ಮದುವೆಗೆ ತೆರಳುತ್ತಿದ್ದ ವಾಹನ ಲಾರಿಗೆ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು; ಮನೆಯೊಂದರ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

| Updated By: ವಿವೇಕ ಬಿರಾದಾರ

Updated on: Jun 19, 2022 | 6:01 PM

ಅಂಕೋಲಾ ತಾಲೂಕಿನ ಹೊನ್ನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಮದುವೆಗೆ ತೆರಳುತ್ತಿದ್ದ ವಾಹನ ಲಾರಿಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಮದುವೆಗೆ ತೆರಳುತ್ತಿದ್ದ ವಾಹನ ಲಾರಿಗೆ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು; ಮನೆಯೊಂದರ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಸಾಂಕೇತಿಕ ಚಿತ್ರ
Follow us on

ದಕ್ಷಿಣ ಕನ್ನಡ: ಜಿಲ್ಲೆಯ ಬೆಳ್ತಂಗಡಿ‌ (Beltangadi) ತಾಲೂಕಿನ ಉಜಿರೆಯ (Ujire) ನಾಗರಾಜ ಅವರ ಕಾಂಪೌಂಡ್ ನ ಬಾವಿಯಲ್ಲಿ (Well) ಅಪರಿಚಿತ ವ್ಯಕ್ತಿಯ ಶವ (Dead Body) ಪತ್ತೆಯಾಗಿದೆ. ಮನೆಯ ಪರಿಸರದಲ್ಲಿ ವಾಸನೆ ಬಂದು ಬಾವಿಯನ್ನು ಪರಿಶೀಲಿಸಿದಾಗ ಶವ ಇರುವುದು ತಿಳಿದು ಬಂದಿದೆ. ಮನೆಯ‌ ಮಾಲೀಕರು ಮೈಸೂರಿನಲ್ಲಿ ನೆಲೆಸಿದ್ದು, ವಾರದ ಹಿಂದೆ ಬಂದು ಬಾವಿಯನ್ನು ಗಮನಿಸಿದ್ದರು. ಈ ವೇಳೆ ಮೃತ ದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು. ಇಂದು ವಾಪಾಸು ಬಂದಾಗ ಮೃತದೇಹ ಇರುವುದು ಪತ್ತೆಯಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ. ಅಪರಿಚಿತ ಮೃತದೇಹವನ್ನು ಸ್ಥಳೀಯರ ಸಹಕಾರದಿಂದ ಪೊಲೀಸರು ಮೇಲಕೆತ್ತಿದ್ದಾರೆ.

ಮದುವೆಗೆ ತೆರಳುತ್ತಿದ್ದ ವಾಹನ ಲಾರಿಗೆ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು

ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾ  ತಾಲೂಕಿನ ಹೊನ್ನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ  63 ರಲ್ಲಿ ಮದುವೆಗೆ ತೆರಳುತ್ತಿದ್ದ ವಾಹನ ಲಾರಿಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಓರ್ವ ಮಹಿಳೆ  ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಅಂಕೋಲಾ ತಾಲೂಕಿನ ಮಾದನಗೇರಿಯಲ್ಲಿ ನಡೆಯುತ್ತಿದ್ದ ಸಂಭಂದಿಕರ ಮದುವೆಗೆ  ತೆರಳುತ್ತಿದ್ದರು.

ಇದನ್ನು ಓದಿ: ಹಾಸನ: ಕ್ಯಾಂಟರ್-ಮಾರುತಿ-800 ನಡುವೆ ಭೀಕರ ರಸ್ತೆ ಅಪಘಾತ: ತಂದೆ ಮಗ ಸೇರಿ ಮೂವರು ದಾರುಣ ಸಾವು

ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ಕಮ್ಮಸಂದ್ರ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ.  ಟ್ರಕ್ ಪಲ್ಟಿಯಾದ ಕಾರಣ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅದೃಷ್ಟವಶಾತ್ ಟ್ರಕ್ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ..

ಬೆಂಗಳೂರು: ಕಾರು ಸೈಡ್ಗೆ‌ ನಿಲ್ಲಿಸಿ ಎಂದಿದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಗರದ ಜ್ನಾನದೇವಿ ನಗರದ ಉಲ್ಲಾಳ ರಸ್ತೆಯಲ್ಲಿ ನಡೆದಿದೆ. ಲಕ್ಷೀಪತಿ ಹಲ್ಲೆಗೊಳಗಾದ ಯುವಕ. ಸತೀಶ್ ಮನೆಯವರು ಥಳಿಸಿದ್ದಾರೆಂದು ಆರೋಪ ಕೇಳಿಬಂದಿದೆ.  ಲಕ್ಷೀಪತಿ‌ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರು, ಈ ವೇಳೆ ಕ್ರಾಸಿಂಗ್ ಒಂದರಲ್ಲಿ ಬುಲೆರೋ ಕಾರು ಇದ್ದಿದ್ದರಂದ ಲಕ್ಷೀಪತಿಯವರಿಗೆ ಹೋಗೋದಕ್ಕೆ ಆಗಲಿಲ್ಲ. ಆಗ ಬುಲೇರೋ ಕಾರು ತೆಗೆಯಲು ಮಾಲೀಕರಿಗೆ ಹೇಳಿದ್ದಾರೆ.

ಇದನ್ನು ಓದಿ: ಬೆಳಗಾವಿಯಲ್ಲಿ ದೇವಸ್ಥಾನ ಜಾಗದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ: ಓರ್ವನ ಹತ್ಯೆ,

ಈ ವೇಳೆ ಸತೀಶ್ ಮತ್ತು ಕುಟುಂಬಸ್ಥರು ಒಂದೇ ಸಲ ಏಳರಿಂದ ಎಂಟು ಜನರು ಲಕ್ಷ್ಮಿಪತಿಗೆ ರಕ್ತ ಬರುವಂತೆ  ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷೀಪತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜ್ಞಾನಭಾರತಿ ಪೊಲೀಸ್ ಠಾಣೆಗೆ ಹಲ್ಲೆಗೊಳಗಾದವರ ಕುಟುಂಬಸ್ಥರು ದೂರು ನೀಡಿದ್ದಾರೆ.

ಗುಡುಸಲಿಗೆ ಬುಲೇರೋ ವಾಹನ ಡಿಕ್ಕಿಯಾಗಿದ್ದಕ್ಕೆ ಗಲಾಟೆ

ಕೋಲಾರ: ಗುಡಿಸಲಿಗೆ ಬೊಲೇರೋ ವಾಹನ ಡಿಕ್ಕಿಯಾಗಿದ್ದಕ್ಕೆ ಪ್ರಶ್ನೆ ಮಾಡಿದ್ದ ಶಿವಪ್ಪ ಹಾಗೂ ಆತನ ಮಗನ ಮೇಲೆ ಹಲ್ಲೆ ಮಾಡಿರುವ ಘಟನೆ ಶ್ರೀನಿವಾಸಪುರದ ಮಾವು ಮಾರುಕಟ್ಟೆಯಲ್ಲಿ ನಡೆದಿದೆ. ಶಿವಪ್ಪ ಹಾಗೂ ಆತನ ಮಗ ಶೌಚಾಲಯ ನಿರ್ವಹಣೆ ಮಾಡುತ್ತಿರುವ ವೇಳೆ AAK ಮಂಡಿ ಮಾಲೀಕ ಶಬ್ರೇಜ್​ ಖಾನ್​ಗೆ ಸೇರಿದ ಬೋಲೇರೊ ವಾಹನ ಗುಡಿಸಲಿಗೆ ಡಿಕ್ಕಿಯಾಗಿತ್ತು. ಆಗ ಶಿವಪ್ಪ ಹಾಗೂ ಆತನ ಮಗ ಪ್ರಶ್ನಿಸಿದ್ದಕ್ಕೆ ಶಬ್ರೇಜ್ ಖಾನ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.