಿಂದ ಮೂರು ಪೊಲೀಸ್ ಠಾಣೆಯಾಗಿ ಡಿವೈಡ್ ಮಾಡಿದ್ರೆ ಕ್ರೈಂ ರೇಟ್ ಕಡಿಮೆ ಮಾಡಬಹುದು. ಅಲ್ಲದೇ ಅನ್ಯಾಯಕ್ಕೊಳಗಾಗಿ ನ್ಯಾಯಕ್ಕಾಗಿ ಠಾಣೆಗೆ ಬರುವ ನೊಂದವರಿಗೆ ಸೂಕ್ತ ತನಿಖೆ ನಡೆಸಿ ನ್ಯಾಯಕೊಡಿಸಬಹುದು. ಇನ್ನು ನಿಜವಾದ ಅಪರಾಧಿಗಳಿಗೆ ಶಿಕ್ಷೆಗೆ ಗುರಿಪಡಿಸಲು ಸಾಧ್ಯ. ಇಲ್ಲವಾದರೆ ನಿಜವಾದ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ನೊಂದವರು ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತೆ.

ಈ ಠಾಣಾ ವ್ಯಾಪ್ತಿ ಬಗ್ಗೆ ಗೃಹ ಇಲಾಖೆ ಗಮನಹರಿಸಿ ಇದಕ್ಕೊಂದು ಪರಿಹಾರ ಹುಡುಕಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಿದೆ. ಆಗ ಮಾತ್ರ ಜನರು ಕೂಡ ನೆಮ್ಮದಿಯಾಗಿ ವಾಸಮಾಡಲು ಆಗುತ್ತೆ. ಖದೀಮರಿಗೂ ಸಹ ಭಯ ಇರುತ್ತೆ. ಆಗ ಆಟೋಮೆಟಿಕ್ ಕ್ರೈಮ್ ರೇಟ್ ಸಹ ಕಂಟ್ರೋಲ್​ಗೆ ಬರುತ್ತೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:43 pm, Fri, 29 November 24

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!