ತುಮಕೂರು: ಹಣ ನೀಡಲ್ಲ ಎಂದ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ
60 ವರ್ಷದ ನಾಗಮ್ಮ ಹಲ್ಲೆಗೊಳಗಾದ ಮಹಿಳೆ. ಕಳೆದ ಒಂದು ತಿಂಗಳ ಹಿಂದೆ ನಾಗಮ್ಮನ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಕೂಲಿ ನಾಲಿ ಮಾಡಿ ನಾಗಮ್ಮ ಹಣವನ್ನು ಕೂಡಿಟ್ಟಿದ್ದರು. ಬ್ಯಾಂಕ್ನಲ್ಲಿದ್ದ ಹಣವನ್ನ ನೀಡಲಿಲ್ಲ ಅಂತಾ ಮಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ತುಮಕೂರು: ಹಣ ನೀಡಲಿಲ್ಲ ಅಂತ ತಾಯಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತುಮಕೂರು ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ನಡೆದಿದೆ. ವಸಂತ್ಕುಮಾರ್ ಕುಮಾರ್ ಎಂಬಾತ ತನ್ನ ತಾಯಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. 60 ವರ್ಷದ ನಾಗಮ್ಮ ಹಲ್ಲೆಗೊಳಗಾದ ಮಹಿಳೆ. ಕಳೆದ ಒಂದು ತಿಂಗಳ ಹಿಂದೆ ನಾಗಮ್ಮನ ಪತಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಕೂಲಿ ನಾಲಿ ಮಾಡಿ ನಾಗಮ್ಮ ಹಣವನ್ನು ಕೂಡಿಟ್ಟಿದ್ದರು. ಬ್ಯಾಂಕ್ನಲ್ಲಿದ್ದ ಹಣವನ್ನ ನೀಡಲಿಲ್ಲ ಅಂತಾ ಮಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ನಾಗಮ್ಮ ತಲೆಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿಡಿಪಿ ನಾಯಕರ ಬರ್ಬರ ಹತ್ಯೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಗಡಿವೇಮುಲಂ ಮಂಡಲಂ ಪೆಸರವಾಯಿ ಗ್ರಾಮದಲ್ಲಿ ಇಬ್ಬರು ಟಿಡಿಪಿ ನಾಯಕರು ಬರ್ಬರವಾಗಿ ಕೊಲೆಯಾಗಿದ್ದಾರೆ. ವಡ್ಡು ಪ್ರತಾಪರೆಡ್ಡಿ, ನಾಗೇಶ್ವರೆಡ್ಡಿ ಹತ್ಯೆಗೀಡಾದ ಟಿಡಿಪಿ ನಾಯಕರು. ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಸ್ಮಶಾನದಿಂದ ಹಿಂತಿರುಗುವಾಗ ದಾರಿಯಲ್ಲಿ ಅಡ್ಡಗಟ್ಟಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಹತ್ಯೆಗೆ ಹಳೆಯ ದ್ವೇಷವೇ ಕಾರಣ ಎನ್ನಲಾಗಿದೆ. ವಿರೋಧಿ ಬಣದ ದುಷ್ಕರ್ಮಿಗಳಿಂದ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಯುವಕನ ಬರ್ಬರ ಕೊಲೆ ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ 30 ವರ್ಷದ ಯವಕನನ್ನು ಕೊಲೆ ಮಾಡಿದ್ದಾರೆ. ರವಿಕುಮಾರ್ ಗೋಟೂರ್ ಎಂಬಾತ ಹತ್ಯೆಗೀಡಾಗಿದ್ದಾನೆ. 2019ರಲ್ಲಿ ರವಿಕುಮಾರ್ ಯುವತಿ ಹತ್ಯೆ ಕೇಸ್ನಲ್ಲಿ ಜೈಲು ಸೇರಿದ್ದ. ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಜೈಲಿಂದ ಹೊರಬಂದಿದ್ದ. ಆದರೆ ಕಳೆದ ರಾತ್ರಿ ಎರಡು ಗಂಟೆ ಸಮಯದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾನೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ
ದೆಹಲಿ ದಂಗೆ: ಬಿಡುಗಡೆ ಆದೇಶ ಮುಂದೂಡಿದ್ದರಿಂದ ವಿದ್ಯಾರ್ಥಿ ಹೋರಾಟಗಾರರಿಗಿಲ್ಲ ಬಿಡುಗಡೆ ಭಾಗ್ಯ
ಬ್ರೇಕಿಂಗ್: ಬೆಳಗಾವಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭೀಕರ ರಸ್ತೆ ಅಪಘಾತ
(A son Sliced on his mother for not paying in Tumkur)