ಕೇಂದ್ರ ಸರ್ಕಾರದ ಯೋಜನೆ ಆರ್ಎಸ್ಎಸ್ ‘ಅಗ್ನಿಪಥ್’; 4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸ್ತೀರಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ -ಹೆಚ್ಡಿಕೆ ಗರಂ
4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸ್ತೀರಿ. ನಾಲ್ಕು ವರ್ಷದಲ್ಲಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ? ಯಾರು ಈ ಹತ್ತು ಲಕ್ಷ ಆಯ್ಕೆಯಾಗುವವರು? ಇವರನ್ನ ಆಯ್ಕೆ ಮಾಡುವವರು ಯಾರು? RSS ಮುಖಂಡರು ಇವರನ್ನ ಆಯ್ಕೆ ಮಾಡುತ್ತಾರೋ?
ಬೆಂಗಳೂರು: ಅಗ್ನಿಪಥ್ ಯೋಜನೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ(Agnipath Scheme) ಹೆಚ್ಡಿ ಕುಮಾರಸ್ವಾಮಿ(HD Kumaraswamy) ಗರಂ ಆಗಿದ್ದಾರೆ. ಇದು ಆರ್ಎಸ್ಎಸ್ನ(RSS) ‘ಅಗ್ನಿಪಥ್’ ಎಂದು ಗರಂ ಆಗಿದ್ದಾರೆ. ಈ ಹೊಸ ಕಾನ್ಸೆಪ್ಟ್ ಮಾಡಬೇಕೆಂದು ಹೇಳಿದ್ದು ಯಾರು? ಇವರಿಗೆ ಬುದ್ಧಿ ಹೇಳಿದ್ದು ಯಾರು ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ. ಸಂಸತ್ ಸದಸ್ಯರ ಕಮಿಟಿಯಿಂದ ಶಿಫಾರಸು ಆಗಿದೆಯಾ? ಸೇನಾ ವಿಭಾಗದಿಂದ ಯಾರಾದರೂ ಸಲಹೆ ಕೊಟ್ಟಿದ್ದಾರಾ? ಯಾರು ಈ ಬಗ್ಗೆ ಸಲಹೆ ಕೊಟ್ಟಿರೋದು ಎಂದು ಪ್ರಶ್ನಿಸಿದ್ದಾರೆ.
4 ವರ್ಷದ ಬಳಿಕ ಶೇ.75ರಷ್ಟು ಜನರನ್ನ ಹೊರ ಕಳುಹಿಸ್ತೀರಿ. ನಾಲ್ಕು ವರ್ಷದಲ್ಲಿ ಅವರಿಂದ ಏನು ಕೆಲಸ ಮಾಡಿಸುತ್ತೀರಿ? ಯಾರು ಈ ಹತ್ತು ಲಕ್ಷ ಆಯ್ಕೆಯಾಗುವವರು? ಇವರನ್ನ ಆಯ್ಕೆ ಮಾಡುವವರು ಯಾರು? RSS ಮುಖಂಡರು ಇವರನ್ನ ಆಯ್ಕೆ ಮಾಡುತ್ತಾರೋ? ಇಲ್ಲ ಆರ್ಮಿಯವರು ಆಯ್ಕೆ ಮಾಡುತ್ತಾರೋ. RSS ಕವಾಯತ್ ಮಾಡಿರುವ ಟೀಂ ಇದೆಯಲ್ಲ. ಅವರನ್ನ ಸೇನೆಗೆ ತುಂಬಿ 2.5 ಲಕ್ಷ ಜನರನ್ನ ಸೆಟಪ್ ಮಾಡಿ. ನಾಜೀ ಸಾಮ್ರಾಜ್ಯ ಇದ್ದಾಗಲೇ RSS ಉದ್ಭವ ಆಗಿರೋದು. ನಾಜೀ ಸಾಮ್ರಾಜ್ಯ ಜಾರಿಗೆ ತರಲು ಅಗ್ನಿವೀರರ ತಯಾರಿ ಮಾಡಿ. ಇದು ಆರ್ಎಸ್ಎಸ್ನ ‘ಅಗ್ನಿಪಥ್’ ಎಂದು HDK ಕೆಂಡಕಾರಿದ್ದಾರೆ. ಇದನ್ನೂ ಓದಿ: Agnipath Scheme: ಅಗ್ನಿಪಥ್ ವಿರುದ್ಧ ಪ್ರತಿಭಟನೆ ಮಾಡುವವರು ಸೇನೆಗೆ ಸೇರ ಬಯಸುವವರಲ್ಲ: ಬಿಸಿ ಪಾಟೀಲ್
ಚನ್ನಪಟ್ಟಣ ಕ್ಷೇತ್ರಬಿಟ್ಟು ಬೇರೆ ಎಲ್ಲೂ ನಿಲ್ಲುವ ಪ್ರಶ್ನೆಯೇ ಇಲ್ಲ ಇನ್ನು ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಹೆಚ್ಡಿಕೆ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಹೆಚ್ಡಿಕೆ, ಚನ್ನಪಟ್ಟಣ ಕ್ಷೇತ್ರಬಿಟ್ಟು ಬೇರೆ ಎಲ್ಲೂ ನಿಲ್ಲುವ ಪ್ರಶ್ನೆಯೇ ಇಲ್ಲ. 2 ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಕಾನೂನು ತರಲು ಹೊರಟಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಕಾನೂನು ತರಲು ಹೊರಟಿದೆ. ಈ ರೀತಿಯ ಕಾನೂನು ತರುವುದು ಒಳ್ಳೆಯದು. ಕಳೆದ ಬಾರಿ ರಾಮನಗರ & ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಚನ್ನಪಟ್ಟಣ ಕ್ಷೇತ್ರದ ಜೊತೆ ಹೆಚ್ಡಿಡಿ ಅವಿನಾಭಾವ ಸಂಬಂಧ ಇದೆ. ಜನರೊಂದಿಗೆ 30 ವರ್ಷದಿಂದ ಅವಿನಾಭಾವ ಸಂಬಂಧವಿತ್ತು. ದೇವೇಗೌಡರು ವಿಪಕ್ಷ ನಾಯಕರು ಆಗಿದ್ದಾಗ ದೊಡ್ಡಮಟ್ಟದ ಹೋರಾಟಕ್ಕೆ ಶಕ್ತಿ ಕೊಟ್ಟಿದ್ದು ಚನ್ನಪಟ್ಟಣ ಕ್ಷೇತ್ರ. ಕಾರ್ಯಕರ್ತರ ಒತ್ತಾಯದ ಮೇರೆಗೆ ನಾನು ಸ್ಪರ್ಧೆ ಮಾಡಿದ್ದೆ. ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ಕೊಡಬೇಕಾದ ಅನಿವಾರ್ಯತೆ ಬಂತು. ಮತದಾರರು ಯಾವ ರೀತಿ ಅಭಿಮಾನ ಇಟ್ಟಿದ್ದಾರೆ ನನಗೆ ಗೊತ್ತಿದೆ. ಮಾಗಡಿ ಜೆಡಿಎಸ್ ಶಾಸಕರು ಮುಂದಿನ ಬಾರಿಯೂ ಗೆಲ್ಲುತ್ತಾರೆ. ಅಲ್ಲಿಗೆ ಹೋಗಿ ನಾನು ಅರ್ಜಿ ಹಾಕುವ ಅನಿವಾರ್ಯ ಬರುವುದಿಲ್ಲ ಎಂದರು. ಜೊತೆಗೆ ರಾಜ್ಯದಲ್ಲಿ ಆಪರೇಷನ್ ಜೆಡಿಎಸ್ ನಡೆಯುತ್ತಿದೆ. ಕೆಲವರು ಹೋಗುತ್ತಾರೆ ಬರುತ್ತಾರೆ, ಅದಕ್ಕೆಲ್ಲ ಗಾಬರಿಯಾಗಲ್ಲ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು. ನನ್ನ ವಿರುದ್ಧ ಏನೇ ಹುನ್ನಾರ ಮಾಡಿದ್ರೂ ಜನ ನನ್ನ ಬೆಳೆಸಿದ್ದಾರೆ. ನನ್ನ ಬಗ್ಗೆ ಮತದಾರರೇ ನೋಡಿಕೊಳ್ಳುತ್ತಾರೆ ಎಂದರು.
ನಮಗೆ ಒಳ ಸಮಸ್ಯೆಯಿಂದ ಸೋತಿದ್ದೇವೆ ರಾಜ್ಯಸಭೆಯಲ್ಲೆ ನಮಗೆ ಇದ್ದಿದ್ದೆ 32 ಮತ. 32ದಲ್ಲಿ ಇಬ್ಬರು ಒಂದು ಕಾಲು ಪಕ್ಷದಿಂದ ಹೊರಗೆ ಇಟ್ಟಿದ್ದರು. ಕಾಂಗ್ರೆಸ್ ಬಿಜೆಪಿಯವರು ಒಳಗೊಳಗೆ ಏನೆನೋ ಆಟ ಆಡಿಕೊಂಡಿದ್ದಾರೆ ಎಲ್ಲ ಗೊತ್ತಿದೆ. ಆಶ್ಚರ್ಯ ಉಂಟು ಮಾಡಿದ ಫಲಿತಾಂಶವಲ್ಲ. ದಕ್ಷಿಣ ಪದವಿಧರರ ಚುನಾವಣೆ ಹಿನ್ನೆಲೆ ನಾನು ಹೋಗಿದ್ದೆ. ಅಲ್ಲಿನ ಪರಿಸ್ಥಿತಿ ಗಮನಿಸಿದ್ದೆ. ಯಾವ ಕಾರಣಕ್ಕೆ ಸೋತಿದ್ದೆವೇ ಎಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ. ನಾವು ಸೋತಿರುವುದು ನಮಗೆ ಮುಖಭಂಗವಲ್ಲ. ನಮಗೆ ಒಳ ಸಮಸ್ಯೆಯಿಂದ ಸೋತಿದ್ದೇವೆ. ಇದಕ್ಕೂ ವಿಧಾನಸಭಾ ಚುನಾವಣೆಗೂ ಸಂಬಂಧವಿಲ್ಲ. ಕರಾವಳಿ ಪ್ರದೇಶದಲ್ಲಿ ಒಬ್ಬರೇ ಎಮ್‌ಎಲ್ ಎ ಇಲ್ಲದಿದ್ದರು ಬೋಜೆಗೌಡರು ಗೆದ್ದರು. ಆದರೆ ಆನಂತರ ಅಲ್ಲಿ ಎಲ್ಲ ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಹೇಳಲು ಸಾಧ್ಯವೇ. ಎಮ್ಎಲ್ಸಿ ಎಲೆಕ್ಷನ್ಗೂ ಸಾರ್ವತ್ರಿಕ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ನಮಗೆ ಮುಖ್ಯ ಇರೋದು ವಿಧಾನಸಭಾ ಚುನಾವಣೆ ಸರ್ಕಾರ ರಚನೆಗೆ ನಮಗೆ ಬೇಕಿರೋದು 123 ಸ್ಥಾನ. ಬರುವ ಆಗಸ್ಟ್ 15 ರಿಂದ ಸುಮಾರು ನಾಲ್ಕು ತಿಂಗಳ ಕಾಲ ಬೆಂಗಳೂರಿಗೆ ಬರಲ್ಲ. ಇಡೀ ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಸೋಲು ನಮ್ಮ ಕುಟುಂಬದಲ್ಲಿ ಸಹಜ. ದೇವೇಗೌಡರು, ರೇವಣ್ಣ, ನಾನು, ನನ್ನ ಮಗ ಸೋತಿದ್ದೇವೆ. 1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಾರ್ಟಿ 60 ಸ್ಥಾನ ಗೆದ್ದಿದ್ದರು. 83 ಚುನಾವಣೆಯಲ್ಲಿ 12 ಶಾಸಕರು ಉಳಿದ್ದಿದ್ದರು. ಜನರ ಆಶೀರ್ವಾದದಿಂದ ಬಿಜೆಪಿ ಕಾಂಗ್ರೆಸ್ ಗಿಂತ ಜೆಡಿಎಸ್ ಹೆಚ್ಚಿನ ಸ್ಥಾನ ಗೆಲ್ಲುತ್ತೆ ಎಂದರು. ಇದನ್ನೂ ಓದಿ: ಕಾರ್ತಿಕ್ ಆಯ್ತು ಇದೀಗ ಮುರಳಿ ವಿಜಯ್; 2 ವರ್ಷಗಳ ನಂತರ ಮತ್ತೆ ಫೀಲ್ಡಿಗಿಳಿದ ತಮಿಳುನಾಡು ಕ್ರಿಕೆಟರ್
ಆಶ್ರಯ ಯೋಜನೆ ನಿವೇಶನಗಳ ಹಂಚಿಕೆಯಲ್ಲಿ ಹಗರಣ ವಿಚಾರಕ್ಕೆ ಸಂಬಂಧಿಸಿ ಬೈರಾಪಟ್ಟಣ ಗ್ರಾಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು ಯಾರ ಕಾಲದಲ್ಲಿ ಆಶ್ರಯ ಯೋಜನೆ ನಿವೇಶನ ಹಂಚಿಕೆ ಆಗಿದ್ದು. 2003ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆಗ ನನಗೂ ಚನ್ನಪಟ್ಟಣ ಕ್ಷೇತ್ರಕ್ಕೂ ಏನು ಸಂಬಂಧವಿತ್ತು. ಯಾವನು ಹಗರಣ ಮಾಡಿದ್ದೇನೆ ಒದ್ದು ಒಳಗೆ ಹಾಕಲಿ. ಯಾವನೋ ಶಾಸಕನಿದ್ದಾನಲ್ಲ ಕೇಳಿ, ನನ್ನನ್ನ ಯಾಕೆ ಕೇಳುತ್ತಿರಿ ಎಂದು ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಐಡಿ ಕೊಡುತ್ತೇನೆ ಎಂದು ನಾಟಕ ಆಡಿದ್ದಾರೆ ಇನ್ನೂ ಕೊಟ್ಟಿಲ್ಲ. ಬಡವರಿಗೆ ತೊಂದರೆ ಆಗುವ ಕೆಲಸ ನಾನು ಮಾಡುವುದಿಲ್ಲ. ಚನ್ನಪಟ್ಟಣ ಜನರ ವಿಚಾರದಲ್ಲಿ ಏನಾದರೂ ಹುಡುಗಾಟ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ. ಚನ್ನಪಟ್ಟಣ ಅಲ್ಲ ಇಡೀ ರಾಜ್ಯದಲ್ಲಿ ಆಗಿರುವ ಲೂಟಿ ಬಗ್ಗೆ 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ತನಿಖೆ ಮಾಡಿಸುತ್ತೇನೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:11 pm, Sun, 19 June 22