ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ವದಂತಿ: ಪೋಸ್ಟ್‌ ಆಫೀಸ್‌ ಮುಂದೆ ಜನವೋ ಜನ..!

ಸಿದ್ದರಾಮಯ್ಯ, ಮೋದಿ ಹಣ ಹಾಕ್ತಾರೆಂದು ವದಂತಿ: ಪೋಸ್ಟ್‌ ಆಫೀಸ್‌ ಮುಂದೆ ಜನವೋ ಜನ..!

ರಮೇಶ್ ಬಿ. ಜವಳಗೇರಾ
|

Updated on: Dec 02, 2024 | 4:30 PM

ಡಿಜಿಟಲ್ ಅಕೌಂಟ್ ಇದ್ರೆ ಮೋದಿ ಹಾಗೂ ಸಿದ್ದರಾಮ್ಯಯ ಹಣ ಹಾಕುತ್ತಾರೆ ಎನ್ನುವ ವದಂತಿ ಕಲಬುರಗಿಯಲ್ಲಿ ಹಬ್ಬಿದೆ. ಪರಿಣಾಮ ಸಾವಿರಾರು ಮಹಿಳೆಯರು ಪೋಸ್ಟ್​ ಆಫೀಸ್​ನಲ್ಲಿ ಜಮಾಯಿಸಿದ್ದು, ಡಿಜಿಟಲ್ ಅಕೌಂಟ್ ಮಾಡಿಸಲು ಮುಗಿಬಿದ್ದಿದ್ದಾರೆ.

ಕಲಬುರಗಿ, (ಡಿಸೆಂಬರ್ 02): ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ಸರ್ಕಾರ ಹಣ ಹಾಕುತ್ತೆ ಎಂದು ಜನರು ಅಂಚೆ ಕಚೇರಿಗೆ ಓಡೋಡಿ ಬಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೋದಿ ಮತ್ತು ಸಿದ್ದರಾಮಯ್ಯ ಹಣ ಹಾಕುತ್ತಾರೆಂಬ ವದಂತಿಯನ್ನು ನಂಬಿ ಜನ ಕಲಬುರಗಿಯ ಕೇಂದ್ರ ಅಂಚೆ ಕಚೇರಿಗೆ ಬಂದಿದ್ದು, ಡಿಜಿಟಲ್ ಅಕೌಂಟ್ ತೆರೆಯಲು ಮುಗಿಬಿದ್ದಿದ್ದಾರೆ. ಡಿಜಿಟಲ್ ಅಕೌಂಟ್ ಇದ್ರೆ ಹಣ ಹಾಕುತ್ತಾರೆ ಎನ್ನುವ ವದಂತಿ ಹಬ್ಬಿದೆ. ಇದನ್ನು ನಂಬಿದ ಮಹಿಳೆಯರು ಎದ್ನೋ ಬಿದ್ನೋ ಎಂದು ಪೋಸ್ಟ್​ ಆಫೀಸ್​ಗೆ ತೆರಳಿ ಅಕೌಂಟ್​ ಮಾಡಿಸಲು ಕ್ಯೂ ನಿಂತಿದ್ದಾರೆ.